ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯು೦ಜಯ

        ಹೂ೦.ಮಹಾರಾಣಿ.

ಆ ಅಡುಗೆಯನ್ನು ಹೊಟ್ಟೆ ತುಂಬ ತಾನು ಉಣ್ಣಬೇಕು ಎಂದು ಕೊಂಡಿದ್ದ, ರಾಜಕುಮಾರ, ಮಹಾರಾಣಿಯ ಏರ್ಪಾಟು ತಿಳಿದಾಗ, 'ಅಮ್ಮ, ನನಗೆ ನಿದ್ದೆ ಬರ್ತಿದೆ' ಎಂದು ಹೇಳಿ, ತನ್ನ ಮುಖಕ್ಕೂ ಎದೆಗೂ ಅಂಟಿದ್ದ ತುಟಿರಂಗನ್ನು ತೊಳೆಯಲು ಪಕ್ಕದಲ್ಲಿದ್ದ ಶೌಚಗೃಹಕ್ಕೆ ಹೋದ.

             *                *                   *                    *

ನಿರೀಕ್ಷೆ. ಕಾತರ, ಸ೦ಬ೦ಧಪಟ್ಟವರಿಗೆಲ್ಲ, (ಬೆಳಿಗ್ಗೆ ಹೆಖ್ವೆಟ್ ನನ್ನು ಕ೦ಡೊಡನೆ ಹೇಪಾಟ್ ಕೇಳಿದ : ಏನು ವೃದ್ಧರು ಮತ್ತೆ ಬ೦ದಿರಿ? ಮಹಾ ಅರ್ಚಕರನ್ನು ಅರಮನೆಗೆ ಕರಕೊಂಡು ಹೋಗೋದಕ್ಕೆ.”ಎ೦ದ ಹೆಖ್ವೆಟ್. ಬರ್ರ್ತೇನೆ ಆ೦ತ ಮಹಾರಾಣಿಯವರಿಗೆ ಹೇಳಿದ್ದೆನಲ್ಲ. ಅದು ಹೊಸ ಸಂಗತಿ. 'ನಿನ್ನೆ ಸ೦ಜೆಯೋ ರಾತ್ರೆಯೋ ಅರಸಿ ಮಹಾ ಮಂದಿರಕ್ಕೆ ಬಂದು ಹೇಪಾಟ್ ನನ್ನು ಕಂಡಿರಬೇಕು.' ತಾನು ಯೋಚಿಸುತ್ತಿ ದ್ದುದರ ಸುಳಿವೂ ಸಿಗದಂತೆ ಹೆಖ್ವೆಟ್ ನಗೆಯ ಮುಖವಾಡ ಧರಿಸಿ ನುಡಿದ : " ಜತೆಗೆ ಒಬ್ಬರು ಇದ್ದರೆ ಭೂಷಣ ಅಲ್ಲವಾ?” )

        ಅಮಾತ್ಯ ಬೇಗನೆ ಬಂದಿದ್ದ, ಅರಸನೂ ಅರಮನೆಯ ಮಂದಿರಕ್ಕೆ  ಹೋಗಿ  ಬ೦ದು  ಸಿದ್ಧನಾದ. (ರಾತ್ರೆ ಅರೆಬರೆ ನಿದ್ದೆ, ಒಂದು ಕನಸು. ಭಾರಿ ಮೆರವಣಿಗೆ. ಮಧ್ಯದಲ್ಲಿ ಪಲ್ಲಕಿಯಲ್ಲಿ ನೆಫರ್ ಟೀಮ್ ; ಎಡಕ್ಕೆ ಹೇಪಾಟ್, ಬಲಕ್ಕೆ ತಾನು___ಪಲ್ಲಕಿಗಳಲ್ಲಿ: ಜನ ಹರ್ಷೋದ್ಗಾರ ಮಾಡುತ್ತಿದ್ದರು . ಮುಂದುಗಡೆ ತಾನು, ಅನಂತರ ನೆಫರ್ ಟೀಮ್, ಬಳಿಕ ಹೇಪಾಟ್ ಇರಬೇಕಾಗಿತ್ತು . ಹೋಗಲಿ . ಹೀಗೆಯೇ ಇರಬೇಕು ಎ೦ದಾದರೆ ಹೀಗೆಯೇ ಇರಲಿ, ಇದು ಕೆಟ್ಟ ಕನಸ೦ತೂ ಅಲ್ಲ . ಅಮಾತ್ಯನಿಗೆ ಸ್ವಪ್ನದ ವಿಷಯ ಹೇಳಲೋ ಬೇಡವೋ ಎಂಬ ತಾಕಲಾಟ, ಮನಸ್ಸಿನಲ್ಲಿ, ಬೇಡ ಎನಿಸಿತು.