ಈ ಪುಟವನ್ನು ಪ್ರಕಟಿಸಲಾಗಿದೆ
೨೬೬
ಕನ್ನಡಿಗರ ಕರ್ಮಕಥೆ

ಬಂದೆನು; ಆದರೆ ನಿನ್ನಿಂದ ಆ ಕೆಲಸವಾಗಲಿಲ್ಲ; ಆದ್ದರಿಂದ ಈಗ ನಾನೇ ಆ ಕೆಲಸಕ್ಕೆ ಕೈ ಹಾಕುತ್ತೇನೆ. ಯಾವತ್ತು ಅಂಜಿಕೆಯನ್ನು ಬಿಟ್ಟು ನಾನು ಆತನನ್ನು ಮಾತಾಡಿಸುವೆನು, ಹೋಗು, ಧನಮಲ್ಲನನ್ನು ಕರಕೊಂಡು ಬಾ, ಎಂದು ಹೇಳಿದಳು. ತನ್ನ ಒಡೆಯಳ ಈ ಮಾತುಗಳನ್ನು ಕೇಳಿ ಮಾರ್ಜಿನೆಯು ಚಕಿತಳಾಗಿ, ಮೆಹೆರಜಾನಳನ್ನು ಎವೆಯಿಕ್ಕದೆ ನೋಡಹತ್ತಿದಳು, ಆಗ ಮೆಹೆರಜಾನಳು ಮತ್ತೆ ಮಾರ್ಜಿನೆಗೆ-ಯಾಕೆ ? ಹೀಗೆ ನನ್ನ ಕಡೆಗೆ ನೋಡುತ್ತೀ ? ಕರಕೊಂಡು ಬಾ ಅವನನ್ನು, ನನ್ನ ಮುಂದೆ ನಿಲ್ಲಸಿ, ನೀನು ಹೋಗು, ಆತನು ನಿಶ್ಚಯವಾಗಿ ನಮಗೆ ಅನುಕೂಲವಾದಾನೆಂದು ನನಗೆ ತೋರುತ್ತದೆ.

ಮಾರ್ಜಿನೆ-(ವಾತ್ಸಲ್ಯದಿಂದ) ತಂಗಿ, ಮೆಹೆರಜಾನ, ಆ ಧನಮಲ್ಲನ ಹೃದಯವು ವಜ್ರಕ್ಕಿಂತ ಕಠಿಣವು, ನೀನು ಎಷ್ಟು ಹೇಳಿಕೊಂಡರೂ ಅದು ದ್ರವಿಸಲಾರದು. ಆತನ ಮನಸ್ಸಿನಲ್ಲಿ ಏನಿರುವದು ಏನಿರುವದಿಲ್ಲೆಂಬದು ಈವರೆಗೆ ಯಾರಿಗಾದರೂ ಗೊತ್ತಾಗಿರುತ್ತದೆಯೋ ?

ಮೆಹೆರಜಾನ-ಮಾರ್ಜಿನೆ, ಅದನ್ನೆಲ್ಲ ನಾನು ಬಲ್ಲೆನು. ಅದರ ಅನುಭವವು ನನಗಿರುವದಿಲ್ಲವೋ ? ಆದರೆ ಇದೊಂದು ಕಡೆಯ ಉಪಾಯವನ್ನಷ್ಟು ಮಾಡಬೇಕೆಂದು ನಾನು ನಿಶ್ಚಯಿಸಿರುತ್ತೇನೆ ! ಸಾಧಿಸದಿದ್ದರೆ, ನಮಗೆ ಇದಕ್ಕೂ ಹೆಚ್ಚಿನ ಕಷ್ಟವೇನು ಒದಗಬೇಕಾಗಿದೆ ? ಸಾಧಿಸಿದರೆ ಇಲ್ಲಿಂದ ಪಾರಾಗಿಯಾದರೂ ಹೋದೆವು. ಈಗ ನೀನು ಹೋಗು, ನನ್ನ ಸಂಗಡ ಚರ್ಚಿಸುತ್ತ ಕುಳಿತುಕೊಳ್ಳಬೇಡ. ಧನಮಲ್ಲನ ಹೆಸರು ಕೇಳಿದರೆ ನನ್ನ ಸರ್ವಾಂಗದಲ್ಲಿ ಕಂಪವು ಉತ್ಪನ್ನವಾಗುತ್ತಿರಲು, ಆತನನ್ನು ಈಗ ಏಕಾಂತದಲ್ಲಿ ಭೇಟಿಯಾಗುತ್ತೇನೆಂದಬಳಿಕ, ನನ್ನ ಮನಸ್ಸು ಎಷ್ಟು ಕಲ್ಲಾಗಿರುತ್ತದೆಂಬದನ್ನು ನೀನೇ ತರ್ಕಿಸು, ಹೋಗು-ಹೋಗು, ಜೀವದ ಹಂಗು ಬಿಟ್ಟವರಿಗೆ ಯಾವ ಕೆಲಸ ಮಾಡುವದು ತಾನೆ ಕಠಿಣವು ! ಹೋಗು, ಆಲೋಚಿಸುತ್ತ ಕುಳಿತುಕೊಳ್ಳಬೇಡ. ಇಲ್ಲದಿದ್ದರೆ ನಾನೇ ಅವನ ಬಳಿಗೆ ಹೋಗುತ್ತೇನೆ.

ಹೀಗೆ ನುಡಿದು ಮೆಹೆರ್ಜಾನಳು ಮೇಲಕ್ಕೆ ಎದ್ದುಬಿಟ್ಟಳು. ಇದನ್ನು ನೋಡಿ ಮಾರ್ಜಿನೆಯು, ಇಂದಿನ ಪ್ರಸಂಗವು ವಿಲಕ್ಷಣವಾಗಿ ತೋರುತ್ತದೆ; ಆದ್ದರಿಂದ ನಾನು ಈ ಹಟ ಹಿಡಿಯುವದು ಯೋಗ್ಯವಲ್ಲೆಂದು ತಿಳಿದು ಆಕೆಯು ಮೇಲಕ್ಕೆದ್ದಳು. ಮಾರ್ಜಿನೆಯು ತಟ್ಟನೆ ಹೋಗಿ ಧನಮಲ್ಲನ್ನನು ಗಟ್ಟಿಯಾಗಿ ಕೂಗಿ ಕರೆದಳು. ಧನಮಲ್ಲನು ಹತ್ತಿರ ಬಂದಕೂಡಲೆ ಆಕೆಯು- “ಧನಮಲ್ಲಾ, ನಿಮಗೆ ಮಾತಾಡಲಿಕ್ಕೆ ಬರುತ್ತದೆಂಬದನ್ನೂ, ನಿನ್ನ ಕಿವಿಗಳು ಕೇಳುತ್ತವೆಂಬದನ್ನೂ ನಾವು ಬಹುದಿವಸದಿಂದ ಬಲ್ಲೆವು. ಆದ್ದರಿಂದ ನೀನು ಈಗ ಈ ಗತ್ತನ್ನು ಬಿಟ್ಟು ಬಿಡು. ಈಗ ಮಾಸಾಹೇಬರು