ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

                                                ೧೯೩

ಎರಡನೆಯ ಬೆಳಿಗ್ಗೆ ಚೆನಾಗಿ ಎಚ್ಚರವಾದಾಗ ಮೆನೆಪ್ ಟಾಗೆ ತಡೆಯ ಲಾರದ ಹಸಿವು, ಮತ್ತೆ ನಾಯಕನ ದ್ವ್ನನಿ ಕೇಲಿ ದೋಣಿಯಲ್ಲಿ ಹರ್ಷ, ಮನೆಬುತ್ತಿ : ನೆಫೆರುರಾ ಕಟ್ಟಿಕೊಟ್ಟಿ ಬುತ್ತಿ, ಹಸಿವಿಗೆ ನೆಫಿಸ ತಟ್ಟಿದ ರೊಟ್ಟಿ, ರುಚಿಗೆ ನೆಫೆರುರಾ ಅಡುಗೆ.


" ಬಟಾ. ಇದೇನು ಮಾಡಿದಾಳೆ ನಿನ್ನ ಭೋಜನ ಮಂದಿರದ ನೆಫೆರುರಾ. ಸ್ವ್ಲಲ್ಫ ತಿಂದು ನೋಡು." ರೊಟ್ಟಿಯ ఆ ಸವಿ ಬಟಾಗೇ ಹೊಸದು.ಬೇಯಿಸಿದ ಮಾಂಸದ ತುಣುಕೊ ? ಬಾಯಲ್ಲಿ ಇಟ್ಟೊಡನೆ ಕರಗುತ್ತಿತ್ತು. ಅವನೆಂದ : " ನೆಫೆರುರಾ ಮನುಷ್ಯಳೆಲ್ಲ,ಮಾಯಾವಿನಿ.ಎಂಥ ರುಚಿ!ಏನು ರುಚಿ!"

ಹೊಟ್ಟೆ ತುಂಬ ಉಂಡ ಮೇಲೆ ಫುನ್ಹ್ ತೂಕಡಿಕೆ. “ ಈ ನಿದ್ದೆಯೂ ಒಂದು ವಕ್ರದೇವತೆ,” ಎನ್ನುತ್ತ ಮೆನೆಪ್ ಟಾ ಮ್ಕೈ ಚಾಚಿದ. ಬಟಾ ಕೊಳಲನ್ನೆತ್ತಿಕೊಂಡು, ಐಗುಪ್ತದ ಯುವ ಜನತೆಗೆ ಅಚ್ಚು ಮೆಚ್ಚಿನದಾದ "ನನ್ನ್ನ್ ನಲ್ಲೆಯ ಒಲವು ನಲಿದಿದೆ ನದಿಯ ತಟದಲೀ " ಹಾಡನ್ನು ನುಡಿಸಿದ. ಮೆನೆಪ್ ಟಾಗೆ ಮಂಪರು, ಮುಗುಳುನಗುತ್ತ ಆತ ಕಣ್ಣೆವೆಗಳನ್ನು ಮುಚ್ಚಿದ ಮಧಾಹ್ನ ಎದ್ದ ಮೇಲೆ, ದಡದಲ್ಲಿ ಕಾಣಿಸಿದ ಅಂಜೂರ ಮರಗಳ ನೆರಳಿನಲ್ಲಿ ತುಸು ವಿಶ್ರಾಂತಿ. ಪಯಣ ಮುಂದುವರಿದಾಗ, ಬಟಾನ ಜೊತೆ ಚೌಕಮಣೇಆಟ.ಸಂಜೆಯವರೇಗೂ. ಮುಂದಿನ ದಿನಗಳಲ್ಲಿ ಮೆನೆಪ್ಟಾ ಲವಲವಿಕೆಯ ವ್ಯಕ್ತಿ, ಎಲ್ಲಾರೊಡನೆ

ಮಾತು ಎಲ್ಲರೊಡನೆ ಹರಟಿ, (ಆತ ಹುಟ್ಟು ಹಾಕಿದ, ಚುಕಾಣಿ ತಿರುವಿದ.)

ಮುಂದಕ್ಕೆ ಹೊರಟ ದೋಣಿ ಬಿಸಿಲೇರುವುದಕ್ಕೆ ಮೋದಲೇ ರಾಜಧಾನಿಯನ್ನು ಸಮಿಪಿಸಿತು. ಅಂಬಿಗ ಬಟಾನಿಗೆ ರಾಜಧಾನಿ ತಕ್ಕಮಟ್ಟಿಗೆ ಪರಿಚಿತ. ಅವನ ಉದ್ಯೋಗಿಗಳಿಗೂ, ಆತನೆಂದ: ೧೩.