ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ದಶಮಾಶಾಸಂ
- ಶಾಹುರಾಜನ ಹುಕುಮದಿಂ ಮೊಹರಸಹಿತೈದಿ ತಗುಳ್ಳ ಬಾಜೀರಾಯುಂ | ಗಾಹವಮಂ ಪೊನ್ನಂ ನಿ ರ್ವಾಹಕಲಿಂಗಪನ ಮುಖದೊಳಿತ್ತು ತೆಗೆಸಿದಂ || * ಕೀಲಕಾದೊಳ ತದ್ರೂ ಪಾಲಂ ಕೊಲ್ಲೂರಿಗೈದಿ ಮೂಕಾಂಬಿಕೆಯಂ ! ಲೀಲೆಯೊಳರ್ಚಿಸಿ ಭೂಸುರ ಜಾಲವನತಿ ತುಪ್ಪ ಬಡಿಸಿದಂ ಭೋಜನದಿಂ || ಮೆರೆವ ಸಹಸ್ರಸುವಾಸಿನಿ ಯರಿಗಂ ವರಕಂಚುಕಂಗಳಂ ನಲಿದಿತ್ತಾ | * ದರಿಸಿ ಮೂಕಾಂಬಿಕೆಗೆ ತ ದ್ಧರಣಿಪನುನ್ನ ತರಥೋತ್ಸವವನಾಗಿಸಿದಂ || ನೆರೆ ರಂಗಪೂಜೆಯಂ ಭಾ ಸುರತರವರಲಕ್ಷದೀಪಪೂಜೆಯನನುವಿಂ | ವಿರಚಿಸಿ ತನ್ನ ಕಾಂಬೆಯ ಚರಣಬ್ಬವನಧಿಕಭಕ್ತಿಯಿಂದರ್ಚಿಸಿದಂ || ವರಮೂಕಾಂಬಿಕೆಯುಡಿದಾ ವರೆಯಂ ಬೀಳೊಂಡು ತನ್ನ ಪಾಲಿ೦ ಕೆಳದೀ | ಪುರಮುಂ ಸಾರುತೆ ರಾಮೇ ಶನಲಿಂಗವನಧಿಕಭಕ್ತಿಯಿಂದರ್ಚಿಸಿದಂ | ಶ್ರೀವೀರಭದ್ರನೆಸೆವಡಿ ದಾವರೆಯಂ ಪರಮಭಕ್ತಿಯಿಂ ಪೂಜಿಸಿ ತ | ದೇವರದೇವಂಗವನಿಸ ದೇವಂ ತಾಂ ಕೆಂಡದರ್ಚನೆಯನರ್ಪಿಸಿದಂ |