ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಕಲ್ಲಿನಿಂದಲು ಕಟ್ಟಡ ನಿರ್ಮಿಸೋದಕ್ಕೆ ಶುರು ಮಾಡಿದರು. ಪೆರೋ ಖೂಫ್ರು ರಕ್ಷಕ-ದೇವತೆಯ ಮಹಾಶಿಲ್ಪ ಮಾಡಿಸಿದ. ಕಾಫರಾ, ಮೆಂಕೋರಾ ಕಲ್ಲಿನ ಮಹಾಪಿರಮಿಡ್ಡುಗಳನ್ನು ಕಟ್ಟಿಸಿದ್ರು. ಒಂದು ರಚನೆಗೆ ಇಪ್ಪತ್ತು ವರ್ಷ! ನೂರು ಸಹಸ್ರ ಜೀತದವರ ದುಡಿಮೆ! "ಖ್ನೆಮು ದೇವರ ಕೃಪೆಯಿಂದ, ನೀಲ ನದಿಯ ದಯೆಯಿಂದ ಹತ್ತು ಹಗಲು, ಹತ್ತು ರಾತ್ರಿಗಳ ಪ್ರವಾಸದ ದೂರ ಒಂದು ಲೆಕ್ಕವೇ ಅಲ್ಲ. ನಮ್ಮ ನೌಕೆಗಳು ಈಗ ಮಹಾ ಹಸುರು ಸಮುದ್ರವನ್ನು ಹೊಕ್ಕು ಹೊಕು ಕೆಫ್ಟಿಯು ದ್ವೀಪದವರೆಗೆ ಹೋಗಿ ಬರ್ತವೆ. ಇತ್ತ ಖೆಟಾ ಜನರ ಜೊತೆ ನಮಗೆ ವಾಣಿಜ್ಯ ಸಂಬಂಧ ಇದೆ. ದೂರ ದೇಶವಾದ ಪಂಟಗು ಐಗುಪ್ತದ ನೌಕೆಗಳು ಹೋಗಿ ನಮ್ಮ ಸಾಮಗ್ರಿ ಗಳಿಗೆ ವಿನಿಮಯವಾಗಿ ತಾಮ್ರ, ಕಂಚು, ಬಂಗಾರ, ಬೆಳ್ಳಿ, ಹಸ್ತಿದಂತ ಅಪೂರ್ವ ಮರಗಳು, ಅಮೂಲ್ಯ ಹರಳುಗಳು, ಸಾಂಬಾರ ವಸ್ತುಗಳು, ಆಕರ್ಷಕ ಪ್ರಾಣಿ ಚರ್ಮ, ಉಷ್ಟ್ರ ಪಕ್ಷಿಯ ಪಕ್ಕ–ಇವನ್ನೆಲ್ಲ ತತ್ತವೆ.” ಹೊರಗೆ ಬಿಸಿಲೇರುತ್ತಿತ್ತು, ಸೂರ್ಯಕಿರಣಗಳು ಬಿದ್ದು ಅಂಗಣದ ಮೂಲೆಯ ತಾವರೆ ಕೊಳದ ನೀರು ಚಕಚಕಿಸುತ್ತಿತ್ತು, ತಾಪದ ಚುರುಕು ಮುಟ್ಟಿದರೂ ಕರಿಮೈಯ ಜನಸಂದಣಿ ಕರಗಲು ಸಿದ್ದವಿರಲಿಲ್ಲ. ಮೆನೆಪ್ಟಾ, ಸ್ನೋಫು ಬಟಾ; ಅಬ್ಟು ಯಾತ್ರಿಕರಲ್ಲಿ ಹಲವರು, ಅವರ ಇಮ್ಮಡಿ ಸಂಖ್ಯೆಯಲ್ಲಿ ಇತರರು, ಎಳೆಯ ರಾಮೆರಿಪ್ಟಾ ಅವನ ಓರಗೆಯ ಕೆಲವರು.... ಎಲ್ಲರ ದೃಷ್ಟಿಯೂ ವೇದಿಕೆಯ ಕಡೆಗೆ, ಶ್ರೋತೃಗಳು ತನ್ನ ಮಾತಿಗೆ ಕಿವಿ ಗೊಡುತ್ತಿದ್ದಾರೆ ಎಂದು ಟೆಹುಟಗೊ ಸಮಾಧಾನ. ತನ್ನ ಧ್ವನಿಗೆ ತಾನೇ ಮನಸೋತು ಆತ ಮುಂದುವರಿಸಿದ:

"ಈ ಎಲ್ಲ ಸಾಧನೆಗೆ ಸಂಪತ್ತಿಗೆ ಐಶ್ವರ್ಯಕ್ಕೆ ಪೆರೋ ಹೊಣೆ.ಆತ ಭೂಪತಿ_ಐಗುಪ್ತದ ಎಲ್ಲ ನೆಲಕ್ಕೆ ಅವನು ಒಡೆಯ. ನೀಲ ನದಿಯ ಏರಿಳಿತಕ್ಕೆ, ಹೊಲದ ಫಸಲಿಗೆ, ಪ್ರಜೆಗಳ ಆರೋಗ್ಯಕ್ಕೆ ಅವನು ಹೊಣೆಗಾರ. ಪೆರೋ ವೈರಿಕುಠಾರ, ಅವನ ಸೈನ್ಯ ಆಕ್ರಮಣಕಾರರನ್ನು ಸದೇಬಡೀತದೆ. ಅವನ್ನು ಶಾಂತಿ ಪಾಲಕ, ಪೆರೋನ ಮಹಾ ಕೃಪೆಯಿಂದಲೇ ನಾವೆಲ್ಲ ಇವತ್ತು ಉಸಿರಾಡ್ತಿದ್ದೇವೆ --------

“ಅರಮನೆ ವೆಚ್ಚಕ್ಕೆ ಆಡಳಿತ ವೆಚ್ಚಕ್ಕೆ ಅಪಾರ ಧನಕನಕ ಬೇಕು.