ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ನಿಂತಲ್ಲಿಂದಲೇ ಕತ್ತು ಹೊರಳಿಸಿ ದೋಣಿಕಟ್ಟೆಯತ್ತ ನೋಡಿ, ಬಿಡಿಸಿದ ಅಂಗೈಯನ್ನು ಆಡಿಸುತ್ತ ತೋಳು ಬೀಸಿದ.

  • ಅಣ್ಣ, ಮೆನೆಪ್ಟಾ ಅಣ್ಣ. ಲಿಷ್ಟ್ ಬಂತು."

ಕರೆಯುತ್ತಿದ್ದ ಬೆಳಕು :ಬೇರ್ಪಡಲು ಒಪ್ಪದ ಇರಳು. ಧ್ವನಿ ಬಟಾನದು. ಏನು ಬಂತು? ಲಿಷ್, ಓ ! ಪಯಣ ಮುಗಿಯಿತು. ಇನ್ನು ಎರಡು ಮೂರು ತಾಸುಗಳಲ್ಲಿ ಮೆಂಫಿಸ್. ಎವೆಗಳು ಬೇರೆ ಬೇರೆಯಾದುವು; ಕಣಾಲಿಗಳನ್ನು ಬೆಳಕು ಮುದ್ದಿಸಿತು. ತುಟಿಗಳು ಅರಳಿದುವು. ಮೆನೆಪ್ಟಾ ಎದ್ದ. ಗೇಬುವಿನ ಊರು.. ( ಸೆಡ್ ಉತ್ಸವಕೆಂದು ಆತನನ್ನೂ ರಾಜಧಾನಿಗೆ ಪೆರೋ ಕರೆದಿರಬಹುದು.) ಅಂಗಡಿ, ಮನೆಗಳ ಬೀದಿ ದಂಡೆಯುದ್ದಕ್ಕೂ. ನಡುವೆ ದೋಣಿಕಟ್ಟೆ. ಉದಿಸಿದ್ದ ಸೂರ್ಯನ ಹೊಂಬೆಳಕು ಬಿದು ಆ ಸಾಲು ಅವಕುಂಠನ ಸರಿಸುತ್ತಿತ್ತು. ನದಿಯಲ್ಲಿತ್ತು, ಕೆಲವು ಕಟ್ಟಡಗಳ ಪ್ರತಿಬಿಂಬ. ಗಾನಪ್ರಿಯನೊಬ್ಬನ ಆಲಾಪನೆ ಅಗಲವಾದ ನದಿಯನ್ನು ದಾಟಲು ಯತ್ನಿಸುತ್ತಿತ್ತು.

  • ರಾಜಧಾನಿಗೆ ಸಮೀಪದಲ್ಲಿದೆ ಅಂತ ಈ ಊರಿಗೆ ಪ್ರಾಧಾನ್ಯ.ಅಲ್ಲವೆ ಬಟಾ ? "

"ಹ್ಞ· ನಿನಗೆ ಸವಿಾಪದವನಾಗಿ ನಾನು ದೊಡ್ಡವ ಅನಿಸಿಕೊಂಡಿಲ್ವಾ?” ನದಿಯಲ್ಲಿ, ಬದುಕಿನಲ್ಲಿ ಜತೆ ಪಯಣ. ಅದು ಸಾಧಿಸಿದ್ದ ಅಪೂರ್ವ ಬೆಸುಗೆ. ಮಾತಿನಲ್ಲಿ ಆ ಬಂಧುತ್ವದ ಸಲಿಗೆ. “ ಮರೀಬೇಡ ಬಟಾ ; ಸೈನಿಕರಿದ್ದರೆ ಸರದಾರ, ಸಹಚರರಿದ್ದರೆ ನಾಯಕ....”

  ನಾಯಕನ ಒಲವು ತುಂಬಿದ ನೋಟ ಇದಿರಾಗಲು, ಪರಮಾನಂದ ಬಟಾನಿಗೆ. ಮೌನ.