ಈ ಪುಟವನ್ನು ಪ್ರಕಟಿಸಲಾಗಿದೆ

೨೬೨

ಕನ್ನಡಿಗರ ಕರ್ಮಕಥೆ

ಅವರ ಸೈನ್ಯವು ಬೇಗನೆ ಆಚೆಯ ದಂಡೆಯನ್ನು ಕಂಡಿತು. ಸೈನಿಕರು ನವೀನ ಸೇತುವೆಯನ್ನೂ ಉಪಯೋಗಿಸಿದರು. ರಾಮರಾಜನ ಈ ಸೈನ್ಯದ ಚಲನವಲನವು ಈ ಮೊದಲೆ ವಿಜಾಪುರದ ಅವರು ಆದಿಲಶಹನಿಗೂ, ಮಹಮ್ಮದನಗರದ ಹುಸೇನ ನಿಜಾಮಶಹನಿಗೂ ಗೊತ್ತಾದದ್ದರಿಂದ, ಆದರೂ ತಮ್ಮ ಸೈನ್ಯವನ್ನು ಒಮ್ಮೆಲೆ ಒಟ್ಟುಗೂಡಿಸಿ ಮಾಡತಕ್ಕ ವ್ಯವಸ್ಥೆಯನ್ನು ಮಾಡಿದರು. ಈ ಪ್ರಚಂಡ ಸೈನ್ಯವು ತಮ್ಮ ಮೇಲೆ ಅಕಸ್ಮಾತ್ ಸಾಗಿಬರುವದನ್ನು ನೋಡಿ, ತಾವು ಅಂಜಿ ಹಿಂದಕ್ಕೆ ಸರಿಯುವಂತೆ ಹೂಯಿಲೆನ್ನೆಬ್ಬಿಸಬೇಕೆಂದು ಮುಸಲ್ಮಾನರು ಮೊದಲೇ ಯೋಚಿಸಿದ್ದರು. ಹಾಗೆ ವಿಜಯನಗರದ ಸೈನಿಕರು ತುಂಗಭದ್ರೆಯನ್ನು ದಾಟಿದ ಕೂಡಲೆ, ಶತ್ರು ಸೈನ್ಯವು ಹಿಂದೆಗೆಯಹತ್ತಿತು. “ತಾವು ಹಿಂದಕ್ಕೆ ಸರಿಯುತ್ತ ಹೋಗಿ, ಹೊಡತಕ್ಕೆ ಅನುಕೂಲವಾದ ಸ್ಥಳವನ್ನು ಮುಟ್ಟಿದ ಕೂಡಲೆ ಹಿಂದಿರುಗಿ ನಿಂತು ಶತ್ರುಗಳ ಮೇಲೆ ಬೀಳಬೇಕು ಆಮೇಲೆ ಆಗುವದು ಆಗಲಿ” ಎಂದು ಮುಸಲ್ಮಾನರು ನಿಶ್ಚಯಿಸಿದ್ದರು. ವಿಜಯನಗರದ ಸೈನ್ಯದ ವಿಷಯವಾಗಿ ಅವರು ನಿರ್ಭಯರಾಗಿದ್ದರೆನ್ನುವ ಹಾಗಿದ್ದಿಲ್ಲ; ಆದರೆ ಅವರು ರಚಿಸಿದ ಕಪಟನಾಟಕದ ಧೈರ್ಯವು ಅವರಿಗೆ ವಿಶೇಷವಾಗಿತ್ತು.

ತಾವು ತುಂಗಭದ್ರೆಯನ್ನು ದಾಟಿ ಮುಂದಕ್ಕೆ ಸಾಗಿ ಹೋದ ಕೂಡಲೆ ಶತ್ರುಗಳ ಓಡಿಹೋಗುತ್ತಿರುವದನ್ನು ನೋಡಿ ರಾಮರಾಜನೂ ಆತನ ಬಂಧುಗಳೂ ಬಹಳ ಹಿಗ್ಗಿದರು. ತಾವು ಮುಂದಕ್ಕೆ ಸಾಗಿ ಬಂದದ್ದು ಬಹಳ ನೆಟ್ಟಗಾಯಿತೆಂದು ಅವರು ಉತ್ಸಾಹಗೊಂಡರು. ಇನ್ನು ಶತ್ರು ಸೈನ್ಯವನ್ನು ಒಂದೇಸಮನೆ ಬೆನ್ನಟ್ಟಿಹೋದರೆ ಕಾರ್ಯವು ಚೆನ್ನಾಗಿ ಸಾಧಿಸುವದೆಂದು ತಿಳಿದು, ಅವರು ತಮ್ಮ ಸೈನಿಕರನ್ನು- “ಎಲೆ ಬೇಟೆಯನ್ನು ಹೊಡೆಯಿರಿ-ಬೇಟೆಯನ್ನು ಹೊಡೆಯಿರಿ. ಜಯ ನರಹರಿ ? ಜಯ ವಿಠ್ಠಲಸ್ವಾಮಿ” ಎಂದು ಜಯಘೋಷ ಮಾಡುತ್ತ ಪೋತ್ಸಾಹಗೊಳಿಸಹತ್ತಿದರು. ಶತ್ರು ಸೈನ್ಯದ ಮೇಲೆ ಬಾಣಗಳವೃಸ್ಟಿಯಾಗಹತ್ತಿತು; ಶತ್ರುಗಳಿಗೆ ಓಡಿಹೋಗಲಿಕ್ಕೆ ಭೂಮಿಯು ಸಾಲಲೊಲ್ಲದೆನ್ನುವ ಹಾಗೆ ತೋರಿತು. ಹೀಗೆ ಶತ್ರುಗಳ ಓಡಿಹೋಗುವ ಸೋಗುಮಾಡಿದ ಹಾಗೆಲ್ಲ ವಿಜಯನಗರದ ದಂಡಾಳುಗಳ ಆನಂದವು ಹೊಟ್ಟೆಯಲ್ಲಿ ಹಿಡಿಸದಾಯಿತು. ಆಗ ರಾಮರಾಜನು ತನ್ನ ಬಳಿಯಲ್ಲಿದ್ದ ರಣಮಸ್ತಖಾನನನ್ನು ಕುರಿತು ಡೌಲಿನಿಂದ - ನಿಮ್ಮ ಮಾತು ಕೇಳಿ ನಾವು ಉತ್ತರದಿಕ್ಕಿನ ತುಂಗಭದ್ರೆಯ ಕಾಳಹೊಳೆಯನ್ನು ಕಾಯುತ್ತ ಕುಳಿತು ಕೊಂಡಿದ್ದರೆ ಹೀಗಾಗುತ್ತಿತ್ತೋ ? ಈಗ ನೋಡು, ಶತ್ರುಸೈನ್ಯವು “ಕಚ್ಚೆಗೊಂದು ಕೈ ಮುಜ್ಜೆಗೊಂದು ಕೈ” ಅನ್ನುವ ಹಾಗೆ ಓಡಹತ್ತಿದೆ ! ಇನ್ನು ಅವರು