ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೬ ಮೃತ್ಯುಂಜಯ "ಅಂತ ತಿಳ್ಕೊಳ್ಳಿ." “ಆದರೆ ನಾನು ಅರಮನೆಗೆ ಋಣಿಯಾಗಿದ್ದೇನೆ.” “ನಾನು ಋಣಿಯಲ್ಲ ಅಂತೀರಾ ? ಇಡೀ ದೇಶವೇ ಅರಮನೆಗೆ ಋಣಿ. ಆ ವಿಷಯ ಬೇರೆ , ರಾಜನೀತಿ ಬೇರೆ ." "ರಾಜನೀತಿ?" "ಹಜ್ನ. ಆಳೋದಕ್ಕೆ ಸಂಬಂಧಿಸಿದ್ದು. ರಾಜನೀತಿಗೆ ತಳಹದಿ- ಸ್ವಹಿತ.” “ಸ್ವಹಿತ, ಅಂದರೆ, ಇವತ್ತು ಅರಮನೆ ಪಕ್ಷ-ನಾಳೆ ಮಹಾ ಅರ್ಚ ಕರ ಪಕ್ಷ ?” “ನಿಮಗೆ ಬುದ್ಧಿ ಇದೆ ನುಟ್ ಮೋಸ್ ! ಆದರೆ, ಇದೆ ಅನ್ನೋ ಸಂಗತಿ ಗೊತ್ತಿಲ್ದೇ ಬೆಪ್ಪನಂತೆ ಕಾಣಿಸ್ತೀರಿ, ಅಷ್ಟೆ." “ಹೆಹ್ಹೆ!”

 *                               *                                   *                                                          *

ಚೌಕಮಣೆಯ ಎರಡಾಟ ಮುಗಿಸಿ, ಮೆನೆಪ್ ಟಾ ಮತ್ತು ಬಟಾ ಬೆರಳು ಗಳ ನೆಟಕೆ ಮುರಿದರು. ಬಟಾ, ತನ್ನ ಹೊಟ್ಟೆಯನ್ನು ತೋರು ಬೆರಳಿನಿಂದ ನಾಲ್ಕಾರು ಕಡೆ ಒತ್ತಿ, ನುಡಿದ: “ಚುಕ್ಕಾಣಿ ಮುಟ್ಟಿ ಎಷ್ಟೋ ದಿವಸ ಆಯ್ತು, ನೆಲದ ಮೇಲೇ ಇದ್ದರೆ ವಾಯು ತೊಂದರೆ. ತುಂಬಿಕೊಂಡ ಹಾಯಿಯ ಹಾಗಿದೆ ಇದು" "ಭೇದಿಗೆ ತಗೊಂಡ್ಬಿದಡೋಣ. ಪೆರೋನ ಔತಣಕ್ಕಾಗಿ ಕಾಯೋದ ಬೇಡ." "ಸರಿ ಅಣ್ಣ ಔತಣ ಮಹಾರಾಣಿಯ ಮರ್ಜಿ ಅಂತ ಸೆನೆಬ್ ಅವತ್ತೇ ಹೇಳಿದ್ನಲ್ಲ? ಆ ಮಹಾತಾಯಿಗೆ ಅದೇನು ತೊಂದರೆಯೊ ?” "ಪದರದೊಳಗೆ ಪದರ. ಸುರುಳಿಯೊಳಗೆ ಸುರುಳಿ. ಯಾವುದೂ ಹೊರಗೆ ಕಾಣಿಸುವಷ್ಟು ಸುರಳ ಅಲ್ಲ.” ತನ್ನ ಒಳಗಿನ ಕಸಿವಿಸಿಯನ್ನು ಬಟಾ ಹೊರಗೆಡವಿದ: