ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೮೭

ನಾಲ್ಕನೆಯವನು :
"ಬಹಳ ಅಂದರೆ ಅವರು ಇಪ್ಪತ್ತು ಮೂವತ್ತು ಜನ. ನಾವೆಷ್ಟಿದ್ದೇವೆ
ಗೊತ್ತಾ ? ಎಣಿಸಿದ್ದೀಯಾ ?”
ಮಗದೊಬ್ಬ :
"ಚಾಟ ಏಟು ಮಾತ್ರ ಸಹಿಸೋಕಾಗೋದಿಲ್ಲಪ್ಪ.”
ಬೇರೊಬ್ಬ :
“ಒಬ್ಬ ದ್ಯೆತ್ಯ ಆ ಭಟರ ಮುಖ್ಯಸ್ಥ. ಅವನು ಬಾರಿಸಿದಾಗ
ಮೆನೆಪ್ಟಾನ ಮೈಯಿಂದ ರಕ್ತ ಚಿಮ್ಮಿತಂತೆ. ಆದರೆ ಮೆನೆಪ್ಟಾ ತುಟ
ಪಿಟಕ್ ಮಾಡ್ಲಿಲ್ವಂತೆ.”
ಸ್ನೊಫ್ರು, ಸೆಬೆಕ್ಖು ಜನಸ್ತೋಮದ ಮೊದಲ ಸಾಲಿನಲ್ಲಿದ್ದರು.
ತನ್ನ ಎಡಬಲಗಳತ್ತ ನೋಡುತ್ತ ಸ್ನೊಫ್ರು ಹೇಳಿದ :
"ಎಲ್ಲರೂ ಶಾಂತವಾಗಿರ್ಬೇಕು; ಯಾರೂ ಸೈರಣೆ ಕಳಕೋಬಾರ್ದು.”
ಅವನನ್ನೂ ಒಂದು ಶಂಕೆ ಕಾಡುತ್ತಿತ್ತು : “ ಮಹಾದ್ವಾರವನ್ನು
ಅವರು ತೆರೀದೇ ಇದ್ದರೆ?
ಜನ ಇನ್ನಷ್ಟು ಹತ್ತಿರಕ್ಕೆ ಬಂದಂತೆ ಮಹಾದ್ವಾರದ ಕಿರುಕಿಂಡಿ ತೆರೆದು
ಕೊಂಡಿತು. ಬಕಿಲ ಹೊರಬಂದ. ಜನ ಸಮುದಾಯದಿಂದ ಯಾರೋ
" ದೈತ್ಯ,ದೈತ್ಯ" ಎಂದರು. ಬಕಿಲನ ಹಿಂದೆ ಪೂರ್ತಿಮೈ ಮುಚ್ಚಿದ ಒಬ್ಬ
ನಿದ್ದ. ಅವನ ಹಿಂದೆ ಗದಾಧಾರಿಗಳಾದ ಇಬ್ಬರು ಭಟರು.
ಬಹಳ ಕಂಠಗಳಿಂದ ಕೇಳಿಸಿತು :
“ ನಮ್ಮ ದೇವಸೇವಕ ! ದೇವಮಂದಿರದ ಅರ್ಚಕ!”
ಎತ್ತಿದ ಗದೆಗಳು ನಾಲ್ಕು ಹೆಜ್ಜೆ ಮುಂದೆ ಬಂದು 'ಅಲ್ಲೇ ನಿಲ್ಲಿ' ಎಂದು
ಜನರಿಗೆ ಸೂಚಿಸಿದುವು.
ಒಳಗೆ ರಾಜಗೃಹದಲ್ಲಿ ಮಹಡಿಯ ಮುಖಮಂಟಪದಲ್ಲಿ, ಮೇಲಕ್ಕೆ
ಸುರುಳಿ ಸುತ್ತಿದ್ದ ಬಣ್ಣದ ಚಿತ್ತಾರಗಳಿದ್ದ ಹುಲ್ಲಿನ ಚಾಪೆಗಳನ್ನು ಇಳಿಬಿಟ್ಟರು.
ಅವುಗಳ ಮರೆಯಲ್ಲಿ ನಿಂತರು, ಟೆಹುಟ ಮತ್ತು ಗೇಬು.
ಅಪೆಟ್ ಆಶೀರ್ವದಿಸುವ ಭಂಗಿಯಲ್ಲಿ ಬಲತೋಳನ್ನೆತ್ತಿದ.