ಈ ಪುಟವನ್ನು ಪ್ರಕಟಿಸಲಾಗಿದೆ

ಕಡೆಯ ಉಪಾಯ
೧೯೫

ಗರೀಬ ಪರವರ, ಮಾಲೀಕಸಾಹೇಬರು ತಮಗೆ ಹೇಳಿದ ಮಾತನ್ನು-ಕಟ್ಟ ಕಡೆಯ ಮಾತನ್ನು ಯಾವ ಮೋರೆಯಿಂದ ನಾನು ತಮ್ಮ ಮುಂದೆ ಹೇಳಲಿ ?

ಮಾಸಾಹೇಬ-(ಕೂಡಲೆ ಗಾಬರಿಯಾಗಿ) ಕಡೆಯ ಮಾತು! ಎಲಾ ! ನಮ್ಮ ರಣಮಸ್ತಖಾನನು ನೆಟ್ಟಗಿದ್ದಾನಷ್ಟೇ ? ಕಡೆಯ ಮಾತು ಎಂದು ಹೇಳುವೆಯಲ್ಲ ? ಹಾಗೆಂದರೇನು ? ಹೇಳು ಮೊದಲು ಆತನು ಸುರಕ್ಷಿತವಾಗಿ ಇದ್ದಾನೆಯೋ ಇಲ್ಲವೋ ಹೇಳು, ಆಮೇಲೆ ಮುಂದಿನ ಮಾತು.

ಕರೀಮ-ಹೊ ಹೊ ! ಮಾಸಾಹೇಬ, ಅವರು ಸುರಕ್ಷಿತವಾಗಿದ್ದಾರೆ; ಚಕ್ಕಂದದಿಂದ ಇದ್ದಾರೆ; ಆನಂದದಿಂದ ಇದ್ದಾರೆ; ಆದರೆ ಪುನಃ ಅವರು ತಮ್ಮ ಕಣ್ಣಿಗೆ ಮಾತ್ರ ಬೀಳಲಾರರು.

ಮಾಸಾಹೇಬ-ಎಲ್ಲಿರುತ್ತಾನೆ ? ಅದನ್ನು ಮೊದಲು ನನಗೆ ಹೇಳು.

ಕರೀಮ-ಆಗಲೇ ಅವರು ರಾಮರಾಜನ ಸಂಗಡ ವಿಜಯನಗರಕ್ಕೆ ಹೋದರು, ನಾನು ತಮ್ಮ ಅಪ್ಪಣೆಯಂತೆ ತಿರುಮಲನ ಧರ್ಮಶಾಲೆಗೆ ಮುಂಗಡ ಹೋಗಿ ಅವರ ಹಾದಿಯನ್ನು ನೋಡುತ್ತ ಕುಳಿತುಕೊಂಡೆನು. ಮೊದಲು ನನ್ನನ್ನು ರಣಮಸ್ತಖಾನರೇ ಮುಂದೆ ಕಳಿಸಿದ್ದಾರೆ. ಹಿಂದಿನಿಂದ ಅವರು ಬರುವರು” ಎಂದು ಹೇಳಿದೆನು. ನಾನು ಸುಮ್ಮನೆ ಒಂದು ಹಳ್ಳು ಒಗೆದು ನೋಡಬೇಕೆಂದು ಮಾಡಿದೆನು; ಆದರೆ ಅಷ್ಟರಿಂದ ನನ್ನ ಕೆಲಸವೇ ಆಯಿತು. ನನ್ನ ಮಾತನ್ನು ಕೇಳಿದಕೂಡಲೇ ಅವರು ನನ್ನನ್ನು ಒಳ್ಳೆ ಮರ್ಯಾದೆಯಿಂದ ಆದರ ಪೂರ್ವಕವಾಗಿ ನಡಿಸಿಕೊಳ್ಳಹತ್ತಿದರು. ಆಗ ನಾನು ನನಗೆಲ್ಲ ಗೊತ್ತಿರುವದೆಂಬದನ್ನು ತೋರಿಸುವ ಉದ್ದೇಶದಿಂದ ಅವರನ್ನು ಕುರಿತು- “ರಾಮರಾಜರು ಯಾವಾಗ ಬರುತ್ತಾರೆ ! ನಿನ್ನೆ ಬಂದ ಹೊತ್ತಿಗೇ ಬರುವರೋ ?” ಎಂದು ಸುಮ್ಮನೆ ಕೇಳಿ ನೋಡಿದೆನು. ಕೂಡಲೇ ಆ ಕಾವಲುಗಾರರ ಮುಖ್ಯಸ್ಥನು ನನ್ನನು ಕುರಿತು- “ಬರುತ್ತೇವೆಂದು ಹೇಳಿಯಂತು ಕಳಿಸಿದ್ದಾರೆಂದು ಹೇಳಿದನು. ನಾನು ಒಗೆದ ಎರಡು ಹಳ್ಳುಗಳಿಂದಲೂ ಕಾರ್ಯವು ಚೆನ್ನಾಗಿ ಸಾಧಿಸಿತು. ಆಮೇಲೆ ನಾನು ಅವರೊಳಗೆ ಬೆರೆತುಕೊಂಡು ತಂಬಾಕದ ಝರಕೆಗಳ ಮೇಲೆ ಝರಕೆಗಳನ್ನು ಹೊಡೆಯಹತ್ತಿದೆನು. ಅಷ್ಟರಲ್ಲಿ ರಾಮರಾಜರು ಬಂದರೆಂಬ ಸುದ್ದಿಯು ಬಂದಿತು. ಆಗ ಕಾವಲುಗಾರರು ಗಡಬಡಿಸಿ ಓಡಹತ್ತಿದರು. ರಾಮರಾಜನು ಕಾವಲುಗಾರರನ್ನು ಏನೋ ಅವರ ಮಾತಿನಿಂದ ಕೇಳಲು, ಆ ಕಾವಲುಗಾರರ ಮುಖ್ಯಸ್ಥನು ನನ್ನ ಕಡೆಗೆ ಬೆರಳುಮಾಡಿ ಏನೋ ಹೇಳಿದನು. ಆಗ ರಾಮರಾಜರು ಅತ್ಯಂತ ತೀಕ್ಷ್ಣ ದೃಷ್ಟಿಯಿಂದ ನನ್ನನ್ನು ನೋಡಹತ್ತಿದರು. ನಾನು ಸ್ಪಷ್ಟವಾಗಿ ಕುಳಿತಿದ್ದೆನು. ಆಗ