ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯಂಜಯ ಹೋದಳು.

  'ಮಹಾತಾಯಿ!'ಮೆನೆಪ್ ಟಾಗೆ ಭಾವೋದ್ವೇಗ. ಈ ಜೀವಗಳಿಗೆ ತಾನು ಆಜೀವ ಋಣಿ. ಈ ಹಸುರೆಲೆ-ಓ! (ಈಗ ವಿಪರೀತ ಭಾವೋದ್ವೇಗ.) ಆಕೆ ನಿಜವಾಗಿಯೂ ನನ್ನ ಸಂಬಂಧಿಯೇ. ಈ ರೊಟ್ಟ ಬಟಾ ತಂದುದು. ನಮ್ಮೂರಿನ ಎಲೆಯಲ್ಲವೆ? 'ನಾನು ಅಸಹಾಯನಾದರೂ ಈ ಬಾಂಧವರು ಚಟುವಟಿಕೆಯಿಂದಿದ್ದಾರೆ.”
  ಒಬ್ಬ ಯೋಧ ಗಟ್ಟಿಯಾಗಿ ಅಂದ :
  "ಶೀಬಾ ಬಹಳ ಧೈರ್ಯವಂತೆ."
  ಇನ್ನೊಬ್ಬನೆಂದ :
  “ ಗಂಡ ಬಂದಿದ್ದಾನೆ. ಒಳ್ಳೆಯದವನು.”
  "ಹೊಂ."
  ಮೆನೆಪ್ಟಾನ ಬಲತೋಳಿನ ಹಗ್ಗವನ್ನು ಸಡಿಲಬಿಟ್ಟು ಆ ಯೋಧ ಹೇಳಿದ :
  “ಬೇಗ ತಿಂದ್ಬಿಡಿ. ಆ ದಳಪತಿ ಬಂದು ಸುಮ್ಸುಮ್ನೆ ಗಲಾಟೆ ಮಾಡಾರು.”
  ಗಂಟಲು ಒತ್ತರಿಸಿದ ಅನುಭವ. ತನಗೆ ಹಸಿವಿಲ್ಲ, ಆದರೂ, ಬಟಾ ಕಳುಹಿಸಿರುವನೆಂದು, ಮಹಾತಾಯಿ ತಂದುಕೊಟ್ಟಳೆಂದು ತಾನು ತಿನ್ನಬೇಕು. ಸ್ಪರ್ಶ. ' ಓ!' ರುಚಿ. 'ಓ ! ಓ!' ಕಣ್ಣಂಚಿನಲ್ಲಿ ನೀರು. ನೆಫಿಸ್ ತಟ್ಟದ ರೊಟ್ಟ. ಎರಡು ತುಣುಕು ಮಾನಿನ ಉಪ್ಪೇರಿ. ಇದು ಪರಮ ಸುಖ. 'ಓ ನೆಫಿಸ್ ! ಓ ನೆಫಿಸ್ !' ನನಗೆ ಹಸಿವಾಗಿದೆ. (ತಿನ್ನತೊಡಗಿದ ಮೆನೆಪ್ಟಾ ತಲೆಬಾಗಿಲಿನಿಂದ ಒಳಬಂದವರಿಗೆ ಕಾಣಿಸದಿರಲೆಂದು, ಕಾವಲು ಭಟರು ಎದ್ದುನಿಂತು, ಸಾಲುಗಟ್ಟಿ ಅವನಿಗೆ ಅಡ್ಡವಾದರು.)
  (ನಗರದ ಉದ್ಯಾನದಲ್ಲೋ ನದೀತಟದಲ್ಲೋ ಬಟಾ ಮತ್ತು ಸಂಗಡಿಗರು ಅವಿತಿಟ್ಟುಕೊಂಡು ಉಣ್ಣುತ್ತಿರಬೇಕು. ಅವರ ಮಧ್ಯೆ ರಾಮೆರಿಪ್ಟಾ. 'ಅವನನ್ನು ಇನ್ನು ನಾನು ನೋಡೋದು ಯಾವಾಗ? ಸ್ವತಂತ್ರನಾಗಿ ನ್ಯಾಯ ಸ್ಥಾನದಿಂದ ಹೊರಹೋಗೋದಕ್ಕೆ ನನ್ನನ್ನು ಇವರು ಬಿಡುತ್ತಾರಾ ? ನೆಫಿಸ್ ಲೆಕ್ಕ ಹಾಕಿ ಹೇಳಿದ್ದಳು. ಕುಯಿಲಿಗೆ ಸರಿಯಾಗಿ ಹೆರಿಗೆ. ನಾನು ಹತ್ತಿರ ಇಲ್ಲ ಎಂದು ಮನಸ್ಸು ಮುದುಡಿರಬೇಕು. ನಾನಿಲ್ಲದಿದ್ದರೂ ಏನು ? ಇಷ್ಟೊಂದು