ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೫೬೯

ಬಟಾನೆಂದ :
"ಹೊರಗೆ ಪ್ರವೇಶದ್ವಾರದ ಹತ್ತಿರದಲ್ಲೇ ಇದ್ದಾರು, ಅಹೂರಾ
ನೋಡ್ಕೊಳ್ತಾಳೆ.”
ಮೆನ್ನ ಹೇಳಿದ :
" ನಾವೂ ಇಲ್ಲಿಂದ ಹೊರಟ್ಬಿಡೋಣ. ನನ್ನನ್ನು ಹಿಂಬಾಲಿಸಿ ಬನ್ನಿ."
ಒಬ್ಬರ ಹಿಂದೆ ಒಬ್ಬರು. ಇರುಳಿನ ಕೃಪಾಛತ್ರ.ತೂಬುದಾರಿಯಾಗಿ
ನದೀ ತಟ್ಟಕ್ಕೆ. ಹೊರಬಿದ್ದೊಡನೆ, ಸಂಕಟವನ್ನು ಹತ್ತಿಕ್ಕುತ್ತ , ಬಿಕ್ಕಿಬಿಕ್ಕಿ
ಅತ್ತರು ತುಡಿತಕ್ಕೆ ಅನುಗುಣವಾಗಿ ಬಟಾನ ಪದಹತಿ, ನಡೆದುದೆಲ್ಲ
ಸುಳ್ಳು ಬರಿಯ ಕನಸು__ಎನ್ನುವುದು ಸಾಧ್ಯವಿದ್ದರೆ ? ಅಂದರೆ___ಅಂದರೆ ?
ಆಗಎಲ್ಲರೂ ದೋಣಿ ಏರಿ ಮರು ಪ್ರಯಾಣ ಬೆಳೆಸಬಹುದಿತ್ತು.
ಅವನೆಂದುಕೊಂಡ:
“ ನಾನು ಹುಚ್ಚ! ಎಲ್ಲ ಮುಗಿದೇ ಬಿಟ್ಟಿದೆ.”

ಮೆನ್ನನ ಕಿರುದನಿ ಕೇಳಿಸಿತು:

"ನಿನ್ನೆ ಅವರು ಒಪ್ಪಿಸಿದ್ದರೆ ಈ ದಾರಿಯಾಗಿಯೇ ಹೊರಗೆ ಬರ್ತಿದ್ವಿ."

ಹ್ಜ ? ಹೌದು....."

ಬಟಾನಿಗೆ ಅನಿಸಿತು : ಈ ಅಯ್ಯನನ್ನು ಹುಚ್ಚನೆಂದು ಕರೆದ ನೀಚರೂ
ಇರುವರಲ್ಲ? ಇಲ್ಲಿ ಈಗ ವಿಚಾರಶಕ್ತಿ ಇರುವ ಈತನೊಬ್ಬನೇ.

ಉತ್ತರ ದಿಕ್ಕಿಗೆ ಸಾಗಿ ಪಶ್ಚಿಮದತ್ತ ಹೊರಳಿ, ಅರಮನೆಯ ಮಹಾ
ದಾರದತ್ತ ಮುಖ ಮಾಡಿ ನಡೆಯುತ್ತ, ಸ್ವಲ್ಪ ನಿರ್ಜನವಾಗಿ ಕಂಡ ಕಡೆ
ಅವರು ನಿಂತರು.

ಬಟಾನೆಂದ :

..."ಅಯ್ಯ, ನೀವು ನಮ್ಮನ್ನು ಬಿಟ್ಟು ಹೋಗ್ಬೇಡಿ.”

"ಇಲ್ಲ,ಬಟಾ."

“ ಈಗೇನ್ಮಾಡೋಣ ಅಯ್ಯ ? ”

ದೂರದಲ್ಲಿದ್ದ ಪ್ರವೇಶ ದಾರದತ್ತ ದೃಷ್ಟಿ ಹರಿಸಿ ಮೆನ್ನ ನುಡಿದ:
"ಅಪೋಫಿಸ್ ನ ಅಂಗಡಿಯಿಂದಲೊ ಹರ್ಮಾಚಿಸ್ ನ ಅಂಗಡಿಯಿಂದಲೋ
ಶವಲೇಪನ ಸಾಮಗ್ರಿ ಕೇಳ್ಬೇಕು. ಅವರಿಬ್ಬರೂ ಧೂರ್ತರು.. ಯಾತ