________________
80 ಕೆಳದಿನೃಪವಿಜಯಂ ಕಾರಕಳ ಕಳಸ ಖಾಂಡ್ಯದ ಚಾರುಪರಿಸ್ಕರಣಭೂಮಿಯಂ ವಶಗೈದಂ | ಇಂತು ಕಾರಕಳದ ಭೈರಸವೊಡೆಯರು ನಿಗ್ರಹಿಸಿ ತದ್ರಾಜಪರಿ ಸರಣಂಗಳಂ ವಶಂಗೈದನಂತರಂ, ಮಾಳಕೋಡ ಹೊಳಯಬಯಲೂರ ಕಂಟೆಗಳ ನಿರ್ಮಾಣಂಗೈಸಿದನಂತುಮಲ್ಲದೆಯುಂ, || ಬಲ್ಲಿದ ಶಿರಾಲೆಯವರಂ ಘಲ್ಲಿಸಿ ವಶಗೈದು ಕಡೆ ತದ್ರೂತಳಮಂ | ಹಲ್ಲರ್ಗೆಡೆಯೆನಿಸದ ಕೇ ಡಿಲ್ಲದ ವಸುಪುರವನಾನೃಪಂ ಸಾಧಿಸಿದಂ || ೪y ಇಂತು ಬಸುರೂರಂ ಸಾಧಿಸಿ ಮಹಾಲಿಂಗೇಶ್ವರದೇವರ ಪೂಜೆ ಲೋಪವಾಗದಂತು ನಿಯಾಮಕಂಗೆಯು ತೆರಳನಂತುವಲ್ಲದೆಯುಂ || ಅವನೀಶಭೂತಮಾಂಡೋ ದೈವರ್ಗಳ್ಳುನ್ನಾಳ ಪರಮವೈಭವದಿಂದೊ | ಪ್ರುವ ಭಾರಕರ ಸಂಖ್ಯಾ ನವನುರೆ ವಶಗೈದನಾ ನೃಪಾಲಕತಿಲಕಂ | ೫೦ ಇಂತಾ ವೆಂಕಟಪ್ಪನಾಯಕಂ ಬಾರಕೂರ ಸಂಸ್ಥಾನಮಂ ಸ್ವಾ ಧೀನಂಗೆಯು ಬಾರಕೂರು ಕಲ್ಯಾಣಪುರ ಮಲ್ಲಿಕಾರ್ಜುನಗಿರಿ ಕಂಡು ಊರ ಕೌಂಟೆಗಳ ನಿರ್ಮಾಣಂಗೈಸಿದನಂತುಮಲ್ಲದೆಯುಂ || ೫೧ ಮುರಿದು ಸುರಾಲರ ತೊಳಹರ ಸಿರಿಯರ ನಾಲ್ಕತ್ತುನಾಡು ಕೆಲನಾಡುಂ ಶಂ | ಕರನಾರಾಯಣ ಬೈದೂ ರ್ವೆರಸಿದ ಹಳ್ಳಿಗೆರೆಯವನಿಯಂ ಸಾಧಿಸಿದಂ | ೫೦ ಇಂತು ಸುರಾಲರ ತೊಳಹರ ಸೀಮೆಗಳಂ ವಶಂಗೈದನಂತರಂ |