ಈ ಪುಟವನ್ನು ಪ್ರಕಟಿಸಲಾಗಿದೆ

ಯುದ್ಧಪ್ರಸಂಗವು

೨೯೬

ಅವರನ್ನು ಸೋಲಿಸಿ, ಅವರನ್ನು ಓಡಿಸಿ ಕೊಂಡು ಹೋಗಿ ವಿಜಾಪುರವನ್ನು ಸೇರದಿದ್ದರೆ, ನಮ್ಮ ಪೌರುಷವೇನು ? ಎಂಬ ಅಭಿಮಾನೋಕ್ತಿಗಳನ್ನು ಆಡುತ್ತ, ತನ್ನ ಯಾವತ್ತೂ ಸೇನಾಪತಿಗಳಿಗೆ ತಳವನ್ನು ಕಿತ್ತಲು ಒತ್ತಾಯದಿಂದ ಆಜ್ಞಾಪಿಸಿದನು. ರಾಮರಾಜನ ಈ ಅಪ್ಪಣೆಗೆ ರಣಮಸ್ತನು ಒಳಿತಾಗಿ ಉತ್ತೇಜನ ಕೊಡುವನು. ಉಳಿದವರು ಪ್ರತಿಬಂಧ ಮಾಡುವರು. ರಾಮರಾಜನು ರಣಮಸ್ತನನ್ನು ಹೊಗಳುವನು; ಸ್ವಾಮಿಭಕ್ತರಾದ ತನ್ನ ಜನರನ್ನು ತಿರಸ್ಕರಿಸುವನು. ಇದರಿಂದ ರಾಮರಾಜನ ನಿಜವಾದ ಹಿತಚಿಂತಕರ ಮನಸುಗಳು ನೊಂದವು. ಅವರು ತಿರುಮಲ-ವೆಂಕಟಾದ್ರಿಗಳು ಬರುವವರೆಗೆ ಮುದ್ಗಲಕೋಟೆಯ ಆಶ್ರಯವನ್ನು ಬಿಟ್ಟು ಮುಂದಕ್ಕೆ ಹೋಗಲಾಗದೆಂದು ನಿಶ್ಚಯಿಸಿದರು; ಆದರೆ ರಾಮರಾಜನು ಮುಂದಕ್ಕೆ ಸಾಗಿಹೋಗಲೇಬೇಕೆಂದು ಒತ್ತಾಯ ಮಾಡಹತ್ತಿದನು. ಆತನು ಹಟಮಾರಿತನ ದುರಭಿಮಾನಗಳ ಮುಂದೆ ಯಾರ ಆಟವೂ ನಡೆಯಲೊಲ್ಲದು. ರಾಮರಾಜನು ತನ್ನ ಸೈನ್ಯದ ತಳವನ್ನೇ ಮೊದಲು ಎಬ್ಬಿಸಿಬಿಟ್ಟಿದ್ದರಿಂದ, ಉಳಿದವರು ನಿರ್ವಾಹವಿಲ್ಲದೆ ಮುಂದಕ್ಕೆ ಸಾಗಬೇಕಾಯಿತು. ವಿನಾಶಕಾಲಕ್ಕೆ ವಿಪರೀತ ಬುದ್ದಿಯೆಂಬ ಮಾತು ಇಲ್ಲಿ ಚೆನ್ನಾಗಿ ವ್ಯಕ್ತವಾಗುವದು.

ರಾಮರಾಜನ ಸೈನ್ಯವು ವಾಯಪುರದ ಬಳಿಯಲ್ಲಿ ಬಂದಿತು. ಶತ್ರುಗಳ ಸೈನ್ಯವೂ ಎದುರಿನಿಂದ ಅಲ್ಲಿಗೆ ಬಂದಿತು, ಎರಡೂ ಸೈನ್ಯಗಳು ಒಂದಕ್ಕೊಂದು ತಾಕಲಾಡಿ ಘನಚಕ್ರದ ಕಾಳಗಕ್ಕೆ ಆರಂಭವಾಯಿತು. ಈ ಯುದ್ಧವಾರ್ತೆಯು ಕೇವಲ ಏಕಪಕ್ಷೀಯ ಯವನರ (ಮುಸಲ್ಮಾನ) ಇತಿಹಾಸಕಾರರಿಂದಲೇ ನಮಗೆ ತಿಳಿದಿರುವದು ದುರ್ದೈವದ ಸಂಗತಿಯು. ಮುಸಲ್ಮಾನ ಇತಿಹಾಸಕಾರರು ಜಯಶಾಲಿಗಳಾದ ಮುಸಲ್ಮಾನರ ಪಕ್ಷವನ್ನೇ ಕಟ್ಟಿ ಹಿಂದೂ ಜನರನ್ನು ನಿರಾಕರಿಸಿ ಬರೆಯುವ ಸಂಭವ ವಿಶೇಷವಾಗಿರುತ್ತದೆ. ಫೇರಿಸ್ತನೆಂಬ ಮುಸಲ್ಮಾನ ಇತಿಹಾಸಕಾರನು ರಾಮರಾಜ ಸೈನ್ಯದ ಸಂಖ್ಯೆಯನ್ನು ಬೇರೆ ಬೇರೆ ಪ್ರಸಂಗಗಳಲ್ಲಿ ಬೇರೆ ಬೇರೆ ವಿಧವಾಗಿ ಕೊಟ್ಟಿರುತ್ತಾನೆ. ಒಂದು ಸ್ಥಳದಲ್ಲಿ ಆತನು ರಾಮರಾಜನ ಸೈನ್ಯದಲ್ಲಿ ೯,೦೦,೦೦೦ ಕಾಲಾಳುಗಳೂ, ೪೫,೦೦೦ ಕುದುರೆ ಸವಾರರೂ, ೨,೯೦೦ ಆನೆಗಳೂ, ೧೫,೦೦೦ ಬೇರೆ ಸೈನಿಕರೂ ಇದ್ದರೆಂದು ಉಲ್ಲೇಖಿಸಿರುವನು. ಈ ಸೈನ್ಯಕ್ಕೆ ಸರಿಯಾಗಿಯೇ ಮುಸಲ್ಮಾನರ ಸೈನ್ಯವಾದರೂ ಇರಬಹುದು. ಮುಸಲ್ಮಾನರ ಸೈನ್ಯವು ಮೂರು ತುಂಡುಗಳಾಗಿ ವಿಭಾಗಿಸಲ್ಪಟ್ಟಿತ್ತು. ಹಿಂದೂಸೈನ್ಯದ ಬಲಗಡೆಯ ಮಗ್ಗಲ ಮೇಲೆ ಸಾಗಿಹೋಗುವದುಕ್ಕಾಗಿ ವಿಜಾಪುರದ ಆದಿಲಶಹನ ಸೈನ್ಯವೂ, ಎಡಗಡೆಯ ಮಗ್ಗಲಿಗೆ ಸಾಗಿಹೋಗುವದಕ್ಕಾಗಿ