ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

    (ಪೆರೋನನ್ನು ಮತ್ತೆ ನಿದ್ರೆ ಆವರಿಸಿತು.)
     ಗಂಟಲು ಸರಿಪಡಿಸಿಕೊಂಡು ನುತ್ ಮೋಸ್ ಮುಂದುವರಿಸಿದ :
     “ನಾನು ನುಟ್ ಮೋಸ್ , ಮಹಾಪ್ರಭುವಿನ ಪಲ್ಲಕಿ ಹೊತ್ತಿರುವ ಪುಣ್ಯಶಾಲಿ. ನೀರಾನೆ ಪ್ರಾಂತದ ಬಂಡಾಯಕ್ಕೆ ಮುಂಚೆ ಅಲ್ಲಿನ ಅತಿ ದೊಡ್ಡ ಭೂಮಾಲಿಕನಾಗಿದ್ದವನು. ಪ್ರಾಂತಪಾಲರ ನೇಮಕಕ್ಕೆ ಮೊದಲು ಮಹಾಪ್ರಭುವಿನ ಪ್ರತಿನಿಧಿಯಾಗಿದ್ದವನು. ಈತ ಸೆತೆಕ್ ನಖ್ತ್, ಆತ ಸೆನ್ ಉಸರ್ಟ್—ಎಲ್ಲವನ್ನು ಕಳೆದುಕೊಂಡು ನನ್ನ ಹಾಗೆಯೇ ದೊರೆಯ ಕೃಪಾಶ್ರಯ ಪಡೆದವರು. ಮಹಾ ಅರ್ಚಕರ ಕರುಣೆ, ಅಮಾತ್ಯರ ಸಹಾನುಭೂತಿ ನಮ್ಮನ್ನು ಉಳಿಸಿವೆ. ಈ ದುಷ್ಟನ ಕೈಯಲ್ಲಿ ನಾವು ಪಟ್ಟ ಕಷ್ಟವನ್ನು ಏನೂಂತ ನಿವೇದಿಸಲಿ ? ಒಬ್ಬ ಸಾಮಾನ್ಯ ಮನುಷ್ಯ ಜನರನ್ನು ಮರಳು ಮಾಡಿ, ಅವರನ್ನು ಸಾಧನವಾಗಿ ಬಳಸಿ ಸಮಾಜವನ್ನು ಬುಡಮೇಲು ಮಾಡ ಬಹುದಾಂತ ಯಾರು ಭಾವಿಸಿದ್ದರು? ಬಂಡಾಯ ನಡೆದ ದಿವಸ ಮಹಾ ಪ್ರಭುವಿನ ಜತೆ,ಅಬ್ಟು ಯಾತ್ರೆ ಮುಗಿಸಿ ರಾಜಧಾನಿಗೆ ಪ್ರಯಾಣ ಬೆಳೆಸ್ತಾ ಇದ್ದೆ.....ಆಮೇಲೆ ನನಗೆ ತಿಳಿದು ಬಂದ ಪ್ರಕಾರ ಈತನೂ ಇವನ ಸಂಗಡಿಗರೂ ರಾಜಗೃಹದ ಪ್ರಾಕಾರವನ್ನು ಪುಡಿ ಮಾಡಿದ್ರು. ಎಲ್ಲ ಭೂಮಾಲಿಕರ ಹೊಲ ಕಸಕೊಂಡ್ರು. ರಾಸುಗಳನ್ನು ವಶಕ್ಕೆ ತಗೊಂಡ್ರು.ತಮಗೆ ಬೇಕಾದವರಿಗೆಲ್ಲ ಹಂಚಿದ್ರು. ಹೊಡೆದ್ರು ಬಡೆದ್ರು, ಹಿಂಸಾಚರಣೆ ಮಾಡಿದ್ರು. ಹೆಂಗಸರ ಮಾನಭಂಗ; ಅತ್ಯಾಚಾರ. ಅಯ್ಯೋ! ಅಯ್ಯೋ! ಏನು ಹೇಳ್ಲಿ? ಪರಂಪರಾಗತವಾಗಿ ನಮ್ಮ ಜತೆ ಸುಖವಾಗಿದ್ದ ದಾಸದಾಸಿಯರನ್ನು ಬಿಡುಗಡೆ ಮಾಡಿದ್ರು, ಅವರು ಅನಾಥರಾದ್ರು. ತಮ್ಮ ಬಾಲಬಡುಕ ಬಡವರ ಮಕ್ಕಳಿಗೆ ಶಾಲೆ ! ಲಿಪಿ ಸುರುಳಿ ಪಾಠ ! ನಮ್ಮ ಮಕ್ಕಳಿಗೆ ಜೀತ! ರಾಜಗೃಹದ ಪ್ರಾಕಾರ ದ್ವಾರವನ್ನು ಮುರಿದ ಮರದ ದಿಮ್ಮಿ ಇವರ ಸ್ಮಾರಕ ಕಂಬ. ಅದಕ್ಕೆ ಅಲಂಕಾರ. ತಾನೆ ಮಹಾರಾಣಿ ಅನ್ನುವ ಹಾಗೆ ಈತನ ಹೆಂಡತಿಯೇ ಮೆರೀತಿದ್ದಾಳೆ . ಇನ್ನೂ ಸ್ವಲ್ಪ ಸಮಯ ಹೀಗೆ ಬಿಟ್ಟರೆ ಸಮಾಜದ ಬೆನ್ನೆಲು ಬಾದ ಭೂಮಾಲಿಕ ಸಮುದಾಯವೇ ನಾಶವಾಗ್ತದೆ. ಒಂದು ಸಿಂಹವನ್ನು ಕೊಂದು ಅದರ ಒಂದು  ಕಣ್ಣು ಕುಕ್ಕಿ ತೆಗೆದು, ಹೊಟ್ಟು ತುಂಬಿಸಿ ಹೊಲಿದು, ಅದಕ್ಕೆ ಬಕಿಲ ಅಂತ ಹೆಸರಿಟ್ಟು, ನಮ್ಮ ಮಾನ್ಯ ಆ ಕಂದಾಯ ಅಧಿಕಾರಿ