ಈ ಪುಟವನ್ನು ಪ್ರಕಟಿಸಲಾಗಿದೆ



೫೭೮

ಮೃತ್ಯುಂಜಯ

ಸ್ವಲ್ಪ ವೇಳೆಗೆ ಮುಂಚೆ....

****

ಅರಮನೆಯ ಆಟದ ಬಯಲು ಬರಿದಾದ ಬಳಿಕ ಕತ್ತಲೆಯ ಆಸರೆಯಲ್ಲಿ
ಶೀಬಾ ಅತ್ತಳು,"ನಾನಿನ್ನು ಬರ್ತೇನೆ" ಎಂದಳು ಬೆಕ್ ಔಟರೊಡನೆ ,ಬಟಾ
ನೊಡನೆ. ಹಾಗೆ ಹೇಳಿದ ಮೇಲೆಯೂ ಹೊರಡಲು ನಿಧಾನಿಸುತ್ತ ಅವಳೆಂದಳು;
"ನಾಳೆ ದಂಡು ನಿಮ್ಮೂರಿಗೆ ಹೊರಡ್ತದೆ. ದೇವರನ್ನು ಕರಕೊಂಡು
ಮಹಾ ಅರ್ಚಕರು ದಂಡಿನ ಜತೆ ಬರ್ತಾರೆ.”
ಗದ್ಗದಿತ ಗಂಟಲಿನಲ್ಲಿ ಬಟಾನೆಂದ :
“ಇದು ಧರ್ಮಯಾತ್ರೆಯಲ್ಲ, ದಂಡಯಾತ್ರೆ ಇದು ಯುದ್ಧ ಇವರ
ದಂಡಿಗಿಂತ ಮುಂಚೆ ನಾವು ಊರು ಸೇರ್ಬೇಕು. ಆದರೆ-----ಆದರೆ--"
ಮೆನ್ನ ನಿರ್ವಿಕಾರವಾಗಿ ಮೆಲುದನಿಯಲ್ಲಿ ನುಡಿದ :
"ನಾಯಕರು ಸಾವಿಲ್ಲದ ಜೀವ, ಮೊಸಳೆ ಪಾಲಾಗಬಾರದು.”
"ಹೌದು. ಹೌದು......."
ಶೀಬಾ ಕೇಳಿದಳು :
“ನನ್ನಿಂದೇನಾದರೂ ಸಹಾಯ ?”
ಬಟಾನೆಂದ :
"ಬೇಡ ತಂಗಿ. ನೀನು ನಮ್ಮೊಟ್ಟಿಗೆ ಇರಬಾರದು.ಅಪಾಯ ಈ
ಕೆಲಸ ನಾವು ಮಾಡ್ತೇವೆ.”
“ಆಗಲಿ, ಇಲ್ಲಿಂದ ಹೊರಗೆ ನೀವು ಹುಷಾರಾಗಿ ಹೋಗ್ಬೇಕು.”
"ಸುರಕ್ಷಿತವಾಗಿ ನಾನು ಕರಕೊಂಡು ಹೋಗ್ತೇನೆ” ಎಂದ ಮೆನ್ನ"
ಮತ್ತೊಮ್ಮೆ ತುಂಬಿಬಂದ ಕಣ್ಣುಗಳನ್ನು ಶೀಬಾ ಒರೆಸಿದಳು.
ಉಗುಳು ನುಂಗಿ, ಔಟ ಬೆಕ್ ಬಟಾ ಮೆನ್ನರನ್ನು ಒಬ್ಬೊಬ್ಬರನ್ನಾಗಿ
ನೋಡಿ, “ಬರ್ತೇನೆ ಅಣ್ಣ, ಬರ್ತೇನೆ, ನಾನು ಬರ್ತೇನೆ, ಅಯ್ಯ ಬರ್ತೇನೆ.”
ಎಂದು ಹೇಳಿ, ಅವಳು ಪಾದಗಳನ್ನು ಕಿತ್ತಳು.
ಶೀಬಾ ನಿರ್ಗಮಿಸಿದ ಬಳಿಕ ನೆಲೆಸಿದ ಮೌನವನ್ನು ಔಟ ಮುರಿದ;
“ ನಮ್ಮವರೆಲ್ಲ ಎಲ್ಲಿ ಹೋದರೊ ?”