ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೭೩ ತೆಂದು ತಿಳಿಯುವ ತವಕ ಅವನಿಗೆ. ಬಂದವನು ಹೆಖ್ವೆಟ್‍ನ ಮನೆಯಲ್ಲೇ ಊಟಕ್ಕೆ నింತ. ಹೇಪಾಟ್-ಹೆಖ್ವೆಟ್‍ರ ನಡುವೆ ನಡೆದ ಮಾತುಕತೆ ಪರಿಣಾಮಕಾರಿ ಯಾಗಿತ್ತು, ಆದರೆ ದೀರ್ಘವಾಗಿರಲಿಲ್ಲ.

ತಾನು ಅಡಿದ್ದ ಬಣ್ಣದ ಮಾತುಗಳಿಗೆ ಮತ್ತಷ್ಟು ಮೆರುಗು ಕೊಟ್ಟು ಹೆಖ್ವೆಟ್ ವರದಿ ನೀಡಿದ. ಸೈನ್ಯ ಗಡಿಗೆ ಮಹಾ ಅರ್ಚಕ ನೀಡಿದ್ದ ರಹಸ್ಯ ಭೇಟೆಯ ವಿಷಯವನ್ನು ತಿಳಿಸಿದ.

“ನನಗೆ ಒಪ್ಪಿಸಿದ್ದು ಮಹಾ ಅರ್ಚಕನನ್ನು ಕರಕೊಂಡು ಬರೋ ಕೆಲಸ; ಅದನ್ನಂತೂ ನಿರ್ವಹಿಸಿದ್ದೇನೆ " ఎంದ,ಕೊನೆಯಲ್ಲಿ. ಆಮೆರಬ್ ತಾನು ಹಾಕಿದ್ದ ಉರುಳನ್ನು ಜಗ್ಗ ತೊಡಗಿದ. "ಮಹಾ ಅರ್ಚಕನನ್ನು ಅರಮನೆಗೆ ಯಾವಾಗಾ ಕರಿಯೋಣಾ ? " “ ನಾಳೆ ಬೆಳಿಗ್ಗೆಯೇ ಕರೆಸು.. ಯಾರು ಬೇಡ ಅಂದೋರು?” "ನೀನು ಮಹಾಮಂದಿರಕ್ಕೆ, ಹೋಗಿ-” "ಅದು ಬೇರೆ ఇನ್ನು. ಸರಿ, ಸರಿ.....” " ಹೆಖ್ವೆಟ್, ఇದು నిన్నింದಲೇ ಆಗಬೇಕಾದ್ದು. ಬಲು ಸೂಕ್ಷ್ಮ ಪರಿಸ್ಥಿತಿ ಅವನೇನಾದರೂ ಹಟತೊಟ್ಟು ಇವತ್ತು ನಾಳೆ ಅಂದರೆ ಅವಮಾನವಾಗ್ತದೆ. ಇಡೀ ರಾಜಧಾನಿಯೇ ಕುತೂಹಲದಿಂದ ನಮ್ಮ ಕಡೆ ನೋಡ್ತಿದೆ.” “ ಈಗ ನೀನು ಇಲ್ಲಿಂದ ಮಹಾಮನೆಗೆ ಹೋಗ್ತೀಯೇನೊ?" "ಹೌದು. ನಾನು నిನ್ನಲ್ಲಿಗೆ ಬಂದಿರೋದು ಸೆರೋಗೆ ತಿಳಿದಿದೆ. ಕಾಯ್ತಾ ಇರಾರೆ. ನಾಳೆ ಬೆಳಿಗ್ಗೆ ಹೇಪಾಟ ಜತೆ ಮಾತುಕತೆಗೆ ಏರ್ಪಾಟು ಮಾಡ್ಬೇಕು.” "ಹೊರಡು ಹಾಗಾದರೆ." " ಹೂಂ. ನೀನು ವಿಶ್ರಾಂತಿ ತಗೋ." " ಮುದುಕ ಹೆಖ್ವೆಟ್‍ಗೆ ವಿಶ್ರಾಂತಿಯ ಆಗತ್ಯ ಇದೆ ಅಂತ ಈಗಲಾದರೂ ನಿನಗೆ ಹೊಳೀತಲ್ಲ!”

  • ನಾಳೆ ಆದಷ್ಟು ಬೇಗ ಹೋಗು. ಪೂಜೆ ಗೀಜೆ ಅಂತ ಕೈಕೊಟ್ಟಾನು. ಅರಮನೆಯ ಪಲ್ಲಕಿಯಲ್ಲೇ ಹೋಗು. ಬೋಯಿಗಳ ಜತೆ ಭಟರೂ ದಳ ಪತಿಯೂ ಇರಲಿ. ಅವರೆಲ್ಲ ನಸುಕಿನಲ್ಲೇ ಇಲ್ಲಿಗೆ ಬಂದು ನಿನಗಾಗಿ ಕಾಯ್ತಾರೆ.”