________________
ಸ೦ಸ್ಕೃತಲಿಂಗಂಗಳ, 121 ಪದಚ್ಛೇದಂ, ಆದಂ ಹ್ರಸ್ವದಂತಃ ಅದು ಆದ ಆತ್ವ, ಪ್ರಸ್ವಂ ಎನಿಸಿದ ಆದ ದ೦ತಂ, ಹ್ಯಾ ದಿಸಮಸ್ತೆಕಾಕ್ಷರಂ ಆದ ಅವಿಕೃತಿಶಬ್ದಂ ಉಕ್ತಿವಿದರಿ೦ ಲಿಂಗಂ ಟೀಕು, ಯಥಾನ್ವಯಂ. ಆದು = ಪೀನ ಗ್ರಹಣದಿಂದೆ; ಪ್ರಸ್ವದಂತಂ = ಕನ್ನಡ ಕೈ ಹೃಸ್ವವಾದ ಎಕಾರಾಂತರ್ಮು; ಅದು= ಅದು; ಆದ೦= ಆದಕಾರಾಂತ ಶಬ್ದ ಮುಂ; ಪ್ರಸ್ವಂ = ಕನ್ನಡಕ್ಕೆ ಪ್ರಸ್ವಂ; ಎನಿಸಿದೀದೂ ದಂತಂ == ಎನಿಸಿದ ಈಕಾರಾಂತ ಊಕಾರಾಂತಂ; ಹ್ಯಾಪಿ = ಜ್ಞಾ ಎಂಬ ಶಬ್ದ ವಾದಿಯಾದ; ಸಮಸ್ತ = ಬಹಳವಾದ; ಏಕಾಕ್ಷರವಾದ = ಏಕಾಕ್ಷರ ವಾದ; ಅವಿಕೃತಿಶಬ್ದಂ = ವಿಕಾರವಿಲ್ಲದ ಶಬ್ದಗಳಿ; ಉಕ್ತಿವಿದರಿಂ= ವಾಕ್ಯವಿದರಿಂದೆ; ಲಿಂಗಂ = ಲಿಂಗವಪ್ಪುವು.
- ವೃತ್ತಿ, ಆದವೆಂಬ ಬಹುಳಗ್ರಹಣದಿಂದಾಕಾರಾಂತಮಲ್ಲ ದಕಾರಾಂತ ಮುಂ ಹ್ರಸ್ವಮಪ್ಪತ್ವಮಂ ಪಡೆಮೊಡಂ ಲಿಂಗಮಕ್ಕುಂ; ಈಕಾರಾಂತ ಊಕಾ ರಾಂತಂಗಳ್ ಪ್ರಸ್ವಮಾದೊಡಂ ಲಿಂಗಮಕ್ಕುಂ; ಕ್ಯಾಶಬ್ದಂ ಮೊದಲಾದೇಕಾ ಕ್ಷರಶಬ್ದಂಗಳಿರ್ದ ತೆರಿದಿಂ ಲಿಂಗಮದ್ದುವು.
- ಪ್ರಯೋಗ. ಅಕಾರಾಂತಕ್ಕೆ- ವಧ, ಅಭಿಲಾಷ, ಉದಾಹರಣ, ದರ್ಧ, ಪ್ರಶ್ನೆ, ಊಹ, ಅಳಕ ಎಂಬಿವು ವಧೆ, ಅಭಿಲಾಷೆ ಎಂಬಂತೆ ಎತ್ತಮಂ ಪಡೆದೊಡಂ ಲಿಂಗಮಪ್ಪುವ. ಈಕಾರಾಂತಕ್ಕೆ-ಲಕ್ಷ್ಮಿ, ಗೌರೀ, ಸರಸ್ವತೀ, ಶಚೀ, ಭಾಮಿನೀ, ಗೋಮಿ ನೀ, ಕಾಮಿನೀ, ನಾರೀ, ಕುಮಾರೀ, ಕಾವೇರಿ, ಗೋದಾವರೀ, ಗಾಂಧಾರೀ ಎಂಬೀಕಾರಾಂತಕ್ಕೆ ಲಕ್ಷ್ಮಿ, ಗೌರಿ, ಸರಸ್ವತಿ ಎಂಬಂತೆ ಪ್ರಸ್ವವಾದೊಡಂ, ಊಕಾರಾಂತಕ್ಕೆ-ಸರಯೂ, ಕಂಡೂ, ಖರ್ಜೂ, ಕುಹೂ, ಜಂಬೂ, ಸ್ವಯಂಭೂ, ಖಲವೂ, ಅಲಾ, ಅಧ್ರಮೂ, ಚಮೂ ಎಂಬೂಕಾರಾಂತಂಗಳ್ ಸರಯು, ಕಂಡು ಎಂಬಂತೆ ಪ್ರಸ್ವಮಾದೊಡಂ, ಲಿಂಗನಮಕ್ಕುಂ. ಏಕಾಕ್ಷರ-ಜ್ಞಾ, ಮಾ, ಶ್ರೀ, ಸ್ತ್ರೀ, ಭೀ, ಧೂ, ಕೂ ಎಂಬಿವು ಮೊದ ಲಾದ ಏಕಾಕ್ಷರಶಬ್ದಂಗಳಿರ್ದ ತೆರಿದಿಂ ವಿಭಕ್ತಿಯಂ ಪಡೆವುವು.