ಈ ಪುಟವನ್ನು ಪ್ರಕಟಿಸಲಾಗಿದೆ

೧೮ | ನಾವೂ ಮನುಷ್ಯರು!

                       ಚೂರು ಸಾ ಇಲ್ಲ, ಕಿಟು ತಂದ ಕಟ್ಟಿಗೆ ಚೂರಿಂದ
                       ಬೆ೦ಕಿಯಾಗಬೇಕು;ಗ೦ಜಿ ಬೇಯಬೇಕು.
           ರಾಮಣ್ಣ : ಹೌದೊ ರುಕ್ಕು,ಪೊರ್ಬುಗಳು ನಿನ್ನನ್ನು ಕೇಳಿ ಬಂದದ್ದು.
                       ಬಾಯಿಯವರಿಗೆ - 
              ರುಕ್ಕು :ಗೊತ್ತು೦ಟು,ಗೊತ್ತು೦ಟು.ನೀವಿಬ್ಬರೂ ಇಲ್ಲಿರುವಾಗ,
                       ಕಟ್ಟಿಗೆಗೆ ಹೋದ ನಾನು ಬಾಯಿಯವರನ್ನು ಕಂಡಿದ್ದೆ. 
           ರಾಮಣ್ಣ : ಹಾ೦. ನೋಡಿ, ನನಗೆ ಗೊತ್ತಿತ್ತು....ಆದರೆ ಕಟ್ಟಿಗೆ
                       ಕೇಳಾಲಿಲ್ಲವಷ್ಟೆ  ಅಲ್ಲಿ?
         ಲಸ್ರಾಜೋ:(ಹಲ್ಲು ಗಳನೆಲ್ಲ ತೋರಿಸುತ್ತ) 
                       ಕಟ್ಟಿಗೆ ಅಲ್ಲಿ ಇದ್ದ ರಲ್ಲವೊ?
                      (ಎಲ್ಲರೂ ನಗುವರು)
              ರುಕ್ಕು : ನಾನು ಗಂಜಿ ಕುಡಿದು ರಾತ್ರೆಯೇ ಬರ್ರೇನೆ
                       ಪೊರ್ಬುಗಳೆ- 
                     . (ಲಸ್ರಾದೋ ಹೊರಡುವನು. ರುಕ್ಕು ಒಳಹೋಗುವಳು...
                        ರಾಮಣ್ಣ ಎದ್ದುನಿ೦ತು, ಕುಂಟುತ್ತ ಬೀಲಳ್ಕೊಡಲು 
                        ಹೊರಬಾಗಿಲವರೆಗೆ ಬರುವನು.....) 
           ರಾಮಣ್ಣ : ನೋಡಿ. ಇಲ್ಲವಾದ್ರೆ ಅವರಿಗೇನು ಕಡಿಮೆಯೋ?ಇ೦ಗ್ಲೀಷು
                       ಗೊತ್ತು೦ಟು,ಎಲ್ಲ ಉ೦ಟು.ಬಿ.ಎ. ಕಲ್ತವರಿಗೆ ಒ೦ದು ಮೂವತ್ತು ರೂಪಾಯಿ ಕೆಲಸ ಎಲ್ಲಿಯೂ ಸಿಕ್ಕ  
                       ಲಿಕ್ಕಿಲ್ಲವೊ? ಈ ಯೂನಿಯನ್ ಗೀನಿಯನ್ ಯಾಕೆ
                       ನಮ್ಮ ಕಾರ್ಯದರ್ಶಿಗೆ?
        ಲಸ್ರಾದೋ : ಹೌದು,ಹೌದು,
           ರಾಮಣ್ಣ : ಹಾ೦ - ಅದೇ, ಕಾಲ ಬದಲಾಗಿದೆ...ನಮ್ಮ ಜನಕ್ಕೆ
                      ಸಹಾಯ ಉ೦ಟು;ನಮ್ಮ ಜನ ಎದ್ದಿದ್ದಾರೆ.