ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳೂ ತೊರೆಯೋ ? ಕಾಲರುದ್ರನ ಹಣೆಗಣ್ಣ ಬೆಂಕಿಯೋ, ಕಾಣೆ. ಎಂದು ಕೊಂಡು ಸುಕುಮಾರ ಹೆದರಿದನು. ಹೆದರಿ ಸಾರಥಿಯನ್ನು ಕುರಿತು, “ ಕಣ್ಣುಗಳು ಈ ಪಡೆಗಡಲನ್ನು ಹಾಯಲಾರವು ; ಮನಸ್ಸು ಹೊಕ್ಕು ಈಸಲಾರದು. ಇಂಥ ಪಡೆಯನ್ನು ಎದುರಿಸಿ ಬದುಕಲಾಗುವುದೇ ? ಒಡಲೊ೦ದುಳಿದಿದ್ದರೆ ಮುಂದೆ ಸುಖ ವನ್ನು ಕಾಣಲಾಡೀತು. ನಲವೇ ಪಡೆಗಳನ್ನಿದಿತೋ ಎಂಬಂತೆ ಹರಡಿದೆ ಈ ಸೇನೆ, ಇದರೊಡನೆ ಕಾದುವವನು ಮೃಡನೇ ಆಗಿರಬೇಕು. ನಾವು ಕಾದಿ ಗೆದ್ದದ್ದಾಯಿತು, ಈ ಬಲಕ್ಕೆ ಇಗೋ, ನಮಸ್ಕಾರ ಮಾಡುತ್ತೇನೆ. ಅಯ್ಯಾ ಬೃಹನ್ನಳೇ, ಹಸಿದ ಮಾರಿಯ ಮಂದೆಯೊಳಕ್ಕೆ ನುಸುಳಿ ಬಂದ ಕುರಿಯಂತಾಗಿದ್ದೇನೆ, ಕುದುರೆಗಳನ್ನೊಡಿಸಬೇಡ, ಚಮ್ಮಟಗೆಯನ್ನು ಬಿಸುಟುಬಿಡು. ನನ್ನಿಂದ ಕದನ ಸಾಗದು, ಕೌರವನು ಅಸಮಬಲನಯ್ಯಾ, ರಥವನ್ನು ಹಿಂದಿರುಗಿಸು ಎಂದು ನುಡಿದನು, ಅದನ್ನು ಕೇಳಿ ಅರ್ಜುನ “ ಎಲೆ ಕುಮಾರ, ಇದೇನು, ನೀನು ಹೇಳು ವುದು ? ಮೊದಲ ಮುತ್ತಿನಲ್ಲಿ ಹಲ್ಲು ಮುರಿದಂತಾಯಿತು, ಕಾಳಗ ತೊಡಗು ವುದಕ್ಕೆ ಮೊದಲೆ ಸಮರಭೀತಿಯನ್ನು ತಳೆದೆಯಲ್ಲ ! ಅಳುಕಬಾರದು. ನಿಮ್ಮ ತಂದೆಯ ಕುಲಕ್ಕೆ ಕುಂದು ತರಬೇಡ. • ಮನಸ್ಸಿನಲ್ಲಿ ಗೆಲುವು ತಂದುಕೊ, ಗೆಲುವನದಿಂದ ಕಾದು ” ಎಂದು ಧೈರ್ಯ ಹೇಳುತ್ತ ರಥ ವನ್ನು ಬೇಗ ಬೇಗ ಮುಂಬರಿಸಿದನು. ತೇರು ಮುಂದೆ ಹರಿದಂತೆಲ್ಲ, ಕುರುಬಲದ ಹತ್ತಿರ ಹತ್ತಿರಕ್ಕೆ ನಡೆ ಬಂತಲ್ಲ ಕುಮಾರನಿಗೆ ತನು ಭಾರಯಿಸಿತು ; ಕೂದಲು ನಿಮಿರಿ ನಿಂತಿತು ; ಮೈ ಬಿಸಿಯಾಯಿತು ; ಕೈ ಕಾಲು ನಡುಗಿತು ; ಭಯದ ತಾಪದಿಂದ ನಾಲ ಗೆಯ ನೀರಾರಿ ತುಟಿಯೊಣಗಿಹೋಯಿತು. ಕಣ್ಣೆವೆ ಸೀದು : ಇನ್ನು ನೋಡಲಾರಿ ' ನೆಂದು ಆ ಸುಕುಮಾರ ಕೈಯಿಂದ ಮುಖ ಮುಚ್ಚಿಕೊಂಡು ಬಿಟ್ಟನು. ಮುಖ ಮುಚ್ಚಿಕೊಂಡೇ ಸಾರಥಿಗೆ ಹೀಗೆ ಹೇಳಿದನು : ಇದೇಕೆ, ಸಾರಥೀ, ರಥವನ್ನು ಮುಂದಕ್ಕೆ ನೂಕಿ ನನ್ನ ಗಂಟಲು ಕೊಯ್ಯುತ್ತೀಯೆ? ಅಯ್ಯೋ ! ನಿನಗೇನು ಕಣ್ಣಂಗಿಹೋಯಿತೆ? ನೋಡು ಈ ಮಹಾಬಲವನ್ನು ,