ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಅಂಬಿಗರೊಡನೆಯೂ ವರ್ತಕರ ಅಳುಗಳೊಡನೆಯೂ ಹರಟುತ್ತಲಿದ್ದ ಬೋಯಿಗಳು ಆಕಳಿಸಿ ಮೈ ಮುರಿದು,ಸೇವೆಗೆ ಸನ್ನದ್ಧರಾದರು. ಕಟ್ಟೆಯ ಅಧಿಕಾರಿ ಸ್ವಾಗತಕ್ಕೆ ಬಂದ. ಮಹಾ ಅರ್ಚಕನಿಗೆ ಅಲ್ಲಿದ್ದ ಎಲ್ಲರೂ ಮಂಡಿಯೂರಿ ಪ್ರಣಾಮ ಮಾಡಿದರು. ತಾನು ಬರುವ ಬಗೆಗೆ ಮಹಾಮಂದಿರಕ್ಕೆ ಸುದ್ದಿ ಕಳುಹಿಸುವುದು ಹೇಪಾಟ್ಗೆ ಸಾಧ್ಯವಾಗಿರಲಿಲ್ಲ. ಸಂದೇಶವಾಹಕನಾಗಿ ಹೊರಟಿದ್ದ ಕಿರಿಯ ದೇವಸೇವಕನೊಬ್ಬ ನಡುವಿರುಳಿನವರೆಗೂ ಕಟ್ಟೆಯಲ್ಲಿ ಕಾದಿದ್ದು, ದೋಣಿಸಿಗದೆ,ಅಲ್ಲಿಯೇ ನಿದ್ದೆಹೋಗಿ ಬೆಳಗಾಗುವ ಹೊತ್ತಿಗೆರಾ ಮಂದಿರಕ್ಕೆ ಹಿಂತಿರುಗಿದ್ದ. “ಈಗ ಹೋಗಲೆ ? " ಎಂದು ಕೇಳಿ, ಹೇಪಟ್ನ ಕೋಪಕ್ಕೆ ತುತ್ತಾಗಿದ್ದ. ಸುದ್ದಿ ತಲಪಿದ್ದರೆ ಮಹಾ ಅರ್ಚಕನದೇ ಪಲ್ಲಕಿ ಕಟ್ಟೆಯಲ್ಲಿ ಕಾದಿರುತ್ತಿತ್ತು. ಈಗ? ನಾವೆಯಲ್ಲಿಯೇ ಕುಳಿತಿದ್ದು ಮಹಾಮಂದಿರಕ್ಕೆ ಹೇಳಿ ಕಳುಹಿಸಬೇಕು- ಆದರೆ, ಕಟ್ಟೆಯಲ್ಲಿದ್ದ ಅರಮನೆಯ ಎರಡು ಪಲ್ಲಕಿಗಳನ್ನು ಕಂಡು ಅವನ ಹುಬ್ಬಗಳು ಗಂಟಿಕ್ಕಿದುವು. 'ರಾಯಭಾರ ಯಶಸ್ವಿಯಾಯಿತು; ನಾಳೆ ಬೆಳಿಗ್ಗೆ ಹೊರಡುತ್ತೇವೆ' ಎಂದು ಹೆಖ್ವೆಟ್ ಸುದ್ದಿ ಕುಳುಹಿಸಿರಬಹುದು- ಎಂಬ ಶಂಕೆ ಮೂಡಿತು. ಸಂಧಾನದ ಸನ್ನಿವೇಶ; ಅರಮನೆಯ ಪಲ್ಲಕಿಯಲ್ಲೇ ಹೋದರಾಯಿತು ಎಂದುಕೊಂಡ. ಅಧಿಕಾರಿಯೆಂದ : “ ಅಮಾತ್ಯರು ಪಲ್ಲಕಿ ಕಳಿಸಿದ್ದಾರೆ.” ಹೇಪಾಟ್ ಏನನ್ನೂ ಹೇಳದೆ, ಶೀತಲ ದೃಷ್ಟಿಯಿಂದ ಎಲ್ಲರನ್ನೂ ನೋಡುತ್ತ ಕಟ್ಟೆಗೆ ಇಳಿದ. ತನಗೆ ಸಮೀಪವಾಗಿ ಇದ್ದ ಪೀಠ ಪಲ್ಲಕಿಯತ್ತ ಸಾಗಿ, ಅದನ್ನೇರಿದ. ಆಪ್ತಸಹಾಯಕ ದೇವಸೇವಕ ವಿನಮ್ರನಾಗಿ ಕೇಳಿದ : " ಮಹಾಮಂದಿರಕ್ಕೊ ? ಅರಮನೆಗೊ ?” ಹೇಪಾಟ್ ಗುಡುಗಿದ :