ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

ನೀರಾನೆ ಪ್ರಾಂತದ ನದೀ ಸಾರಿಗೆಯ ಮುಖ್ಯಸ್ಥನೆಂದ: "ನಮ್ಮೂರಿನ ದಂಡೆಯನ್ನು ಎತ್ತರಿಸ್ಬೇಕು. ನದಿಗೆ ಮುಖ ಮಾಡಿ ಒಂದು ಅಂಗಡಿ ಸಾಲು ಕಟ್ಟೀಕು.”
  • ಹುಂ.. ಮಾಡೋಣ. ನೀಲನದಿಯಲ್ಲಿ ಹೋಗುವ ಬರುವವರಿಗೆಲ್ಲ ಆಗ ನೀರಾನೆ ಪ್ರಾಂತದ ದರ್ಶನವಾಗ್ರದೆ.”
  • ನೆಫೆರುರಾಗೆ ಹೇಳಿದರೆ ಸಾಕು. ಸಾಟಿ ಇಲ್ಲದ ಭೋಜನ ಮಂದಿರ ತೆರೀತಾಳೆ, ಆಗ ಎಲ್ಲ ದೋಣಿಗಳೂ ನಮ್ಮ ಕಟ್ಟೆಗೆ ಬಂದೇ ಬರ್ತವೆ.”

ಹಸನ್ಮುಖಿ ಮೆನೆಪ್ಟಾ ಏನನ್ನೂ ಹೇಳಲಿಲ್ಲ. ಲಿಷ್ಟ್ ದಾಟಿದಂತೆ ಜನಸಾಂದ್ರತೆ ಕಡಿಮೆಯಾಯಿತು ಹಸುರು ಹೊಲಗಳು. ಯೌವನದ ಕಂಪು ಸೂಸುತ್ತಿದ್ದ ಪೈರು. ದೋಣಿ ಎಡದಂಡೆಯತ್ತ ಹೊರಳಿತು. ಒದ್ದೆ ಮರಳನ್ನು ತೀಡಿ ದೋಣಿ ಸದ್ದಿಲ್ಲದೆ ನಿಂತಿತು. ಪ್ರಾತರ್ವಿಧಿಗಳಿಗಾಗಿ, ಸ್ನಾನಕ್ಕಾಗಿ, ಎಲ್ಲರೂ ಕೆಳ ಗಿಳಿದರು. (ನೀರಾನೆ ಪ್ರಾಂತ ಬಿಟ್ಟ ಮೇಲೆ ಮೆನೆಪ್ಟಾ ದೋಣಿ ಛಾವಣಿಯ ಕೆಳಗೆ ನಿದ್ದೆಹೋದ ರೀತಿ ಕಂಡು, ಬಟಾ ಬೆಚ್ಚಿದ್ದ. ಆ ಇರುಳು, ಅನಂತರದ ಹಗಲು, ಮತ್ತೊಂದು ಇರಲು, ದಿನದ ಹೊತ್ತು ಒಮ್ಮೆಯಷ್ಟೇ ಎದ್ದಿದ್ದ. ಬಹಿರ್ದೆಶೆಗೆ ಹೋಗಲು, ಒಂದಿಷ್ಟು ನೀರು ಕುಡಿಯಲು.. ಊಟವಿಲ್ಲ, ತಿಂಡಿಯಿಲ್ಲ."ನೀವೆಲ್ಲ ತಗೊಳ್ಳಿ. ನಾನು ನಿದ್ದೆ ಮಾಡ್ಬೇಕು.” ಕಳೆದ ಒಂಭತ್ತು ತಿಂಗಳ ಬಳಲಿಕೆಯನ್ನೆಲ್ಲ ನೀಗುವ ನಿದ್ದೆ. ಒಮ್ಮೆ ಬಟಾನಿಗೆ ಗಾಬರಿಯಾಯಿತು. ಏನಾದರೂ ಅಸ್ವಾಸ್ಥ್ಯವಿರ ಬಹುದೇನೋ ಎಂಬ ಚಿಂತೆ.ದೋಣಿಯ ತಿವಿಮೂತಿಯ ಬಳಿ ಕರಂಡಕದಲ್ಲಿತ್ತು ಅಮನ್ ಮೂರ್ತಿ, ಪ್ರವಾಸದ ದೇವರು, ಅದರೆದುರು ಕುಳಿತು ಬಟಾ ತನ್ನ ಅಳಲನ್ನು ತೋಡಿಕೊಂಡ, ಮೆನೆಪ್ಟಾ ಮಲಗಿದ್ದಲ್ಲಿಗೆ ಸಾಗಿ, ಒುನೂಗಿನ ಹೊಳ್ಳೆಗಳೆದುರು ತನ್ನ ಬೆರಳ ತುದಿಯನ್ನು ಹಿಡಿದ. ಉಸಿರು ಸಣ್ಣ ನೆವಂದೇ ಸಮನಾಗಿ ಆಡುತ್ತಿತ್ತು. "ನಿನ್ನ ಕೀರ್ತಿ ಶಾಶ್ವತವಾಗಲಿ, ಅಮನ್," ಎಂದ.