________________
208 ಕೆಳದಿನೃಪವಿಜಯಂ * ದೊರೆತನಂ ನಡೆಯದೊ ಡ್ಲು ರಮಡಸಿಗೆ ತಾನೆ ಬಂದು ಬಿಳಗಿಯ ಭೂಪಂ | ನೆರೆ ಬೇಟಗೊಂಡು ದೈನ್ಯದೊ ಘೋರೆಯಪ್ಪಣನ ಮುಖದೆ ಬಂದಾದೆಸೆಯಂ || ಲಾಲಿಸಿಯಪ್ಪನುಸುರಿದ ಶೀಲಂ ನಡೆವಂತು ಮಾಡಿ ತನ್ನೆ ಯುಮಂ | ತೇಲಿನಿಯವರಂ ಮನ್ನಿಸಿ ಲೀಲೆಯೊಳ೦ ಬಸವನ್ನಪವರಂ ಬೀಳಟ್ಟಂ || ಮತ್ಯಮದಲ್ಲದೆ || ಶ್ರೀಮುಖದ ಮಾಘಮಾಸದೊ ೪ಎವಹಿಪಂ ಸಕಲಜನಹಿತಾರ್ಥಂ ಪರಮೋ || *ದಾಮಶಾಸ್ಪೋಕ್ತ ವಿಧಿಯಿಂ ನೇಮದೊಳ೦ ಗ್ರಾಮ ಶಾಂತಿಯಂ ವಿರಚಿಸಿದಂ | ೬೪ ಇಂತು ಗಾಮಶಾಂತಿಯನೊಡರ್ಚಿಸಿ ಸುಖದಿಂ ರಾಜ್ಯಂಗೆಯ್ಯು ತಿರ್ದಾ ಬಸವನರೇಂದ್ರಚಂದ್ರಂ ತನಗೆ ಸಂತಾನಮ್ಮಿಲ್ಲದುದರಿಂ ಚಿಂತಿಸಿ ಮುಂದೆ ಸಂಸ್ಥಾನಾಧಿಪತಿಕರ್ಹರಂ ಕಾಣದಾಳಚಿಸಿ ಭಾವ ಸಂವ ತ್ವರದ ಭಾದ್ರಪದ ಶುದ್ಧ ನವಮಿಯ ದಿವಸದೊಳೆ ನಿರ್ವಾಣಯ್ಯನವರ ಮಗ ಗುರುವಪ್ಪನವರ ಕುಮಾರನಾದ ಚನ್ನಪ್ಪನವರಂ ಸರ್ವಸಂಭ್ರ ಮದಿಂ ಪಲ್ಲಕ್ಕಿಯಮೇಲರವನೆಗೆ ಬಿಜಯಂಗೆಯ್ಲಿ ತಂದು ಮನೆದೇವರ ಸನ್ನಿಧಿಯೊಳೆ ಆ ಕುಮಾರನಂ ತಮ್ಮ ಪತ್ನಿ ವೀರಮ್ಮಾಜಿಯವರ ಮಡಿ ಊಳಿಡಿಸಿ ಗೃಹೀತಪುತ್ರನಂ ಮಾಡಿಕೊಂಡಾ ಚನ್ನಪ್ಪನವರ್ಗೆ ಚನ್ನ ಬಸವಪ್ಪನಾಯಕನೆಂದು ನಾಮಕರಣಮಂ ರಚಿಸಿ, ಓದು ಸಾಧನೆ ಮುಂತಾದ ರಾಜೋಪಯುಕ್ತವಾದ ವಿದ್ಯಾಭ್ಯಾಸಂಗಳನೊಡರ್ಚಿ ಸುತ್ಯಾಕುಮಾರನಂ ಪೋಷಿಸಿ ಸಂತಸವಡುತ್ತುಂ || ೬೫