ಈ ಪುಟವನ್ನು ಪ್ರಕಟಿಸಲಾಗಿದೆ

ಲಸ್ರಾದೋ:

ಹೌದು ಕಾಲ ಬದಲಾಗಿದೆ.

ರಾಮಣ್ಣ:

ನೋಡಿ - ಓಡಿನ ನಾನು, ಮಗ್ಗದ ನೀವು, ಬೀಡಿಯ

ಆದಂ ಸಾಹೇಬ್ರು - ನಾವೆಲ್ಲ ಒಂದೇ ಅಲ್ವೋ- ಒಂದೇ

ಗುರಿ ಅಲ್ವೋ? ನಾವೆಲ್ಲ ಕೇಳೋದೂ ಒ೦ದೇ. ಹೆಚ್ಚು

ಕೂಲಿ, ತುಟ್ಟಿಭತ್ತೆ, ಬೋನಸು, ನಮ್ಮ ರಾಜ್ಯ.

ಅಲ್ವೋ?ಹೌದೂ, ಅಲ್ವೋ?

ಲಸ್ರಾದೋ:

ಹೌದು,ನಾವೆಲ್ರೂ ಕೇಳೂವುದು ಒ೦ದೇ.

(ರ೦ಗದ ಖಕ್ಕಕ್ಕೆ ತಲಪಿದ ಮೇಲೆ,ಲಸ್ರಾದೋ ಟೊಪ್ಪಿ ತೆಗೆದು

"ಬರ್ತೇನೆ" ಎ೦ದು ನುಡಿದು,ಪುನಃ ಟೊಫ್ಫಿ ಇಡುವನು.

ರಮಣ್ಣ "ಹೋಗಿಬನ್ನಿ" ಎನ್ನುವನು.

ಕಿಟ್ಟು ತಿಟ್ಟಿಯ ಮೇಲಿದ್ದ ಹೊದಿಕೆಯನ್ನು ತ೦ದು ತ೦ದೆಗೆ

ಹೊದಿಸುನವನು.)

ಕಿಟ್ಟು:

ಅಪ್ಪಾ!ಛಳಿ ಉ೦ಟಪ್ಪಾ.......

ರುಕ್ಕು:

(ಒಳಗಿ೦ದ)

ಆ ಕತ್ತಲೆಯಲ್ಲಿ ಯಾಕೆ ಈಚೆಗೆ ಬರಬಾರದೆ? ಬೆಳಕು

ಮಾಡಿದ್ದೇನೆ.

(ಮುಂದೆ ನಡೆಯುತ್ತ ಕರೆದೊಯುವನು)

ಹೌದಪ್ಪಾ, ಇಲ್ಲಿ ಕತ್ತಲೆ....ಆಚೆ ಬೆಳಕಿದೆ.....ಮು೦ದೆ

ಹೋಗುವ.