ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ದೋಣಿಯಲ್ಲಿ ತಾನು ಯಾವ ಭಂಗಿಯಲ್ಲಿ ನಿಂತೆ; ಕೈಗೋಲನ್ನು ಹೇಗೆ ಹಿಡಿದು ಗುರಿ ಇಟ್ಟೆ ; ತಾನು ಅತ್ತಿತ್ತ ಮಿಸುಕದಂತೆ ಒಬ್ಬ ಅ೦ಬಿಗ ತನ್ನ ಮೊಣಕಾಲುಗಳನ್ನು ಯಾವ ರೀತಿ ಭದ್ರವಾಗಿ ಹಿಡಿದುಕೊ೦ಡು ; ತಾನು ಎಸೆದ ಕೋಲು ತಗುಲಿದಾಗ ಬಾತು ಕ್ವಾಕ್ ಸದ್ದು ಮಾಡುತ್ತ ಹೇಗೆ ಪಟಪಟನೆ ಹಾರಿ ನೀರಿಗೆ ಬಿತ್ತು ಎಂಬುದನ್ನೆಲ್ಲ ಉತ್ಸಾಹದಿಂದ ವಿವರಿಸುತ್ತ ರಾಜಕುಮಾರ ಊಟ್ ಮಾಡಿದ. ಬೆ೦ಟ್ ಮತ್ತು ಭೋಜನಶಾಲೆಯ ದಾಸದಾಸಿಯರಿಗೆ ಇದು ಎಳೆಯನ ಸಾಹಸದ ಅಪೂರ್ವ ಕಥೆ. ರಾಜಕುಮಾರ ತನ್ನ ಕೊಠಡಿಗೆ ಹಿಂತಿರುಗಿದ ಕೆಲ ಸಮಯದಲ್ಲೇ ಮಹಾರಾಣಿಯ ಆಗಮನವಾಯಿತು. ಪೆರೋ ಸಮುಖದಿಂದ ಬರುತ್ತಿದ್ದ ಒಡತೀಯನ್ನು ಇದಿರ್ಗೊಳ್ಳಲು ಹೋದ ಬೆ೦ಟ್ ರಾಜಕುಮಾರನ ಬೇಟೆಯ ವಿಷಯ ತಿಳಿಸಿದಳು. . " ಹ್ಹಾ ! ಹೌದೆ ?" ಎ೦ದಳು ನೆಫಟೀಮ್ . (ಹುಡುಗಿ ಋತುಮತಿಯಾಗುವಷ್ಟೇ ಸಂಭ್ರಮದ ಸಂಗತಿ, ಹುಡುಗ ಬೇಟೆಯಲ್ಲಿ ಹೊಡೆದು ಕೆಡಹುವ ಮೊದಲ ಕಾಡುಬಾತುಕೋಳಿ.) ರಾಜಕುಮಾರನ ಕೊಠಡಿಗೆ ಬ೦ದವಳೇ ಮಹಾರಾಣಿ ಮಗನ ಬಾಯಿಗೆ ಪ್ರಸಾದ ಹಾಕಿದಳು. ತಟ್ಟೆಯನ್ನು ಬದಿಗಿರಿಸಿ ಅವನನ್ನು ಆಲಿ೦ಗಿಸಿದಳು. ಅಮ್ಮ ನಿನ್ನ ತುಟಿ ರಂಗು....” ಎಂದು ಮಗ ಎಚ್ಚರಿಸಿದರೂ, ತಾಯಿ ಆತನ ಹಣೆ ಮುಖ ಎದೆಗೆಲ್ಲ ಲೊಚಲೊಚನೆ ಮುತ್ತುಕೊಟ್ಟ ಅ೦ದಳು : “ಇವತ್ತಿನಿಂದ ನೀನು ಪ್ರಬುದ್ಧ. ಹೆಚ್ಚು ಗಾ೦ಭೀರ್ಯದಿ೦ದ ಇರಬೇಕು. ರಕ್ಷಣೆಗೆ ಬೇರೆ ಭಟರೂ ದೋಣಿಗಳೂ ಇಲ್ಲೆ ವಿಹಾರ-ಗಿಹಾರಕ್ಕೆ ಹೋಗ್ಬಾರದು ?” “ಹೊo.”' ಮಹಾರಾಣಿ ಚಪ್ಪಾಳೆ ತಟ್ಟಿದಳು. ಒಳಗೆ ಬ೦ದ ಬೆ೦ಟ್ ರಷ್ಟ್ಗೆ ಆಕೆ ಹೇಳಿದಳು :ಅಡುಗೆ ಆಗ್ಬೇಕೊ೦ತ ಪಾಕಶಾಲೆಗೆ ತಿಳಿಸಿಬಿಡು."