- ಸಖಿ ಹೇಹಕೇಶೀ ಮಥನಮುದಾರಂ ರಮಯ ಮಯಾಸ ||
- ಮದನ ಮನೋರಥ ಭಾವಿತಯಾ ಸವಿಕಾರಂ || ಧೃಂ ||
ಹೀಗೆ ಅಕಲ್ಪಿತವಾಗಿ ಕಿವಿಗೆ ಬಿದ್ದ ತರುಣನ ಗಾಯನವನ್ನು ಕೇಳಿದ ಕೂಡಲೇ ಮೆಹರ್ಜಾನಳು ಬೆದರಿದ ಚಿಗರಿಯಂತೆ ನಾಲ್ಕೂ ಕಡೆಗೆ ನೋಡಿದಳು. ಕೂಡಲೇ ಆಕೆಯು ಆನಂದದಿಂದ ಚಪ್ಪಾಳೆ ಬಾರಿಸಿ ಧ್ವಜಸ್ತಂಭಕ್ಕೆ ಕಟ್ಟಿದ್ದ ಕ್ರೀಡಾ ನೌಕೆಯನ್ನು ಬಿಚ್ಚಿ ಅದನ್ನು ಆ ತರುಣನ ಕಡೆಗೆ ಸಾಗಿಸಹತ್ತಿದಳು. ದಂಡೆಗೆ ಮುಟ್ಟುವ ವಿಷಯವಾಗಿ ಆಕೆಯು ಅತ್ಯಂತ ಆತುರಳಾಗಿದ್ದಳು. ನೌಕೆಯ ಹಂಗು ಇಲ್ಲದೆ ಭರ್‍ರನೆ ಹಾಗೂ ದಂಡೆಗೆ ಹೋಗಲಿಕ್ಕೆ ಬರುವ ಹಾಗೆ ಆಕೆಗೆ ರೆಕ್ಕೆಗಳಿರುತ್ತಿದ್ದರೆ, ಆಕೆಯು ಆಗಲೇ ಹಾರಿ ಹೋಗುತ್ತಿದ್ದಳು! ಆದರೆ ಹಾಗೆ ಮಾಡಲು ಶಕ್ಯವಿಲ್ಲದದ್ದರಿಂದ ಆಕೆಯು ಆದಷ್ಟು ಬೇಗನೆ ನೌಕೆಯನ್ನು ನಡೆಸಲೇಬೇಕಾಯಿತು. ಹುಟ್ಟು ಹಾಕುವಾಗ ಆಕೆಯು ತನ್ನ ದೇಹದ ಶ್ರಮವನ್ನು ಲೆಕ್ಕಿಸಲಿಲ್ಲ. ಜೋಲಿ ಹೋಗಿ ಪುಷ್ಕರಣಿಯಲ್ಲಿ ಬಿದ್ದೇನೆಂಬುದರ ಅರಿವು ಸಹ ಆಕೆಗೆ ಉಳಿಯಲಿಲ್ಲ. ಒಂದೆರಡು ಸಾರೆಯಂತೂ ನೌಕೆಯು ಹೊಯ್ದಾಡಲು., ಈ ಸುಂದರಿಯು ಜಲಸಮಾಧಿಯನ್ನು ಹೊಂದವಳೋ ಏನೋ ಎಂಬ ಭಯವು ತರುಣನ ಮನಸ್ಸಿನಲ್ಲಿ ಉತ್ಪನ್ನವಾಯಿತು; ಆದರೆ ಕ್ರೀಡಾ ನೌಕೆಯನ್ನು ನಡೆಸುವ ವಿಷಯದಲ್ಲಿ ಮೆಹರ್ಜಾನಳು ಅತ್ಯಂತ ಚತುರಳಾಗಿದ್ದರಿಂದು ಅಂಥ ಅಪಘಾತವೇನೂ ಆಗದೆ, ನೌಕೆಯು ದಂಡೆಗೆ ಮುಟ್ಟಿದ ಕೂಡಲೇ ಮೆಹರ್ಜಾನಳೂ ಕ್ರೀಡಾ ನೌಕೆಯಿಂದಲೇ ತರುಣನ ಕಡೆಗೆ ಸಾಗರಬಿದ್ದಳು. ಹೀಗೆ ಸಾಗರ ಬೀಳುವ ತರುಣಿಯನ್ನು ಎತ್ತಿಕೊಳ್ಳಲಿಕ್ಕೆ ತರುಣನು ಸಿದ್ದನೇ ಇದ್ದನು. ಆತನು ತರುಣಿಯನ್ನು ಆತುರದಿಂದ ಎತ್ತಿಕೊಂಡು ಪ್ರೇಮದಿಂದ ಚುಂಬಿಸಿದನು. ಅವರಿಬ್ಬರು ತರುಣರು ಒಬ್ಬರನ್ನೊಬ್ಬರು ಮಾತಾಡಿಸಲು ಅತುರಪಡುತ್ತಿದ್ದರೂ ಅವರ ಕೋರಿಕೆಯು ಸಫಲವಾಗಲಿಲ್ಲ. ಕಡೆಗೆ ಆ ತರುಣನು ಮೆಹರ್ಜಾನಲನ್ನು ಕುರಿತು-
ತರುಣ-ನೀನು ಮಂದಿರದಲಿಲ್ಲದಿದ್ದರಿಂದ ಕುಂಜವನದಲ್ಲಿ ಹುಡುಕ ಬೇಕೆಂದು ನಾನು ಹೊರಗೆ ಬರುತ್ತಿರಲು, ನೀನು ಯಾರನ್ನೂ ಸಂಗಡ ಬರಗೊಡದೆ ಒಬ್ಬಳೇ ಪುಷ್ಕರಣಿಗೆ ಹೋಗಿರುವೆಯೆಂದು ಮಾರ್ಜೀನೆಯು ನನ್ನ ಮುಂದೆ ಹೇಳಿದಳು ! ಪ್ರಿಯ ಮೆಹರ್ಜಾನ, ಹೀಗೆ ಅಪರಾತ್ರಿಯಲ್ಲಿ ನೀನು ಒಬ್ಬಳೇ ಪುಷ್ಕರಣಿಗೆ ಬಂದು ಧ್ವಜಸ್ತಂಭದವರಿಗೆ ನೌಕೆಯನ್ನು ಸಾಗಿಸಿಕೊಂಡು ಹೋಗಬಹುದೇ ? ಮಾರ್ಜೀನೆಯು ಕೂಡ ಸಂಗಡ ಬಾರದಷ್ಟು ಮನುಷ್ಯರ ಬೇಸರವು ನಿನಗೆ ಯಾಕೆ ಆಯಿತು ? ನಾನಂತು ಅಂಜುತ್ತಂಜುತ್ತಲೇ ಅಶೋಕವೃಕ್ಷದ