ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ 136 ಕೆಳದಿನೃಪವಿಜಯಂ ರಾಮನನುರೆಕಾಯು ನೃಪ ಸೋಮದೊಳತ್ಯಧಿಕಕೀರ್ತಿಯಂ ಮಿಗೆ ಪಡೆದಳೆ || ಆ ವಿವರಣವೆಂತೆಂದೊಡೆ ಎರೆಯರ ಮಲಮುಮನಾರಾಮರಾ ಜನಂ ಪಿಡಿಯಲೈದಿದ ತುರುಷ್ಕರ ಮಲಮುಮನಾತುರುಸ್ಮರಾಮ ರಾಯರ್ಗರ ವಿರೋಧಂ ಪುಟ್ಟಿದ ಕಾರಣವುಮನುಸಿರ್ವೆನದಕೊ ಸುಗಂ ಮೊದಲೆಳಾರೆಯರ ಮೂಲವೃತ್ತಾಂ ತಮಂ ಬಿತ್ತರಿಪೆನದೆಂತೆಂ ದೊಡೆ :-ಕುರುಕ್ಷೇತ್ರ ಸಮೀಪದೊಳೆ ಕಾಶಿಯ ಡಿಯು ವಾಯುವ್ಯ ದಿಕ್ಕಿನ ತಾಣದೊಳೆ ಪ್ರತಿಯರ್ಗೆ ಮೂಲಸಂಸ್ಥಾನವಾದ ಚಿತ್ತೂ ಡೆಂಗಡವೊಪ್ಪು ತಿರ್ಪುದು ; ಚಿತ್ರಕ್ಕೆ ಭಯಮಂ ಪುಟ್ಟಿಸುತ್ತಿರ್ದು ದರಿಂ ಚಿತ್ತೊಡೆಂಬ ನಾಮವಾದುದಾಕಿತ್ತೊಡೆಂಬ ಗಡಂ ಸುತ್ತ ಮೈದುಯೋಜನ ವಿಸ್ತೀರ್ಣದಿಂ ಸಮಸ್ತ ಧನಧಾನ್ಯಪುಪ್ಪಫಸಮೃದ್ಧಿ ಯಿಂ ಸತತಂ ವಿರಾಜಿಸುತ್ತುಮಿರ್ಪುದಾಚಿತ್ತೋಡ ಸಂಸ್ಥಾನಾಧಿಪತಿ ಗಳಾದ ಭಾರದ್ವಾಜಗೋತ್ರಜರೆನಿಸ ಹತ್ರಿಯರಾಜರ್ಪರಂಪರೆಯಿಂ ರಾಣರೆಂಬಲಿಧಾನಮನಾಂತು ರಾಜ್ಯ ಪ್ರತಿಪಾಲನಂಗೆಯ್ಯುತಿರ್ದರಾಕ್ಷಿ ಯಕುಲಪರಂಪರೆಯೊಳುದ್ಭವಿಸಿದ ರಾಣನೆಂಬ ರಾಜನಾಚಿತ್ತೋಡ ಸಂ ಸ್ಥಾನದೊಳೊಪ್ಪುತಿರ್ದನಾರಾಣನೆಂಟಾತಂಗೆ ರೂಪವತಿಯಾದ ಪದ್ಮನೀ ಜಾತಿಯಕುಮಾರಿಯುದಿಸಲಾ ಕೌಮಾರಿಯಂ ಪೋಷಿಸುತ್ತುಮಾರಾಣಂ ರಾಜ್ಯವಾಳುತ್ತಿರಲಾ ಪದ್ವಿನೀಜಾತಿಯ ಕುಮಾರಿಯ ರೂಪಲಾವಣ್ಯ ಗುಣಗಣತೀಲಮಂ ಒಳ್ಳಯನಾಳುತಿರ್ದಕಬರಸಾತುಶಾಹಂ ಕೇಳು ಸೈನ್ಯ ಸಮೇತನಾಗಿ ತಾನೇ ತೆರಳ್ತಂವಾ ಚಿತ್ರೋಡೆಂಬ ಗಡಮಂ ವೇಡ್ರೆಸಿ ನೆಲದಂಡಿಳಿದು ಆ ಸಂಸ್ಥಾನಮುಂ ಸಾಧಿಸವೇಂದು ಪನ್ನೆರಡು ವರು ಪ್ರಂಬರಂ ಬಹುವಿಧಪ್ರಯತ್ನ೦ಬಟ್ರೋಡಮಾಗಡಂ ಸಾಧ್ಯವಾಗದಿರ್ಪುದಂ ಕಂಡು ಪ್ರಚ್ಛನ್ನ ವೇಷದಿಂದಕಬರಪಾತುಶಾಹನಾಗಡಮನೊಳಪೊಕ್ಕು ವಸಿಷ್ಠಗೊತಜನಾದ ರಾಣನ ಅಳಿಯ ರಾಮಸಿಂಗನ ಬಳಿಯೊಳೆ ಮುಖ್ಯಸೇವಕನಾಗಿವರ್ತಿಸುತ್ತಿರ್ದೊಂದವಸರದೊಳೆ ರಾಮಸಿಂಗನೆಂಬ ವನ ಸಂಗಡವೇ ತಾನರಮನೆಯನೊಳಪೊಕ್ಕು ಆರಾಣನ ಸಮಾ