ಈ ಪುಟವನ್ನು ಪ್ರಕಟಿಸಲಾಗಿದೆ
೧೫೦
ಕನ್ನಡಿಗರ ಕರ್ಮಕಥೆ

ಒಂದು ಗುಪ್ತ ಸ್ಥಳದಲ್ಲಿ ಪರಮಾನಂದದಿಂದ ಇದ್ದರು. ನಿಮ್ಮ ಹಿರಿಯರು ಕೆಲವು ದಿನ ದಿನಾಲೂ ಆ ಗುಪ್ತ ಸ್ಥಳಕ್ಕೆ ಬರುತ್ತಿದ್ದರು. ಮುಂದೆ ಬರಬರುತ್ತ ನಾಲ್ಕು ದಿನಗಳಿಗೊಮ್ಮೆ ಎಂಟು ದಿನಗಳಿಗೊಮ್ಮೆ ಬರ ಹತ್ತಿದರು. ಒಂದುದಿನ ಮಾಸಾಹೇಬರು ನಿದ್ದೆ ಹತ್ತಿ ಮಲಗಿರುವಾಗ, ಅವರ ಬಳಿಯಲ್ಲಿ ನಿಮ್ಮ ಹಿರಿಯರು ಒಂದು ಪತ್ರವನ್ನು ಬರೆದು ಇಟ್ಟು ಹೊರಟು ಹೋದರು. ಅಂದಿನಿಂದ ಇಲ್ಲಿಯವರೆಗೆ ನಿಮ್ಮ ಹಿರಿಯರು ಮಾಸಾಹೇಬರ ಯೋಗಕ್ಷೇಮವನ್ನು ವಿಚಾರಿಸುವದಿಲ್ಲ. ಮಾಸಾಹೇಬರು ಜೀವಿಸಿರುವರೋ, ಸತ್ತಿರುವರೋ ಎಂಬ ಸುದ್ದಿಯನ್ನು ಸಹ ಅವರು ಕೇಳಿಕೊಂಡಿರುವದಿಲ್ಲ. ಇದಕ್ಕೂ ಹೆಚ್ಚಿಗೆ ನಾನು ಹೇಳಲಾರೆನು, ನಿಮ್ಮ ತಂದೆಯ ಹೆಸರನ್ನು ಮಾತ್ರ ನೀವು ಕೇಳಬೇಡಿರಿ. ಈಸಂಗತಿಯು ಮಾಸಾಹೆಬರಿಗೇ ಮತ್ತು ನನಗೆ ಅಲ್ಲದೆ ಬೇರೆ ಮತ್ತೊಬ್ಬರಿಗೆ ಗೊತ್ತಿಲ್ಲ, ಅದನ್ನು ಇಂದೇ ನಿಮ್ಮ ಮುಂದೆ ಮಾತ್ರ ಹೇಳಿದ್ದೇನೆ. ನಾನು ನಿಮ್ಮ ತಂದೆಯ ಹೆಸರನ್ನು ಗುಪ್ತವಾಗಿಡುವದರಿಂದ ಅದರಲ್ಲೇನಾದರೂ ಮನಸ್ಸಿಗೆ ಹತ್ತುವ ಪ್ರಸಂಗವಿದ್ದೀತೆಂದು ನಿಮಗೆ ತೋರಬಹುದು; ಆದರೆ ಹಾಗೆ ತೋರಗೊಡಬೇಡಿರಿ. ಎಲ್ಲಿಯವರೆಗೆ ನಿಮ್ಮ ಹಿರಿಯರು ನಿಮ್ಮಬ್ಬರನ್ನು ತಾವಾಗಿ ಕರೆಸಿಕೊಳ್ಳುವದಿಲ್ಲವೋ, ಅಲ್ಲಿಯವರೆಗೆ ನಿಮ್ಮ ಹಿರಿಯರಿಗೆ ತಮ್ಮ ವೃತ್ತಾಂತವನ್ನು ತಿಳಿಸಬಾರದೆಂದು ಮಾಸಾಹೇಬರು ಈ ಮೊದಲೇ ನಿಶ್ಚಯಿಸಿದರು. ನಿಮ್ಮ ಶೌರ್ಯಪಭಾವವು ನಿಮ್ಮ ಹಿರಿಯರಿಗೆ ತಿಳಿಯಬಂದ ದಿವಸವೇ ಮಾಸಾಹೇಬರು ಅವರ ಪರಿಚಯವನ್ನು ನಿಮಗೆ ಮಾಡಿ ಕೊಡುವರು. ಬರೇ ಪರಿಚಯವಷ್ಟೇ ಏಕೆ, ಅವರನ್ನು ನಿಮಗೆ ಪ್ರತ್ಯಕ್ಷವಾಗಿ ತೋರಿಸುವರು. ಅಲ್ಲಿಯವರೆಗೆ ಸಂಪೂರ್ಣ ವೃತ್ತಾಂತವನ್ನು ಬೇರೆಯವರಿಗೂ ತಿಳಿಸಲಿಕ್ಕಿಲ್ಲೆಂದು ಹಿಂದಕ್ಕೆ ಮಾಸಾಹೇಬರು ಪ್ರತಿಜ್ಞೆ ಮಾಡಿರುವರು. ಅವರು ನಿಮ್ಮ ಸಲುವಾಗಿ ಎಷ್ಟು ಕಷ್ಟಪಟ್ಟಿರುವರೆಂಬುದನ್ನೂ, ಆವರು ತಮ್ಮ ಗೌರವಕ್ಕೆ ಬಾಧೆ ಬಾರದಂತೆ ಇಲ್ಲಿಯವರೆಗೆ ಕಷ್ಟದಿಂದ ಹ್ಯಾಗೆ ಕಾಲಹರಣ ಮಾಡಿದರೆಂಬದನ್ನೂ ನಾನು ಪೂರಾಬಲ್ಲೆನು. ನಿಮಗಾದರೂ ಬಹು ಮಟ್ಟಿಗೆ ಅದು ಗೊತ್ತಿರುತ್ತದೆ. ಅಂದಬಳಿಕ ಇದಕ್ಕೂ ಹೆಚ್ಚಿಗೆ ನಾನೇನು ಹೇಳಲಿ ? ಇಷ್ಟರಿಂದಲೇ ನೀವು ಸಮಾಧಾನಪಡತಕ್ಕದು” ಎಂದು ಹೇಳಿ ಆಕೆಯು ಕಣ್ಣೀರು ಸುರಿಸಹತ್ತಿದಳು.

ಲೈಲಿಯು ಹೇಳುವ ಈ ವೃತ್ತಾಂತವನ್ನು ರಣಮಸ್ತಖಾನನು ತಟಸ್ಥ ವೃತ್ತಿಯಿಂದ ಕೇಳುತ್ತ ಕುಳಿತಿದ್ದನು. ತನ್ನ ತಂದೆಯು ತನ್ನ ತಾಯಿಯನ್ನು ನಿಷ್ಕಾರಣವಾಗಿ ಬಿಟ್ಟ ರೀತಿಯನ್ನು ಕೇಳಿ, ನಡುವೆ ಒಂದೆರಡು ಸಾರೆ