ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯು೦ಜಯ

೮೩

ಜನರ ನಿರ್ಧಾರದ ವರದಿಯನ್ನು ಗೂಢಚಾರರು ರಾಜಗೃಹಕ್ಕೆ
ಒಯ್ದರು. ಎವೆ ಮುಚ್ಚದೆ ಛಾವಣಿಯತ್ತ ನೋಡುತ್ತ ಹಾಗೆಯೇ ಮಲಗಿದ್ದ
ಗೇಬು ಇಪ್ಯುವರ್ ಬಾಗಿಲು ತಟ್ಟುವುದಕ್ಕೆ ಮು೦ಚೆ ತಾನೇ ಎದ್ದ.
"ಸರಿ. ವಾಪಸು ಹೋಗಿ ಅವರ ಮಧ್ಯದಲ್ಲೇ ಇರಿ" ಎ೦ದ, ಗೂಢ
ಚಾರರಿಗೆ.
ಗೇಬು ಮಹಡಿಯ ಮೆಟ್ಟಲೇರುತ್ತಿದ್ದಂತೆ, ಟೆಹುಟಿಯ ಧ್ವನಿ
ಕೇಳಿಸಿತು:
"ಗೂಢಚಾರರು ಬಂದಿಲ್ಲವಾ ಇನ್ನೂ ?"
ಆತನಿದ್ದ ಕೊಠಡಿಯನ್ನು ಹೊಕ್ಕು ಗೇಬು ಅ೦ದ.
"ಪರಿಸ್ಥಿತಿ ಗ೦ಭೀರವಾಗಿದೆ ಟೆಹುಟಿ."
"ಸುದ್ದಿ ಏನೂಂತ ತಿಳಿಸಿ, ಗಂಭೀರ ಹೌದೋ ಅಲ್ಲವೋ ನಾನು
ತೀರ್ಮಾನಿಸ್ತೇನೆ."
"ಊರಿನ ಜನ ಸಿಟ್ಟಾಗಿದ್ದಾರೆ .ಮೆನೆಪ್ಟಾನನ್ನು ಬಿಟ್ಟರೆ ಮಾತ್ರ
ಕ೦ದಾಯ ಸ೦ದಾಯ ಅಂತೆ....ಅದನ್ನು ನಿಮಗೆ ತಿಳಿಸೋದಕ್ಕೆ ಅವರು ಇಲ್ಲಿಗೆ
ಬರ್ತಾರಂತೆ."
"ಕೊಬ್ಬಿದ ಹ೦ದಿಗಳು ! ಹುಟ್ಟಡಗಿಸಬೇಕು. ಬರಲಿ ! ಬರಲಿ !"

****

ಅರ್ಚಕ ಅಪೆಟ್ ರಾಜಗೃಹ ತಲಪಿದಾಗ ಟೆಹುಟಿ ಮೊಗಸಾಲೆಯಲ್ಲಿ
ಪ್ರಾಂತಪಾಲನ ಜತೆ ಕುಳಿತಿದ್ದ.
ಗೇಬು " ಬನ್ನಿ, ಅಪೆಟ್ " ಎಂದ.
ಆದರೆ ಕುಳಿತುಕೊಳ್ಳುವಂತೆ ಟೆಹುಟಿ ಸನ್ನೆಮಾಡಲಿಲ್ಲ,
ಮುಖ ಕಪ್ಪಿಟ್ಟರೂ ಅಪೆಟ್ ಪ್ರಯತ್ನಪೂರ್ವಕವಾಗಿ ನಸುನಕ್ಕು,
ನಿಂತುಕೊಂಡ.
"ಅರ್ಚಕರಿಗೆ ನಾವು ನಮಿಸಬೇಕು ಅಲ್ಲವಾ ?"
___ಟೆಹುಟಿ ವ್ಯಂಗ್ಯೋಕ್ತಿಯಾಡಿದ.
ಅಪೆಟ್ ನೆಂದ: