ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುತ ಇದು ದೇವತೆಗಳಿಗೂ ಅಸಾಧ್ಯವಾದ್ದು. ನಿನಗೆ ಎಳ್ಳಷ್ಟೂ ವಿವೇಕವಿಲ್ಲ, ವಾಷೆಯನ್ನು ಬಿಗಿಹಿಡಿ, ಕುದುರೆಗಳನ್ನು ತಿರುಗಿಸು. * ಅರ್ಜುನ ಆ ನುಡಿಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ರಥ ಹತ್ತೆಂಟಲ್ಲಿ ಮುಂದೆ ಹರಿಯಿತು, ಉತ್ತರಕುಮಾರನ ಕೈ ನರ ಬಿಗಿಸಡಿಲಿ ಹಿಡಿದ ಬಿಲ್ಲಂಬು ಗಳು ಬಿದ್ದು ಹೋದವು. ಅಖೆ ಕೊಲೆಗಾರ ಸಾರಥೀ ! ಹಿಡಿ ಕುದುರೆ ಗಳನ್ನು, ಹೀಗೆ ಹೇಳುತ್ತಿರುವ ನಾವು ನಿನಗೆ ಹಗೆಗಳೆ ? ಒಡೆಯರಲ್ಲವೆ ? ಸ್ವಾಮಿದ್ರೋಹಕ್ಕೆ ತೊಡಗಿದೆಯಲ್ಲ. ಲೇಸು, ಲೇಸು ” ಎಂದು ಕೂಗಿದನು. ಅದಕ್ಕೂ ಅರ್ಜುನ ಗಮನ ಕೊಡಲಿಲ್ಲ. ನಗುನಗುತ್ತ ರಥವನ್ನು ಮುಂದೆ ಬಿಟ್ಟನು, ನಾಲ್ಕೆಂಟಡಿ ಹೋಗುವಷ್ಟರಲ್ಲಿ ರಾಜಕುಮಾರನಿಗೆ ದಿಕ್ಕು ತೋಚದಾಯಿತು. ಮುಂಜೆರಗನ್ನು ಸರಿಮಾಡಿ ಕಟ್ಟಿಕೊಂಡು ಮೆಲ್ಲನೆ ರಥದ ಹಿಂದುಗಡೆಗೆ ಬಂದು ನಿಂತು ಕೆಳಕ್ಕೆ ಧುಮುಕಿ, 1 ಬದುಕಿದೆ ” ಎಂದು ಕೊಂಡು, ಮಂಡೆಯ ಕೂದಲು ಬಿಚ್ಚಿ ಹಾರಾಡುತ್ತಿದ್ದರೂ ಲಕ್ಷವಿಲ್ಲದೆ ಟೋಟದಲ್ಲಿ ಓಡಿಹೋದನು. ಕಲಿ ಪಾರ್ಥ ಅದನ್ನು ಕಂಡನು. ಈ ಕೇಡಾಡಿ ಕೂದಲು ಕೆದರಿ ಕೆಟ್ಟೋಡುತ್ತಿದ್ದಾನೆ. ಇವನನ್ನು ಹಿಡಿಯಬೇಕು.” ಎಂದು ನಿಶ್ಚಯಿಸಿ ಕೂಡಲೆ ರಥದಿಂದಿಳಿದು ಸೂಠಿಯಿಂದ ಅವನನ್ನು ಅಟ್ಟಿ ಕೊಂಡು ಹೋದನು. ಕೌರವಸೇನೆ ಇದನ್ನೆಲ್ಲ ಕಂಡು, ಎಲೆಲೇ, ಕಾದ ಬಂದ ನೀರನ ಪರಾಕ್ರಮವನ್ನು ನೋಡು, ನೋಡು !” ಎಂದು ನಗೆಗಡಲಿನಲ್ಲಿ ಮುಳುಗಿ ಬಿಟ್ಟಿತ್ತು, ಅರ್ಜುನನು ಬೆಂಬತ್ತು ವುದನ್ನು ಕಂಡು, 'ಇದಾವನೋ ಬೆಂಬತ್ತಿ ಹೋಗುತ್ತಿದ್ದಾನೆ ; ಸುಭಟನ ಹಾಗೆ ಕಾಣುತ್ತಾನೆ. ಇವನಾವನೋ ತಿಳಿ ಯುವುದಿಲ್ಲ. ಆಕಾರದಲ್ಲಿ ಅರ್ಜುನನನ್ನು ಹೋಲುತ್ತಿದ್ದಾನೆ ?” ಎಂದು ಗಜ ಬಜಿಸಿದರು. “ ಈತ ಸಾರಥಿಗಿಂತ ಮೇಲಾದವನು, ಓಡುವವನು ಉತ್ತರ, ಅರ್ಜುನನಿಗೆ ಸಾರಥಿತನ ಎಲ್ಲಿ ಬಂತು ? ನೋಡಿದರೆ ನಪುಂಸಕ ವೇಷ ಬೇರೆ ಕಾಣುತ್ತಿದೆ” ಎಂದು ಕೆಲವರು ತರ್ಕಿಸಿದರು, ಈ ತರ್ಕ ವಿತರ್ಕಗಳನ್ನು ಕೇಳಿ ಕರ್ಣ ಕಡು ಕೋಪದಿಂದ, “ ಈತ ಅರ್ಜುನನಾಗಲಿ, ಇಂದ್ರನಾಗಲಿ, ರಾಮನಾಗಲಿ-ಯಾರೇ ಆಗಲಿ, ಮೇಲೆ ಬಿದ್ದು ಕೆಣಕಿದರೆ ಕತ್ತರಿಸಿ ಹಾಕು ತೇನೆ” ಎಂದು ಗರ್ಜಿಸಿದನು.