ಈ ಪುಟವನ್ನು ಪ್ರಕಟಿಸಲಾಗಿದೆ

೬೭೮

ಮೃತ್ಯುಂಜಯ

ಬಟಾನ ಹೆಂಡತಿಗೆ ನದಿಯೇ ಗಂಡ, ಕೈ ಹಿಡಿದಾಗ ಸಾಮಾನ್ಯ
ಅಂಬಿಗನಾಗಿದ್ದ. ಬಾಹುಗಳನ್ನು ದಣಿಸಿ ದಣಿಸಿ ವೆಸಿಯಿಂದ ಒಂದು ದೋಣಿ
ಕೊಂಡು ತರಲು ಶಕ್ತನಾದ. ದುಡಿಮೆಗೆ ನಾಲ್ವರನ್ನು ನೇಮಿಸಿಕೊಂಡ.
ಅವರ ಒಡೆಯ ತಾನು ಎಂಬಂತೆ ಬಟಾ ನಾಲ್ಕು ದಿನ ವರ್ತಿಸಿದ್ದು ನೆನಪು
ನಾಲ್ವೇ ದಿನ. ಯಜಮಾನನ ಪಾತ್ರ ಬೇಡವೆನಿಸಿರಬೇಕು. ಆ ಅಂಬಿಗರ
ಹಿರಿಯಣ್ಣನಾದ, ಸಹೋದ್ಯೋಗಿಯಾದ. ಹೀಗೆ ಸಾಮಾನ್ಯ ಅಂಬಿಗನಾಗ
ಬೇಕಾಗಿದ್ದ ತನ್ನ ಗಂಡ ಅಸಾಮಾನ್ಯ ದೋಣಿಕಾರನಾದ. ಅದೆಷ್ಟು ನಕ್ಷಗಳಿಂದ
ಅದೆಷ್ಟು ಜನ ಅವನ ದೋಣಿಯಲ್ಲಿ ಅಚ್ಚು ಯಾತ್ರೆಗೆ ಹೋಗಿ ಬಂದಿದ್ದರು!
[ತಾನೊಬ್ಬಳು ಹೋಗಿಲ್ಲ. ಮಕ್ಕಳನ್ನೂ ಕರೆದುಕೊಂಡು ಹೋಗಬೇಕು ;
ಮುಂದಿನ ಸಲ ಹೋಗೋಣ-ಮುಂದಿನ ಸಲ, ಎನ್ನುತ್ತ ಕಾಲ ಕಳೆದುಬಿಟ್ಟಿತ್ತು]
ಈಗ ಜತೆಯಲ್ಲಿ ಕರೆದುಕೊಂಡು ಬರಲು ಆಗದೇ ಹೋದ ಮಕ್ಕಳು ಮುಂದೆ
ಏನಾಗುವರೊ ? ಊರು ಉರಿದ ಮೇಲೆ ಉಳಿಯುವುದೇನು ? ಮುಂದಿನ
ವರ್ಷ ಸೊಥಿಸ್ ಉದಿಸಿದಾಗ ನದಿಯಲ್ಲಿ ನೀರು ತುಂಬಿ, ಉಕ್ಕಿ, ಹೂಲಗಳು
ಅಣಿಯಾದಾಗ ಮತ್ತೆ ಬದುಕು ಆರಂಭವಾಗುವುದಿಲ್ಲವೆ ? ಆದರೆ ಹೇಗೆ ?
ಪುನಃ ಭೂಮಾಲಿಕರದೇ ಯಾಜಮಾನ್ಯವಾದರೆ ಏನು ಪ್ರಯೋಜನ ?
ಬಡವರ ಸಂಕಷ್ಟ ಹಿಂದೆ ಇದ್ದಂತೆಯೇ ಮುಂದೆಯೂ ಇರುತ್ತದಲ್ಲ ? ಜನ
ನಾಯಕನಾದ, ನೆಫಿಸಳ ಗಂಡ, ದಳಪತಿಯಾಗಿ ಈ ಮ್ ಅದ್ಭುತ ಕೆಲಸ
ಮಾಡಿದ. ತನ್ನ ಪತಿ ನೀರಾನೆ ಪ್ರಾಂತದ ಸಾರಿಗೆ ಮುಖ್ಯಸ್ಥನಾದ. ಅದ
ಕ್ಕಿಂತಲೂ ಹೆಚ್ಚಾಗಿ ಮೆನೆಪ್‌ಟಾ ಅಣ್ಣನ ಆತ್ಮೀಯ ಬಂಧುವಾದ,
ರಾಮರಿಪ್ಟಾನ ಪಾಲಿಗೆ ದುಃಸ್ವಪ್ನ ಮುಗಿದಿತ್ತು, ಇದು ಜಾಗೃತಾ
ವಸ್ಥೆ. ಇನ್ನು ಯಾವಾಗಲೂ ಎಚ್ಚರವೇ. ಆಟಕ್ಕಿನ್ನು ನೀರಾನೆ ಪಟ್ಟಣದ
ಜತೆಗಾರರಿಲ್ಲ. ಅಂಥ ಆಟವೇ ಇಲ್ಲ. ಇಪ್ಪುವರ್ ಗುರುವಿನ ಪಾಠವಿಲ್ಲ.
ಮೆಲುದನಿಯ ತಂದೆಯೊಡನೆ ಪ್ರಿಯವಾದ ಸಂವಾದವಿಲ್ಲ. ಮೆಂಫಿಸಿನ ಅರ
ಮನೆಯ ಆವರಣದಲ್ಲಿ ವಧಸ್ಥಾನದಲ್ಲಿ ಇದು “ನನಗೊಬ್ಬನಿಗೇ ಸಂಬಂಧಿಸಿದ
ದುರಂತ' ಎನಿಸಿತ್ತು. ಈಗ ಸ್ಪಷ್ಟವಾಗಿದೆ. ಇದು ಎಲ್ಲರ ದುರಂತ, ಇಡಿಯ
ಬಡಜನತೆಯ ದುರಂತ.... ತಾನಿನ್ನು ಬೇಗ ಬೇಗನೆ ಬೆಳೆಯಬೇಕು. ಎಲ್ಲ
ವಿದ್ಯೆಗಳನ್ನೂ ಕಲಿಯಬೇಕು. ತಂದೆಯ ಹಾಗೆ ಯೋಚಿಸಿ ಮಾತನಾಡ