ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೮೫ ಲಿಲ್ಲ. ಆದರೆ ಮರೆಯಲ್ಲಿ ನಿಂತು ಮೆನೆಪ್ ಟಾನನ್ನು ಕಂಡ. ಸಾಮಾನ್ಯ ಮನುಷ್. ತೀರಾ. ಆದರೂ ಆ ಶೀತಲ ಕಣ್ಣುಗಳ ಹಿಂದೆ ಏನಿತ್ತು ?

   ರಾತ್ರೆ ಸೆನೆಬ್ ವಿವರಿಸಿದ :
   “ಇದು ಸ್ನೇಹವಲ್ಲ. ಶಿಷ್ಟಾಚಾರ".
   ಅವನು ಗೂಢವಾಗಿ ಇನ್ನೂ ಒಂದು ಮಾತು ಸೇರಿಸಿದ :
   “ಅಮಾತ್ಯರ ಸವಿಮಾತು ಮುಖ್ಯವಲ್ಲ, ಬಂಡಾಯಗಾರನ ವಿಷಯದಲ್ಲಿ ಮಹಾ ಅರ್ಚಕರು ಏನು ಹೇಳ್ತಾರೆ ಅನ್ನೋದು ಮಹತ್ವದು.”
   "ಮಹಾ ಅರ್ಚಕರು ಇನ್ನೂ ಆನ್ ನಗರದಲ್ಲೇ ಇದ್ದಾರಲ್ಲಾ ?"
   “ಬರ್ರ್ತಾರೆ, ಬರ್ರ್ತಾರೆ. ಬರಬೇಕಾದ ಸಮಯಕ್ಕೆ ಸರಿಯಾಗಿ ಪ್ರತ್ಯಕ್ಷ

ವಾಗ್ತಾರೆ.”

   “ಸೆನೆಬ್.ನನಗೆ ತಡೆಯೋಕಾಗ್ಲಿಲ್ಲ.  ಆ ನಾಯಕ ರಾಜಧಾನಿಗೆ 

ಬರ್ತಾನೆ ಅಂತ ಗೊತ್ತಾದ್ಮೆಲೆ, ಅದೃಷ್ಟವಾಚನ ಮಾಡಿಸ್ಕೊಂಡು ಬಂದೆ.”

   "ಮುದುಕನಲ್ಲಿಗೆ ಹೋದಿರೋ?"
   “ಹೌದು. ಮತ್ತೆ ಸುಖದ ದಿನಗಳು ಬರ್ತವೆ ಅಂದ್ರು."
   “ನಾನು ಅದನ್ನ ಹೇಳ್ತಿರ್ಲಿಲ್ಲವೆ? ಕಾಣಿಕೆ ಏನು ಕೊಟ್ರಿ ?”
   "ಬಂಗಾರದ ಉಂಗುರ."
   “ಹೋಯ್ತು.”
   “ಅರ್ಥವಾಗ್ಲಿಲ್ಲ.”
   “ನನಗೆ ಸಿಗಬೇಕಾದು ಆ ವೃದ್ಧನ ಪಾಲಿಗಾಯ್ತು ಅಂತ.”
   “ಅದೇನು ಮಹಾ ?”
   “ನುಟ್ ಮೋಸ್. ನೀವು ವ್ಯರ್ಥ ಕಾಲಕಳೆಯೋ ಬದಲು ದೇಶದಲ್ಲಿ ಏನಾಗ್ತಿದೆ ಅಂತ." "ತಿಳಕೊಳ್ಳೋದಕ್ಕೆ ಪ್ರಯತ್ನಪಡಿ.”
   "ಅರ್ಥವಾಗಬೇಕಲ್ಲ ಸೆನೆಬ್?”
   “ನದೀತಟದ ಮಂದಿರಗಳಲ್ಲಿ ಮಜಾ ಮಾಡ್ತೀರಿ. ಅಲ್ಲಿಗೆ ಬೇರೆ ಪ್ರಾಂತ 

ಗಳ ಭೂಮಾಲಿಕರೂ ಆಗಾಗ್ಗೆ ಬರೋದಿಲ್ಲವಾ ? ಅವರ ಜತೆ ಮಾತನಾಡಿ. ದೇಶದ ಭೂಮಾಲಿಕರೆಲ್ಲ ಮಹಾ ಅರ್ಚಕರ ಹತ್ತಿರ ಸರೀತಿದ್ದಾರೆ. ಯಾಕೆ,