ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ

        ಮೆನೆಪ್ ಟಾಗೆ ವಿಚಿತ್ರ ಅನುಭವ. ಅನ್ಯಾಯದ ದಾರದಲ್ಲಿ ಅಸತ್ಯ ಗಳನ್ನು ಪೋಣಿಸಿ ಮಾಡಿದ ಮಾಲೆ. ನ್ಯಾಯಮೂರ್ತಿಗೆ ಅರ್ಪಣೆ. ನೆಲ ಮಾಳಿಗೆಗೆ ತನ್ನನ್ನು ತಳ್ಳಿದೊಡನೆಯೇ ಈ ಹೊಸ ನಾಟಕದ ರೂಪುರೇಷೆಗಳನ್ನು ನಿರ್ಧರಿಸಿರ್ಬೇಕು. ತಾವು ಆಡಬೇಕಾದ ಮಾತುಗಳನ್ನು ಎಷ್ಟು ಚೆನ್ನಾಗಿ ಕಲಿತಿದ್ದಾರೆ!
        ....ಜನರ ನೂಕು ನುಗ್ಗಲು. ಅರಮನೆ ಕಾವಲು ಭಟರ ದಳಪತಿಗೆ ಇವತ್ತು ಬೆವರಿಳಿಯುತ್ತದೆ. ಪಾರ್ಶ್ವದ್ವಾರದಿಂದ  ಜನ ಹೊರಗೆ ಹೋಗುತ್ತಿದ್ದಾರೆ; ಒಳಗೆ ಬರುತ್ತಿದ್ದಾರೆ. ಇನ್ನು ಯಾರ ಸರದಿ? ಯಾರು ನಟರು, ನರ್ತಕರು? ನ್ಯಾಯಸ್ಥಾನದ ಪ್ರತಿಷ್ಠಿತರ ಮುಖಗಳ ಮೇಲೆಲ್ಲ ಒಂದೇ ಭಾವ ಬಿಂಬಿತವಾಗಿದೆಯಲ್ಲ? ವಿಜಯದ ಉನ್ಮಾದದಿಂದ ಇವರ ಕಣ್ಣುಗಳು ಬೆಳಗುತ್ತಿವೆ. ತಾವು ಘಾಸಿಗೊಳಿಸಿದ ಮಿಕದ ಸುತ್ತಲೂ ನೆರೆದಿರುವ ಬೇಟೆ ಗಾರರು ಇವರು.
        ನುಟ್ ಮೋಸ್. ಪೆರೋನ ಪಲ್ಲಕಿ ಹೊತ್ತ ಈ ಅದೃಷ್ಟಶಾಲಿ ಪ್ರತಿಷ್ಠೆಯ ಕಳೆಯಿಂದ ಬೆಳಗುತ್ತಿದ್ದಾನೆ. ಹೊಲಗಳನ್ನು ಕಳೆದುಕೊಂಡ ಭೂಮಾಲಿಕನಲ್ಲ. ರಾಜಧಾನಿಯ ನಾಗರಿಕತೆಯ ಲೇಪನದಿಂದ ಹೊಸ ಮನುಷ್ಯನಾದವನು. ಸೆತೆಕ್ ನಖ್ತ್ ಸೆನ್ ಉಸರ್ಟರೂ ಏಳುತ್ತಿದ್ದಾರೆ. ಮೂರು ಕಂಠಗಳಿಂದ ಒಂದೇ ಹಾಡು ? ಒಟ್ಟಿಗೆ ಹಾಡು?
        (ಹರಿಯುತ್ತಿದ್ದ ಮಾತು ನಿಂತಿದೆ ಎಂದು ಪೆರೋಗೆ ಎಚ್ಚರ . ಈ ಆಸನ ಇಕ್ಕಟ್ಟು. ಮೈ ಕೈ ನೋವು . ಸುಪ್ಪತ್ತಿಗೆಯ ಮೇಲೆ ಮಲಗ ಬೇಕು....)”
         ಬಾಗಿ ಬಾಗಿ ನ್ಯಾಯಸ್ಥಾನ ಪುನಃ ಪುನಃ ವಂದಿಸಿ ನುಟ್ ಮೋಸ್ ಆರಂಭಿಸಿದ  :
         "ಪೆರೋನ  ಆಯುರಾರೋಗ್ಯ ವರ್ಧಿಸಲಿ ! ಇಲ್ಲಿ ನಿಂತಿರುವ ನಾವು ಶೋಶಣೆಗೆ ಒಳಗಾದವರು ; ಅನ್ಯಾಯಕ್ಕೆ ಬಲಿಯಾದವರು. ನಮ್ಮೆಲ್ಲರ  ಪರವಾಗಿ ನಾನು ಈ ದೂರು ಸಲ್ಲಿಸುತ್ತಿದ್ದೇನೆ. ನ್ಯಾಯಮೂರ್ತಿಯವರು ಪರಾಮರ್ಶಿಸಬೇಕೂಂತ ಪ್ರಾರ್ಥನೆ."