ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ಅದು ಬರೋದು ಪ್ರಜೆಗಳು ನೀಡೋ ಕಂದಾಯದಿಂದ, ತೆರಿಗೆಯಿಂದ. ಹಾಗೆಯೇ ನಮ್ಮ ದೇವ ದೇವತೆಯರು. ಮೆಂಫಿಸಿನ್ ಪಟಾ ದೇವಾಲಯ, ಆನ್ನರಾ ದೇವಮಂದಿರ ವೆಸಿಯ ಅಮನ್ ಮಂದಿರ. ಆಬ್ಬು_ಎಡ್ಫುಗಳ ದೇಗುಲಗಳು, ಇವಲ್ಲದೆ ಇನ್ನೆಷ್ಟೋ ದೇವಾಲಯಗಳು....ಇವುಗಳ ವೆಚ್ಚಕ್ಕೆ ಹಣ ಎಲ್ಲಿಂದ ಬರ್ತದೆ? ಕಂದಾಯದಿಂದ, ತೆರಿಗೆಯಿಂದ....

"ರೊಟ್ಟಿ ತಟ್ಟಿ ತಿಂದಷು.. ಖಿವವ ಕುಡಿದಷ್ಟು ಸುಲಭ ಅಲ್ಲ ರಾಜ್ಯಭಾರ_ಎಷ್ಟೊಂದು ಅಧಿಕಾರಿಗಳು! ಅಮಾತ್ಯ, ಮಹಾ ಸಲಹಾ ಮಂಡಳಿ_ಸರು, ಕಂದಾಯ ಅಧಿಕಾರಿಗಳು, ಸೇನಾನಿ, ಪ್ರಾಂಶುಪಾಲರು, ಕಣಜಾಧಿಕಾರಿ,ನಿರ್ಮಾಣ ಕಾರ್ಯಾಗಳ ಮುಖ್ಯಸ್ಥ, ವರ್ಷಕ್ಕೆ ಮೂರು ಬಾರಿ ದೇಶದ ಪರಿಸ್ಥಿತಿಯ ಬಗೆಗೆ ಹೇಳಿಕೆಗಳನ್ನು ಸಿದ್ಧಪಡಿಸುವ ವರಧಿಗಾರರು, ನದಿಯ ಕಾವಲು ಭಟರು, ಕೆಲಸಗಾರರನ್ನೂ ಯೋಧರನ್ನೂ ಭರ್ತಿ ಮಾಡುವ ಅಧಿಕಾರಿಗಳು....ಇದು ಎಂಥ ಅದ್ಭುತ ವ್ಯವಸ್ಥೆ! ಈ ವ್ಯವಸ್ಥೆ ಸುಗಮವಾಗ ಬೇಕಾದರೆ ಎಷ್ಟು ಧನ ಧಾನ್ಯ ಬೇಡ! ಅರಮನೆಯ ಒಂದು ಔತಣಕ್ಕೆ ಸಾವಿರ ಬಾತುಕೋಳಿ ಸಾಲದು.. ಗೊತ್ತಾ ನಿಮಗೆ ?”

ಟೆಹುಟಿ ಪ್ರಚಂಡ ಎನಿಸಿತು ಗೇಬುಗೆ ಅವನ ಮಾತಿನ ಪ್ರವಾಹದಲ್ಲಿ ತಾನು ತೇಲಿ ಹೋಗಿ ಎಲ್ಲೋ ಮೂಲೆಗುಂಪಾಗುತ್ತಿದ್ದೇನೆ ಎಂದು ಭಾಸವಾಯಿತು. ಟೆಹುಟ ಉಸಿರಿಗಾಗಿ ನಿಧಾನಿಸಿದುದನ್ನು ಕಂಡು, ಗೇಬು ಕೆಮ್ಮಿದ. ಟೆಹುಟ ತನ್ನೆಡೆ ನೋಡಿದಾಗ, ಏನೋ ಹೇಳಲು ಬಯಸಿದವನಂತೆ ತುಟಿಯಲುಗಿಸಿದ. " ಏನದು?" ಎಂದ ಟೆಹುಟ, ಗಟ್ಟಿಯಾಗಿಯೇ.... ಗೇಬು ಮೆಲ್ಲನೆಂದ: "ಕಂದಾಯ ಕ್ರಮವನ್ನು ವಿವರಿಸದೆ ಚೆನ್ನಾಗಿರುತ್ತದೆ.” ಟೆಹುಟ ಗೊಣಗಿದ: "ಮಾತಿನ ಮಧ್ಯೆ ತಲೆ ಹಾಕ್ತಿರಲ್ಲ! ನನಗೆ ಅಷ್ಟೂ ತಿಳೀದೆ..?” ಗೇಬು ನಸು ನಕ್ಕು, "ಕ್ಷಮಿಸಿ" ಎಂದ. ಟೆಹುಟಿ ಮತ್ತೆ ಸ್ವರವೇರಿಸಿ ನುಡಿಯತೊಡಗಿದ: "ಪೆರೋನ ಕೃಪೆಯಿಂದ ಪ್ರತಿ ವರ್ಷವೂ ಅಯನ ಸಂಕ್ರಮಣ