ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಯಾಣ
೩೯

ಅದು ಯಾವದೆಂಬುದನ್ನು ನೀನು ಈಗ ಹೇಳಲೇಬೇಕು. ಆ ಸಂಗತಿಯನ್ನು ಕೇಳಿ ನನ್ನ ಮನಸ್ಸಿಗೆ ಆನಂದವಾದ ಪಕ್ಷದಲ್ಲಿ ನಾನು ನಾಳಿನ ದಿನ ಇಲ್ಲಿಯೇ ಮೆಹರ್ಜಾನಳ ಬಳಿಯಲ್ಲಿಯೇ ಇರುವೆನು. ಹುಂ, ಹೇಳು ಗುಪ್ತ ಸಂಗತಿ ಯಾವದು ಹೇಳು.

ತಾನು ಹೇಳುವ ಗುಪ್ತಮಾತನ್ನು ಕೇಳಿ ರಾಮರಾಜನು ಸಂತೋಷ ಪಟ್ಟು ಈಗಲೇ ವಿಜಯನಗರಕ್ಕೆ ಹೋಗುವದನ್ನು ರಹಿತ ಮಾಡುವನೆಂದು ಮಾರ್ಜೀನೆಯು ತಿಳಿದಿದ್ದಳು. ಆಕೆಯು ರಾಮರಾಜನನ್ನು ಕುರಿತು ಲಜ್ಜೆಯಿಂದ-ಮಹಾರಾಜ, ಮೆಹರ್ಜಾನಳು ಈಗ ನಾಲ್ಕು ತಿಂಗಳು ಗರ್ಭಿಣಿಯಿದ್ದಾಳೆ. ಆಕೆಗೆ ಒಂದೊಂದೇ ಬಯಕೆಗಳು ಆಗ ಹತ್ತಿರುವವು. ಆಕೆಯು ಈ ವರ್ತಮಾನವನ್ನು ತಾನೇ ಬಾಯಿಬಿಟ್ಟು ನಿಮ್ಮ ಮುಂದೆ ಹೇಳಲಾರದೆ, ನನಗೆ ಹೇಳೆಂದು ಹೇಳಿದ್ದಳು; ಆದರೆ ಒತ್ತಾಯದಿಂದ ಆಕೆಯ ಮುಖದಿಂದ ನೀವು ಕೇಳುವದರಿಂದ ನಿಮಗೆ ಬಹಳ ಸಂತೋಷವಾದೀತು, ಎಂದು ಹೇಳಿ ರಾಮರಾಜನ ಭಾವವನ್ನು ತಿಳಿದುಕೊಳ್ಳುವದಕ್ಕಾಗಿ ಆತನ ಮುಖವನ್ನು ನೋಡಹತ್ತಿದಳು ; ಆದರೆ ಈ ಸುದ್ದಿಯನ್ನು ಕೇಳಿ ರಾಮರಾಜನಿಗೆ ಸಂತೋಷವಾಗುವುದರ ಬದಲು ಖೇದವಾದಂತೆ ತೋರಿತು ! ಆತನು ಉಪಚಾರಕ್ಕಾದರೂ ಒಂದು ಒಳ್ಳೆಯ ಮಾತಾಡದೆ, ಅರಗಿನ ಮುದ್ರೆ ಹಾಕಿದ ಎರಡು ಚೀಲಗಳನ್ನು ಮಾರ್ಜೀನೆಯ ಕೈಯಲ್ಲಿ ಕೊಟ್ಟು, ಇವನ್ನು ಮೆಹರ್ಜಾನಳಿಗೆ ಕೊಡೆಂದು ಹೇಳಿ ಮಂದಿರದಿಂದ ಹೊರಬಿದ್ದನು. ಆತನಿಗೆ ಮಂತ್ರಿ ಪದವು ದೊರೆಯುವದಕ್ಕೂ, ಆತನು ಕೃಷ್ಣದೇವರಾಯರ ಅಳಿಯನಾಗುವದಕ್ಕೂ, ಮೆಹೆರ್ಜಾನಳೂ ದೊಡ್ಡ ವಿಘ್ನವಾದದ್ದರಿಂದ, ಮೆಹರ್ಜಾನಳೊಡನೆ ಆಕೆಯ ಗರ್ಭವೂ ಆತನಿಗೆ ಮತ್ತಷ್ಟು ವಿಘ್ನವಾಗಿ, ಅದು ಆತನ ಅಸಂತೋಷಕ್ಕೆ ಕಾರಣವಾಯಿತು. ಅದರಿಂದ ಕೇವಲ ಮಹತ್ವಾಕಾಂಕ್ಷೆಯಿಂದ ಅಂಧನಾದ ಆತನು ಒಬ್ಬ ಅನಾಥ ಅಬಲೆಗೆ ಕೊಟ್ಟ ವಚನವನ್ನು ಮರೆತು ಕೃತಘ್ನತೆಯಿಂದ ಕುದುರೆಯನ್ನು ಹತ್ತಿದನು. ಆಗ ಅತ್ತ ಮೆಹರ್ಜಾನಳನ್ನು ಕನಸಿನಲ್ಲಿ -ಮಹಾರಾಜರೇ, ಈ ದಿನ ನಾವಿಬ್ಬರೂ ಪುಷ್ಕರಣಿಯಲ್ಲಿ ಮುಳುಗಿ ಹೋದರೆ, ನೆಟ್ಟಗಾದೀತು. ಎಂದು ಕನಕರಿಸುತ್ತಿರಲು, ಇತ್ತ ರಾಮರಾಜನು ಅದೇ ಅಪಘಾತದ ನೆನಪಿನಿಂದ ಭಯಗೊಳುತ್ತ ಕುದುರೆಯನ್ನು ಮುಂದಕ್ಕೆ ನೂಕಿದನು.

ಮೆಹರ್ಜಾನಳೂ ಸ್ವಪ್ನದಲ್ಲಿ ಹಲವು ಸಂಗತಿಗಳನ್ನು ನೋಡ ಹತ್ತಿದಳು. ಆಕೆ ಒಮ್ಮೆ ಕೈಗಳನ್ನು ಮೇಲಕ್ಕೆ ಏನೋ ತೋರಿಸುವಂತೆ ಮಾಡುವಳು. ಒಮ್ಮೆ