ಈ ಪುಟವನ್ನು ಪ್ರಕಟಿಸಲಾಗಿದೆ

೯೪

ಕನ್ನಡಿಗರ ಕರ್ಮಕಥೆ


ಬರುವದರೊಳಗಾಗಿ ರಾಮರಾಜನೂ, ಆತನ ಬಂಧು-ಮಿತ್ರರೂ ತಮ್ಮ ಆನೆಗಳನ್ನಿಳಿದು, ಅರಸನ್ನು ಇದಿರ್ಗೊಂಡು ಕರಕೊಂಡು ಹೋಗುವದಕ್ಕಾಗಿ ಮುಂಗಡ ಬಂದುನಿಂತಿದ್ದರು. ದ್ವಾರದಲ್ಲಿಯೇ ಮಹಾರಾಜರ ಪಾದವಂದನವೂ. ಪ್ರೋಕ್ಷಣವೂ ಆದಮೇಲೆ, ಮುಜುರೆಗಳನ್ನು ಸ್ವೀಕರಿಸುತ್ತ ಮಹಾರಾಜರು ಸಿಂಹಾಸನಾರೂಢರಾದರು. ಆಮೇಲೆ ಬಂದವರ ಯಾದಿಯನ್ನು ಓದ ಹತ್ತಿದರು. ಅವರವರ ಹೆಸರು ಬಂದಬಂದಂತೆ, ಅವರವರು ಎದ್ದು ನಿಂತು ವಿನಯದಿಂದ ಎದ್ದು ನಿಂತು ಅಚ್ಯುತರಾಯನನ್ನು ನಮಿಸಿ ರಾಮರಾಜನ ಅಭಿನಂದನ ಮಾಡುತ್ತಲಿದ್ದರು. ಇದರಂತೆಯೇ ಮುಸಲ್ಮಾನ ಬಾದಶಹರ ವಕೀಲರೂ ಮಾಡಿದರು. ರಾಮರಾಜನು ದರ್ಬಾರದ ಈ ಪರಮವೈಭವವನ್ನು ನೋಡಿ, ಪರಮಾನಂದಪಟ್ಟನು. ಆಮೇಲೆ ಅವರವರ ಮಾನಮರ್ಯಾದೆಗಳಂತೆ ಅವರವರಿಗೆ ಉಡುಗೊರೆಗಳೂ ಕೊಡಲಟವು. ರಾಮರಾಜನ ಮನೋದಯವು ಈ ಕಾಲದಲ್ಲಿ ಪೂರ್ಣವಾಗಿ ಸಫಲವಾಯಿತು. ಅಚ್ಯುತರಾಯನ ಕಾಲದಲ್ಲಿ ವಿಜಯನಗರದ ರಾಯರು ವಿಜಾಪುರದ ಬಾದಶಹನಿಗೆ ಸಣ್ಣಾಗಿ ನಡೆದಾಗ್ಯೂ, ಅವರ ವೈಭವ ಸಾಮರ್ಥ್ಯಗಳು ಯಥಾ ಸ್ಥಿತವಾಗಿರುತ್ತವೆಂತಲೂ, ರಾಮರಾಜನು ಆ ರಾಜ್ಯದ ಪುರಸ್ಕೃತನಾಗಿರುವತನಕ, ಅವು ಅಭಿವೃದ್ದಿಯಾಗುತ್ತ ಹೋಗುವದರಲ್ಲಿ ಸಂಶಯವಿಲ್ಲೆಂತಲೂ, ಮುಸಲ್ಮಾನ ಬಾದಶಹರ ವಕೀಲರೇ ಮೊದಲಾದವರು ತಿಳಿಕೊಂಡರು. ದರ್ಬಾರದ ಈ ಎಲ್ಲ ಪ್ರಕಾರವನ್ನು ನೋಡಿ ಮುಸಲ್ಮಾನ ವಕೀಲರು ಚಕಿತರಾಗಿ, ರಾಮರಾಜನ ಅಳಿಕೆಯ ಕಾಲದಲ್ಲಿಯಂತು ತಮ್ಮ ಬೇಳೆಯು ಬೇಯಲಿಕ್ಕಿಲೆಂದು ತಿಳಿದು, ಅದರಂತೆ ತಮ್ಮ ತಮ್ಮ ಬಾದಶಹರಿಗೆ ತಿಳಿಸಿದರು.

ರಾಮರಾಜನು ವಿಜಯನಗರದ ರಾಜ್ಯದಲ್ಲಿ ವ್ಯವಹರಿಸಿದ ಕಾಲವು ಬಹು ದೀರ್ಘವಾದದ್ದು, ಆತನ ಆಳಿಕೆಯ ಆರಂಭವು ವಿಜಯನಗರ ರಾಜ್ಯದ ಅತ್ಯುತ್ಕರ್ಷದ ಆರಂಭವಾಗಿದ್ದು, ಆತನ ಆಳಿಕೆಯ ಸಮಾಪ್ತಿಯು ಆ ರಾಜ್ಯದ ವಿಧ್ವಂಸದ ಪರಮಾವಧಿಯಾಗಿರುವದು. ಆ ವಿಧ್ವಂಸದ ಬೀಜವನ್ನು ಆತನು ತನ್ನ ತಾರುಣ್ಯದಲ್ಲಿ ಬಿತ್ತಿ, ಅದರ ಘಾತಕಫಲವನ್ನು ವೃದ್ಧಾಪ್ಯದಲ್ಲಿ ಭೋಗಿಸಿದನು. ಆತನ ದೀರ್ಘ ಕಾಲದ ಆಳಿಕೆಯಲ್ಲಿ ಬಾಮನೀರಾಜ್ಯದ ನಾಲ್ಕು ಶಾಖೆಗಳಲ್ಲಿಯೂ ಇಬ್ಬರಿಬ್ಬರಾದರೂ ಬಾದಶಹರು ಆಗಿ ಹೋದರು. ರಾಮರಾಜನ ತಂತ್ರಗಳೂ ಕೃಷ್ಣದೇವರಾಯರ ಮರಣದಿಂದ, ಅಂದರೆ ೧೫೩೦ನೇ ಇಸವಿಯಿಂದ ಆರಂಭವಾದವು. ೧೫೩೦ ರಿಂದ ೧೫೪೩ನೇ ಇಸವಿಯ ವರೆಗಿ ೧೩