ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ "ಮೂರ್ಖ ಶಿಖಾಮಣಿ ನೀನು! ಮಹಾಮಂದಿರಕ್ಕೆ ಅಂತ ಹೇಳು !" ಮಹಾ ಅರ್ಚಕನ ಸಿಟ್ಟಾಗಲೀ ಬೈಗಳಾಗಲೀ ಆ ದೇವಸೇವಕನಿಗೆ ಹೊಸದಲ್ಲ. ಅವನು ತುಸು ಹೆದರಿದವನಂತೆ ನಟಿಸಿ, ನಡುಗುವ ಸ್ವರದಲ್ಲಿ, “ಮಹಾಮಂದಿರಕ್ಕೆ” ಎಂದು ಬೋಯಿಗಳಿಗೆ ನಿರ್ದೇಶವಿತ್ತ. ಭಟನೊಬ್ಬ “ದಾರಿ! ದಾರಿ!” ಎನ್ನುತ್ತ ಪಲ್ಲಕಿಯ ಮುಂದುಗಡೆಯಿಂದ ಸಾಗಿದ.

  • * * *

ಮುಂದೆ ಸ್ವಲ್ಪ ಹೊತ್ತಿನಲ್ಲೇ ಹೆಖ್ವೆಟ್ನ ದೋಣಿ ಕಟ್ಟೆ ಮುಟ್ಟಿತು. ಕೆಳಕ್ಕಿಳಿದು ಆತ ವಂದನೆಗಳನ್ನೆಲ್ಲ ಮುಗುಳುನಗೆ ಬೀರುತ್ತ ಸ್ವೀಕರಿಸಿದ. ಹೆಖ್ವೆಟನ ಪ್ರಸನ್ನ ಮುಖಮುದ್ರೆಯಿಂದ ಉತ್ತೇಜಿತವಾಗಿ ಕಟ್ಟೆಯ ಅಧಿಕಾರಿ, ತಗ್ಗಿದ ಧ್ವನಿಯಲ್ಲಿ “ಹೋದ ಕೆಲಸ ಆಯ್ತೂಂತ ತೋರ್ತದೆ,” ಎಂದ. ಅವನನ್ನು ದುರುಗುಟ್ಟಿ ನೋಡಿ ಹೆಖ್ವೆಟ್ ಉತ್ತರವಿತ್ತ : "ಸುಂಕದವನು ಸುಖ ದುಃಖ ಕೇಳಬಾರದು ಮಗೂ ಬಂದ ದೋಣಿ, ಹೋದ ದೋಣಿ, ಜಮೆಯಾದ ಹಣ ಎಷ್ಟು ಅಂತ ಲೆಕ್ಕ ಇಟ್ಟರೆ ಸಾಕು.” ಅಧಿಕಾರಿ ಮನಸ್ಸಿನಲ್ಲೆ 'ಸಿಡುಕಗೂಬೆ' ಎಂದು ಹೆಖ್ವೆಟ್ನನ್ನು ಜರೆದು, ಅಂಗೈಗಳನ್ನು ಪರಸ್ಪರ ತೀಡಿ ದೇಶಾವರಿ ನಗೆ ಬೀರಿದ. ಸ್ವರವನ್ನು ಮೆದುಗೊಳಿಸಿ ಹೆಖ್ವೆಟ್ ಕೇಳಿದ : "ಅಮಾತ್ಯರು ಎರಡು ಪಲ್ಲಕಿ ಕಳಿಸಿದ್ರಾ?” “ ಹೂಂ,” “ ನಾನು ಮನೆಗೆ ಹೋಗಿ ಹಾಯಾಗಿ ಒಂದಿಷ್ಟು ನಿದ್ದೆ ಮಾಡ್ತೇನೆ” "ಹೂಂ." ಒಂದೇ ದಿನದಲ್ಲಿ ನಾಲ್ಕು ಬೆರಳು ಎತ್ತರ ಬೆಳೆದವನಂತೆ ನಡೆಯುತ್ತ ಆತ ಪಲ್ಲಕಿಯ ಬಳಿ ಸಾರಿ ಅದನ್ನೇರಿದ.... ....ಹಾಯಾಗಿ ನಿದ್ದೆ ಹೋಗುವುದು ಮಾತ್ರ ಆಗಲಿಲ್ಲ. ಹೆಖ್ವೆಟ್ ಮನೆತಲಪಿದ ಸ್ವಲ್ಪ ಹೊತ್ತಿನಲ್ಲೇ ಅಮಾತ್ಯ ಆಮೆರಬ್ ಅವನನ್ನು ಕಾಣಲು ಬಂದ.ಆನ್ ನಗರಿಯಲ್ಲಿ ಹೇಪಟ್ನೊಂದಿಗೆ ಏನೇನು ಮಾತುಕತೆ ಆಯಿ