ನೂರಜಹಾನಳಿಗೆ ಮಾತ್ರ ರಣಮಸ್ತನು ಫಿತೂರ ಆದದ್ದು ಅಷ್ಟು ವಿಶ್ವಸನೀಯವಾಗಿ ತೋರುತ್ತಿಲ್ಲ, ಆಕೆಯು ಮೆಹೆರ್ಜಾನಳನ್ನು ಕುರಿತು-” ಮಾಸಾಹೇಬ, ನವಾಬಸಾಹೇಬರು ರಾಮರಾಜನನ್ನು ಕೂಡಿ ಕೊಂಡಿದ್ದು ಅವನ ನಾಶಕ್ಕಾಗಿಯೇ ಎಂಬಂತೆ ನನಗೆ ತೋರುತ್ತದೆ. ಕೂಡಿದ ದರ್ಬಾರದಲ್ಲಿ ನನ್ನ ಮಾನಖಂಡನ ಮಾಡಿದ್ದಕ್ಕಾಗಿ ರಣಮಸ್ತಖಾನರು ಘೋರ ಪ್ರತಿಜ್ಞೆಯನ್ನು ಮಾಡಿರಲು, ಅವರು ರಾಮರಾಜನ ನೌಕರರಾಗಿ ಇರಬಹುದೆ ? ಎಂದು ಕೇಳಿದಳು. ಆಕೆಯ ಈ ಪ್ರಶ್ನೆಯು ಮೆಹೆರ್ಜಾನಳಿಗೆ (ಮಾಸಾಹೇಬರಿಗೆ) ವಿಶ್ವಸನೀಯವಾಗಿ ತೋರಲಿಲ್ಲ. ಈ ವಿಷಯವನ್ನು ಕುರಿತು, ಪುಷ್ಕರಣಿಯ ತೀರದಲ್ಲಿ ಅವರ ಸಂಭಾಷಣಗಳು ನಡೆದಿದ್ದವು. ಇತ್ತ ರಣಮಸ್ತನು ಕುಂಜವನವನ್ನು ಪ್ರವೇಶಿಸಿ ನೆಟ್ಟಗೆ ಬಂಗಲೆಗೆ ಬರಲು, ಅಲ್ಲಿ ಮಾರ್ಜೀನೆಯು ಆತನಿಗೆ ಭೆಟ್ಟಿಯಾದಳು. ಆಗ ರಣಮಸ್ತನು ಆಕೆಯನ್ನು ಕುರಿತು
ರಣಮಸ್ತ-ಲೈಲೀ, ನೀನೋಬ್ಬಳೇ ಇಲ್ಲಿ ಯಾಕೆ ? ಮಾಸಾಹೇಬರು ಎಲ್ಲಿ ಇರುತ್ತಾರೆ ? ನೂರಜಹಾನಳು-ನನ್ನ ಅರಗಿಳಿಯು-ಎಲ್ಲಿ ಇರುತ್ತದೆ ? ಇಷ್ಟು ದಿನ ಕಪಟನಾಟಕವನ್ನು ಹೂಡಿ ಸಂಪಾದಿಸಿದ ಯಶಸ್ಸನ್ನು ಕಾಣಿಕೆಯಾಗಿ ಅವರ ಮುಂದೆ ಇಡಲಿಕ್ಕೆ ನಾನು ತಂದಿರುತ್ತೇನೆ, ಹೋಗು, ಒಂದ ಬೆಳ್ಳಿಯ ತಬಕವನ್ನು ತಕ್ಕೊಂಡು ಬಾ, ಕಾಣಿಕೆಯ ವಸ್ತುವನ್ನು ಅದರಲ್ಲಿಟ್ಟು ಅವರ ಮುಂದೆ ಇಡೋಣ.
ಲೈಲಿ-(ಆಶ್ಚರ್ಯದಿಂದ ಮುಂಗಾಣದೆ) ಒಡೆಯರೇ, ನಿಮ್ಮ ಮಾತುಗಳ ಅರ್ಥವು ನನಗೆ ತಿಳಿಯೋಲೊಲ್ಲದು; ಆದರೆ ನೀವು ಹೀಗೆ ರಕ್ತದಿಂದ ಸ್ನಾನಮಾಡಿ ಎಲ್ಲಿಂದ ಬಂದಿರಿ ? ಅದರ ವೃತ್ತಾಂತವಾದರೂ ಏನು ?
ರಣಮಸ್ತ-ಆ ವೃತ್ತಾಂತವನ್ನು ಬೇಗನೆ ಕೇಳಿಕೊಳ್ಳಬೇಕೆಂಬ ಇಚ್ಛೆಯು ನಿನಗೆ ಇದ್ದರೆ, ನನ್ನ ಅರಗಿಳಿಯು ಎಲ್ಲಿ ಇರುತ್ತದೆಂಬದನ್ನು ಹೇಳು. ನನ್ನನ್ನು ಅತ್ತ ಕಡೆಗೆ ಕರಕೊಂಡು ಹೋಗು. ಆ ನೂರಜಹಾನಳು ಎಲ್ಲಿರುತ್ತಾಳೆ ? ಮಾಸಾಹೇಬರು ಎಲ್ಲಿರುತ್ತಾರೆ ?
ಲೈಲಿ-ಅವರಿಬ್ಬರೂ ಅತ್ತ ಆ ಪುಷ್ಕರಣಿಯ ತೀರದಲ್ಲಿ ಹೋಗಿ ಕುಳಿತುಕೊಂಡಿರುತ್ತಾರೆ.
ರಣಮಸ್ತ-ಹೀಗೋ ! ಒತ್ತಟ್ಟಿಗೇ ಅವರಿಬ್ಬರೂ ಇರುವರೇನು ? ಹಾಗಾದರೆ ಬಹಳ ನೆಟ್ಟಗಾಯಿತು ನಾನು ಅತ್ತಕಡೆಗೇ ಹೋಗುತ್ತೇನೆ.
ಹೀಗೆಂದು ರಣಮಸ್ತನು ಕುದುರೆಯಿಂದ ಕೆಳಗೆ ಧುಮುಕಿ, ರಾಮರಾಜನ