ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ೫೨೮                       ಮೃತ್ಯುಂಜಯ
  ಅಷ್ಟು ಘೋರವಾದದ್ದು. ಆದರೆ ನಮ್ಮದು ಧರ್ಮಪರಿಪಾಲನಾ ಸಮಾಜ. ಥೊಥ್ ದೇವತೆಯ ನ್ಯಾಯ ನಿಯಮಾವಳಿಯನ್ನು ಆಧರಿಸಿ ಐಗುಪ್ತ ನಿಂತಿದೆ. ಗೋರಿ ಅತಿಕ್ರಮಣ, ಕೊಲೆ, ಬಂಡಾಯ ಏನಿದ್ದರೂ ನಾವು ವಿಚಾರಣೆ  ನಡೆಸ್ತೇವೆ. ತಪ್ಪು ಒಪ್ಪಿಕೊಳ್ಳುವುದಕ್ಕೆ ಅಥವಾ ಅಲ್ಲಗಳೆಯುವುದಕ್ಕೆ ಅಪರಾಧಿಗೆ ಅರ್ಥಾತ್ ಆರೋಪಿ ಅವಕಾಶ ಕೊಡ್ತೇವೆ....”
   (ಪೆರೋ ಕುಳಿತಲ್ಲೇ ಪೀಠಕ್ಕೊರಗಿ ವಿಶ್ರಾಂತಿ ಪಡೆದ.)
   ಮಹಾ ಅರ್ಚಕ ಕಡೆಗಣ್ಣಿನಿಂದ ಅಮಾತ್ಯನನ್ನು ದಿಟ್ಟಿಸಿದ. ಟೆಹುಟಿ ನ್ಯಾಯಸ್ಥಾನದಲ್ಲಿ ತಾನೇ ಪ್ರಧಾನ ವ್ಯಕ್ತಿ ಎನ್ನುವಂತೆ ಸುತ್ತಲೂ ನೋಡಿದ. ಗೇಬು ಎಡಕ್ಕೊಮ್ಮೆ ಬಲಕ್ಕೊಮ್ಮೆ ವಾಲಿದ. ಅಮಾತ್ಯ ಹೆಸರುಗಳನ್ನು ಹೇಳಿದಾಗ ನುಟ್ಮೋಸ್ ಹಲ್ಲು ಕಿರಿದು ತಲೆ ಬಾಗಿಸಿದ; ಸೆತೆಕ್ ನಖ್ತ್ ಗಲ್ಲ ತುರಿಸಿದ; ಸೆನ್ ಉಸರ್ಟ್ ತಲೆಯ ಮೇಲಿನ ಕೆಲವೇ ಕೂದಲನ್ನು ಅಂಗೈಯಿಂದ ಸವರಿದ.
   ಮೆನೆಪ್ಟಾಗೆ ಅಮಾತ್ಯನ ಮಾತುಗಳು ನೀರಸವಾಗಿ ಕಂಡು, ಹಿಂದೆ ಎಲ್ಲೋ ಇದನ್ನು ತಾನು ಕೇಳಿರುವೆನಲ್ಲ, ಈ ದೃಶ್ಯ ಹಿಂದೆ ಎಂದೋ ನಡೆದು ದರ ಪುನರಾವರ್ತನೆಯಂತಿದೆಯಲ್ಲ-ಎನಿಸಿತು.
   ಸಾಮಾನ್ಯ ಜನ ನ್ಯಾರ್ಯಮೂರ್ತಿ ಹೇಳುತ್ತಿದ್ದುದನ್ನು ಅರ್ಥ ಮಾಡಿ ಕೊಳ್ಳಲು ಯತ್ನಿಸುತ್ತ, ಮೆನೆಪ್ಟಾನನ್ನು ನೋಡುತ್ತ ನಿಂತರು.
   (ಹೊರಗೆ ಜನರ ಸದ್ದನ್ನು ನಿಲ್ಲಿಸಲು ಯೋಧರು ಶ್ರಮಿಸಬೇಕಾಯಿತು. ಮಗ್ಗುಲು ಬಾಗಿಲು-ಹೊರಕ್ಕೆ ಮತ್ತು ಒಳಕ್ಕೆ ದಾರಿ. ಅದನ್ನು ತೆರೆದರು. ಹೊರಹೋದಷ್ಟು ಜನ ಒಳಕ್ಕೆ ಬರಲು ಅವಕಾಶ.)
   ಕ್ಷಣ ಮೌನದ ಬಳಿಕ ನ್ಯಾಯಮೂರ್ತಿ ಅಮಾತ್ಯನೆಂದ:
   "ಟೆಹುಟಿ, ಗೇಬು ಮತ್ತು ಭೂಮಾಲಿಕರು ನ್ಯಾಯಸ್ಥಾನದ  ತಿಳಿವಳಿಕೆಗಾಗಿ ಈಗ ದೂರು ಸಲ್ಲಿಸ್ತಾರೆ.”  
   ತನ್ನ ಪೀಠದಿಂದ ಎದ್ದು ನಿಂತು,“ಪೆರೋನ ಆಯುರಾರೋಗ್ಯ ವರ್ಧಿಸಲಿ!” ಎಂದು ವಂದನೆ ಸಲ್ಲಿಸಿದ ಟೆಹುಟಿಯನ್ನು ಮೆನೆಪ್ಟಾ ದಿಟ್ಟಿಸಿದ. ತನ್ನೂರಿನ ರಾಜಗೃಹದಲ್ಲಿ ತಾನು ಈತನನ್ನು ಕಂಡಾಗ ಇನ್ನಷ್ಟು ದೃಢಕಾಯನಾಗಿದ್ದ ನೇನೋ.ಎದೆಯ ಮೇಲಿನ ಆಭರಣಗಳು ದಾರಿದ್ರ್ಯದ ದ್ಯೋತಕವಲ್ಲ. ಆದರೂ