ಈ ಪುಟವನ್ನು ಪ್ರಕಟಿಸಲಾಗಿದೆ
೨೮೭
ರಣಮಸ್ತನ ಐಂದ್ರಚಾಲವು

ಸಂಗತಿಯನ್ನು ಸನ್ನಿಧಿಗೆ ಅರಿಕೆಮಾಡಿಕೊಂಡಿದ್ದೇನೆ; ಎಂದು ನುಡಿಯುತ್ತಿರಲು, ರಣಮಸ್ತನು ನಡುವೆಬಾಯಿಹಾಕಿ-ಎಲಾ, ಇಷ್ಟೇಕೆ ಅಂಜಿಕೆಯೋ ನಿನಗೆ ? ತಮ್ಮ ತಿರುಮಲ-ವೆಂಕಟಾದ್ರಿಗಳ ಸೈನ್ಯವು ಒಳಿತಾಗಿ ಥಳಿಸಿದ್ದರಿಂದ, ಶತ್ರು ಸೈನ್ಯವು ತೇಕುತ್ತ ತಿರುಗಿ ಓಡಿಬರಹತ್ತಿರಬಹುದು; ಇಲ್ಲದಿದ್ದರೆ ಇಷ್ಟುಬೇಗನೆ ಶತ್ರುಸೈನ್ಯವು ತಿರುಗುವದುಂಟೆ ? ಹೋಗು ಇನ್ನೊಮ್ಮೆ ನೆಟ್ಟಗೆ ನೋಡಿಬಂದು ಹೇಳು, ಎಂದು ನುಡಿಯಲು, ವಿನಾಶದ ಪಥವನ್ನು ಹಿಡಿದಿದ್ದ ರಾಮರಾಜನು ರಣಮಸ್ತನ ಮಾತಿಗೆ ಸೋ ಅಂದನು ಆಗ ಚಾರನು ಅಸಮಾಧಾನದಿಂದ ಹೊರಟುಹೋಗಲು, ಮುಂದೆ ಸ್ವಲ್ಪ ಹೊತ್ತಿನಲ್ಲಿ ಮತೊಬ್ಬ ಚಾರನು ಬಹು ದೂರದಿಂದ ರಾಮರಾಜನ ಬಳಿಗೆ ಬಂದು- “ಶತ್ರುಗಳ ಬಹು ಒತ್ತರದಿಂದ ನಮ್ಮ ಮೇಲೆ ಸಾಗಿಬರುತ್ತಿರುವರು” ಎಂದು ಹೇಳಿದನು. ಆ ಮಾತನ್ನೂ ರಾಮರಾಜನು ಸಮಾಧಾನದಿಂದ ಕೇಳಿಕೊಂಡು- “ಶಾಭಾಸ್! ಇದಂತು ಬಹು ಆನಂದದಾಯಕ ಸುದ್ದಿಯು! ಆ ಯವನರು ನಮ್ಮ ಅಳವಿನತಯಂತು ಬರಲಿ ಅವರಿಗೆ ನಮ್ಮ ಕೈ ತೋರಿಸೋಣ. ರಣಮಸ್ತ ನಡೆ. ಸೈನ್ಯವನ್ನು ಸಜ್ಜುಗೊಳಿಸಿ, ವೈರಿಗಳಿಗೆ ಎದುರಾಗಲು ಸಿದ್ಧವಾಗುವದಕ್ಕಾಗಿ ಅದಕ್ಕೆ ಅಪ್ಪಣೆಯನ್ನು ಕೊಡು. ನಾನು ಅರ್ಧಗಳಿಗೆಯೊಳಗಾಗಿ ಪೋಷಾಕು ಹಾಕಿಕೊಂಡು ಸೈನ್ಯದ ಸಿದ್ಧತೆಯನ್ನು ಕಣ್ಣುಮುಟ್ಟನೋಡುವದಕ್ಕಾಗಿ ಬರುತ್ತೇನೆ” ಎಂದು ಹೇಳಿದನು.