ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಯನ್ನು ಊರಲ್ಲೆಲ್ಲ ಹರಡಿದನು, ಕೇಳಿ ಜನವೆಲ್ಲ ತಂಡ ತಂಡವಾಗಿ ಬೆಟ್ಟ ಹತ್ತಿ ಬಂದು ಚೋದ್ಯವನ್ನು ಕಂಡು ಅಂಜಿ ಓಡಿಹೋದರು. ಊರಿಗೆ ಹಿಂದಿರುಗಿ ಮನಸ್ಸಿನಲ್ಲಿ ಅತಿಯಾಗಿ ಭಯಪಡುತ್ತಿದ್ದರು. ಬೇಟೆ ಮುಗಿದ ಮೇಲೆ ಕಣ್ಣ – ತಲೆಯಲ್ಲಿ ಹೂವು, ಬಾಯಲ್ಲಿ ನೀರು, ಕೈಯಲ್ಲಿ ಮಾಂಸದೊಗರ-ಇವನ್ನು ತೆಗೆದುಕೊಂಡು ಗುಡಿಯ ಕಡೆ ಹೊರ ಟನು. ಬರುವಾಗ, “ ಹೊತ್ತು ಹೋಯಿತು ಎನ್ನವನು ಹಸಿದನೋ ಏನೋ ? ಬೇಗ ಬೇಗ ಬರಲಿಲ್ಲವೆಂದು ನನ್ನ ಮೇಲೆ ಕೋಪಿಸುವನೇನೋ ? ಇವ ಶೈಕೋ ಮನಸ್ಸಿನಲ್ಲಿ ತುಂಬ ಮರುಕವಾಗುತ್ತಿದೆ. ಹೀಗೇಕಾಗುತ್ತಿದೆಯೋ ಕಾಣೆ, ಹಸಿದವನನ್ನು ಇವತ್ತು ನಾನೇಕೆ ಬಿಟ್ಟು ಬಂದೆನೋ ? ವಶವಿಲ್ಲದ ಈ ಬೇಟೆಯಲ್ಲಿ ಅನೇಕ ತೊಡಗಿದೆನೋ ? ಮೃಗಗಳೂ ಹಕ್ಕಿಗಳೂ ಗುಂಪು ಕೂಡಿ ನನ್ನ ಪ್ರನನ್ನು ಹೆದರಿಸುತ್ತಿರಬಹುದೆ ? ” ಎಂದು ಹಲವು ಬಗೆಯಾಗಿ ಚಿಂತಿಸುತ್ತಿದ್ದನು. ಹಾಗೆಯೇ ಮುಂದುವರಿದು ಬರುತ್ತಿರಲು ಎಡದ ಭುಜ, ಕಣ್ಣು, ಹುಬ್ಬುಗಳು ಹಾರಿದವು. ಮನಸ್ಸಿಗೆ ಭಯವಾಯಿತು. ಆತಂಕ ಪಡುತ್ತ ಆತುರಾತುರವಾಗಿ ನಡೆದನು. ಈ ದೇವಾಲಯದೊಳಗೆ ಕಾಲಿಟ್ಟ ಕೂಡಲೆ ಶಿವಲಿಂಗದಿಂದ ರಕ್ತಸುರಿ, ಯುವುದು ಕಾಣಿಸಿತು, ಕಂಡು ಕಂಗೆಟ್ಟು ಕಲ್ಲಿನಂತೆ ಮರದಂತೆ ಅಳಾಡದೆ ನಿಂತುಬಿಟ್ಟನು. ಮುಂದೇನು ಮಾಡಬೇಕೆಂದು ಬುದ್ಧಿಗೆ ಹೊಳೆಯ ಲೊಲ್ಲದು, ತಲ್ಲಣಿಸುತ್ತ ಬಿಲ್ಲನ್ನು ಬಿಸುಟು, ಮಾಂಸವನ್ನು ಒಗೆದು, ಬಾಯಲ್ಲಿ ತುಂಬಿಕೊಂಡಿದ್ದ ಅಗ್ಗವಣಿಯನ್ನು ಉಗುಳಿ, ಹೂವನ್ನೂ ಚೆಲ್ಲಿ ಬಿಟ್ಟನು. ಕಣ್ ಕಣ್ ಬಿಡುತ್ತ, ತಲೆ ಚಚ್ಚಿಕೊಳ್ಳುತ್ತ ಹತ್ತಿರ ಹೋದನು. ಆಗ ಒಂದು ಕಷ್ಟೂಡೆದಿರುವುದೂ ಅದರಿಂದ ನೆತ್ತಕೊಸರುತ್ತಿರುವುದೂ ಕಾಣ ಸಿತು, ಕಂಡೊಡನೆ ಕಣ್ಣಪ್ಪ, 1 ಕಟ್ಟೆ ನಾನು, ಕೆಟ್ಟೆ ” ಎಂದು ಚೀರಿದನು. " ಅಯ್ಯೋ ! ನಾನು ನೊಂದೆ ; ಬೆಂದುಹೋದೆ. ಏನೋ ಆಗುವ ಹಾಗೆ ಈ ಪಾಪಿಯ ಮನಸ್ಸಿಗೆ ಮೊದಲೇ ಮುಂದುದೋರಿತ್ತು. ಎನ್ನೊಡೆಯಾ ನಿನ್ನ ಕಣ್ಣು ಒಡೆದರೆ ಹೇಗೆ ನೋಡುತ್ತಿರಲಿ ? ಅಯ್ಯೋ ! ನನ್ನವನ ಹತ್ತಿ ರವೇ ಇದ್ದು ಬಿಡದೆ ಆಗಲಿ ಹೋಗಿ ಕೆಟ್ಟೆನಲ್ಲಾ ! ನನ್ನಂಥ ಕೀಳರೊಡನೆ ನಿನಗೆ ಕೆಳತನವೆ ? ದೊಡ್ಡ ಕಡಲು ಕಿರುಹೊಂಡವೊಂದರ ಕೆಳೆತನ ಮಾಡಿ