ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಮೃತ್ಯುಂಜಯ

"ವಯಸ್ಸಿನಲ್ಲಿಲ್ಲವಾದರೂ ಅಂತಸ್ತಿನಲ್ಲಿ ನಾನು ಕಿರಿಯ ದೇವಸೇವಕ.
ರಾಜಧಾನಿಯಿಂದ ಬಂದಿರೋ ಅಧಿಕಾರಿ ಮಹಾಶಯರಿಗೆ ನಾನೇ
ವಂದಿಸ್ತೇನೆ."
"ಈ ಪ್ರಾಂತದ ಜನತೆಯ ಧಾರ್ಮಿಕ ರೀತಿ ರಿವಾಜಗಳ ಜವಾಬದಾರಿ
ನಿಮ್ಮದು. ಏನು ಹೇಳ್ತೀರಿ ?"
"ಒಬ್ಬ ಈ ದಿನ ರೀತಿ ರಿವಾಜುಗಳನ್ನು ಮೀರಿ ನಡೆದ ಅಂತ ಕೇಳ್ದೆ.
ಕೇಳಿ ಬೇಸರವಾಯ್ತು."
"ಇಲ್ಲಿನ ಜನ ಪಾಪ ಭೀರುಗಳಾಗಿ ವಿನಯ ಸಂಪನ್ನರಾಗಿ, ಸ್ವಾಮಿ
ಭಕ್ತರಾಗಿ ವರ್ತಿಸಿದರೆ ನಿಮ್ಮ ದೇವಮಂದಿರದ ಕೀರ್ತಿ ಹೆಚ್ತದೆ."
"ಹಾಗೇ ಆಗಲಿ ಅನ್ನೋದೆ ನನ್ನ ನಿತ್ಯಪ್ರಾರ್ಥನೆ."
"ನೀವು___ಅಪೆಟ್ ಅಲ್ಲವಾ ನಿಮ್ಮ ಹೆಸರು ?"
"ಹೌದು ಮಹಾಶಯ."
"ಅಪೆಟ್ ನೀವು ಕೇಳಿರಬಹುದು : ಮಹಾಪ್ರಭು ಪೆರೋಗು ಮಹಾ
ಅರ್ಚಕರಿಗೂ ಸಣ್ಣ ಪುಟ್ಟ...."
"ಹೌದು, ಕೇಳಿದ್ದೇನೆ."
"ಅದು ರಾಜಧಾನಿಗೆ ಸಂಬಂಧಿಸಿದ್ದು. ಅದರಿಂದ ನೀವು ಪ್ರಭಾವಿತ
ರಾಗಬಾರದು.
"........"
"ಅನ್ನಿ, ಅರ್ಥವಾಗ್ಲಿಲ್ಲ ಅಂತ. ದೇಶದ ಸಮಸ್ಯೆಗಳೇನಿದ್ದರೂ ರಾಜ
ಧಾನಿಯಲ್ಲೇ ಪರಿಹಾರವಾಗ್ತವೆ. ಪ್ರಾಂತಗಳಲ್ಲಿಯೋ ಅರ್ಚಕರು ತಲೆ
ಕೆಡಿಸ್ಕೋಬೇಕಾಗಿಲ್ಲ. ಸಾಮಾಜಿಕ ಆಗು ಹೋಗುಗಳಲ್ಲಿ ದೇವಮಂದಿರದ್ದು
ಅತ್ಯಂತ ಮಹತ್ವದ ಪಾತ್ರ. ದೇವರು ಇಷ್ಟಪಡದೆ ಬೀಜ ಮೊಳೆಯೋದಿಲ್ಲ,
ಸುಖ ಬೆಳೆಯೋದಿಲ್ಲ."
ಟೆಹುಟಿಯ ಮಾತು ಮುಗಿಯೋದಕ್ಕೆ ಮುನ್ನವೇ ಏದುಸಿರು ಬಿಡುತ್ತ
ಗೂಢಚಾರನೊಬ್ಬ ಮೆಟ್ಟಲುಗಳನ್ನೇರಿ ಬಂದು ತಡೆ ತಡೆದು ನುಡಿದ :
"ಪೆರೋನ ಆಯುರಾರೋಗ್ಯ ಹೆಚ್ಚಲಿ.... ಕ್ಷಮಿಸ್ಬೇಕು.... ಊರಿನ