ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೭೭

ಕೊರಡನ್ನೋ ಹಿಡಿದು ಅವರನ್ನು ಹಿಂಬಾಲಿಸಿದ್ದರು. ನೆಜಮುಟ್ ಸ್ನೊಫ್ರು,
ವನ್ನು ನೆನೆದಳು ; ತಬಬುವಾ ಸೆಬೆಕ್ಕುವನ್ನು.
ನೆಫರುರಾ ಗತಕಾಲದಿಂದ ವರ್ತಮಾನ ಕಾಲಕ್ಕೆ ಇಲ್ಲಿಂದ ಅಲ್ಲಿಗೆ ಮನ
ಬಂದಂತೆ ಅಲೆಯುತ್ತ ಕುಳಿತಿದ್ದಳು. ದಾಸಿಯಾಗಿದ್ದೆ ; ಅಣ್ಣ ಸ್ವಾತಂತ್ರ್ಯ
ನೀಡಿದ ; ಪುನಃ ಬಂಧನಕ್ಕೆ ಸಿಗಲಿಲ್ಲ ; ವಿಮುಕ್ತ ಜೀವಿಯಾಗಿಯೇ ಇದ್ದೇನೆ.
ನೀರಾನೆ ಪಟ್ಟಣದ ದಂಡೆಯ ಮೇಲೊಂದು ಭೋಜನ ಮಂದಿರ, ಬರೇ
ಕನಸುಗಳು, ಅಲ್ಲ ? ಹಿಂದೆ ನರ್ತನ ಕಲಿಯತೊಡಗಿದಾಗ ಕನಸುಗಳನ್ನು
ಕಂಡಿದ್ದಳು ಮುಂದೆ ಕನಸುಗಳಿಗೆ ಅರ್ಥವಿಲ್ಲ.__ಎಂದಿತು ಬದುಕಿನ ಕಠೋರತೆ.
ಎಲ್ಲರನ್ನೂ ಮನುಷ್ಯರಂತೆ, ಸರಿಸಮಾನರಂತೆ ಕಂಡ ಮನೆಪ್ ಟಾ ಅಣ್ಣನ
ಸೇವೆ ಮಾಡಬೇಕು ಎಂಬ ಹಂಬಲ ಉದಿಸಿತ್ತು, ಒಮ್ಮೆ ಅದು ಅಲ್ಲಿಗೇ
ಕಮರಿತು. ಈಗಿನ ಆಸೆ__ನೆಫಿಸಳ ಬಸಿರಲ್ಲಿರುವ ಮನೆಪ ಟಾನ ಕುಡಿಗೆ ತಾನು
ದಾದಿಯಾಗಬೇಕು. ಆ ಮಗುವಿನ ಮತ್ತು ತಾಯಿಯ ಆರೈಕೆಯಲ್ಲಿ ದೇಹ
ಸವೆಸಬೇಕು....
ನೇಕಾರ ಅನ್ನು ಹುತಾತ್ಮನಾದ ಮೇಲೆ, ನೀರಾನೆ ಪ್ರಾಂತದ ಅವರ
ಬುಡಕಟ್ಟು ಹೊಸ ಬದುಕನ್ನು ಆರಂಭಿಸಿದ ಬಳಿಕ, ಅವರ ವಿಧವೆ ಜನ
ಮನ್ನಣೆಗೆ ಪಾತ್ರಳಾಗಿದ್ದಳು. ಶಿಲ್ಪಿ ನೆಖೆನ ತನ್ನ ಪತಿಯ ಶಿಲ್ಪಾಕೃತಿ
ಯನ್ನೇ ನಿರ್ಮಿಸಲು ಹೊರಟಿದ್ದನಲ್ಲ ? : ಇನ್ನು ತಾನು ದುಡಿತ ನಿಲ್ಲಿಸಿ
ವಿಶ್ರಾಂತಿ ಸುಖ ಅನುಭವಿಸಬೇಕು ; ಹಿರಿಯ ಮಗನಿಗೆ ಮದುವೆ ಮಾಡಿಸಿ
ಬಿಟ್ಟರೆ ಇದು ಸಾಧ್ಯ ; ಇನ್ನು ಹುಡುಗರೇ ದುಡಿಯಲಿ __ಎಂದುಕೊಂಡಿದ್ದಳು.
ಆದರೆ ಇದ್ದಕ್ಕಿದ್ದಂತೆ.... ನಾಡಿನ ಹಿರಿಯ ಮನುಷ್ಯನ ಮಡದಿ ನೆಫಿಸಳೇ
ವಿಧವೆಯಾದಳಲ್ಲ.... ಕಳೆದ ಒಂದು ಹಗಲಿನಲ್ಲಿ ಆ ಹಗಲು ಇರುಳಾದ ಮೇಲೆ,
ಎಷ್ಟೊಂದು ಜನ ವಿಧವೆಯರಾದರೆ.... ನೆಫಿಸಳ ಮನೆಗೆ ತಾನು ಹೋಗದೆ
ಇದ್ದಿದ್ದರೆ ತನ್ನನ್ನೂ ಬಂಧಿಸುತ್ತಿದ್ದರು, ಮಕ್ಕಳ ಜತೆ, ಸಾವಿನೂಟದ
ಬಯಲಿನಲ್ಲೇ ತನ್ನ ಮಕ್ಕಳನ್ನು ಹಿಡಿದರೇನೋ.... ಅಥವಾ ಆಮೇಲೆಯೊ?
ಇನ್ನು ತೊತ್ತುಗಳಾಗಿ ಇವರು ಬೆಳೆಯಬೇಕು. ಮಹಾಮಂದಿರದಲ್ಲೆ
ಮಹಾಮನೆಯಲ್ಲೇ ಸೇವೆ. ಚಿನ್ನದ ಗಣಿಯಲ್ಲಿ ಕೆಲಸ, ಇಲ್ಲವೆ ಗೋರಿ
ನಿರ್ಮಾಣಕ್ಷೇತ್ರದಲ್ಲಿ....