ಈ ಪುಟವನ್ನು ಪ್ರಕಟಿಸಲಾಗಿದೆ

ವನಜಳ ತಂದೆ ಶ್ರೀನಿವಾಸಯ್ಯ ಬೆರಗುಗಣ್ಣಿನಿಂದ ನಮ್ಮಿಬ್ಬ ರನ್ನೂ ನೋಡುತಿದ್ದರು ಆ ನೋಟ ನನ್ನ ನರನಾಡಿಗಳನ್ನು ಇರಿದು ಸುಡುತಿದ್ದಂತೆ ನನಗೆ ಭಾಸವಾಗುತಿತ್ತು.

"ಐದೇ ನಿಮಿಷ.ಇದ್ಬಿಟ್ಟು ಹೋಗಿ. ನಮ್ಮ ಸೀನಿಯರ್ ಲಾಯರು ಬಂದಿದ್ದಾರೆ.ನೋಡ್ಬಿಟ್ಟು ಹೋಗಿ.

"ಎಲ್ಲವೂ ಮುಗಿದುಹೋಗಿತ್ತು. ಚಲಂ ಬಾಂಧವ್ಯದ ಬಂಡೆ ಗಲ್ಲಿಗೆ ತಗಲಿ ನನ್ನ ನಾವೆ ಪುಡಿ ಪುಡಿಯಾಗುವ ಹೊತ್ತು. ಕೊನೆಗೆ ಹೀಗೂ ಆಗಬೇಕಾಯಿತೆ?

......ಜೀವಚ್ಛವದಂತೆ ನಾನು ವಕೀಲರನ್ನು ಹಿಂಬಾಲಿಸಿ, ಕಕ್ಷಿಗಾರರಿಗೋಸ್ಕರವೇ ಇದ್ದ ಮುರುಕು ಕುರ್ಚಿಯೊಂದರ ಮೇಲೆ ಕುಳಿತುಕೊಂಡೆ.

"ನೀವು!" ಎಂದು ಉದ್ಗಾರವೆತ್ತಿದರು ಶ್ರೀನಿವಾಸಯ್ಯ.

"ಈ ವಕೀಲರು ಪರಿಚಯಸ್ಥರು. ನೋಡ್ಕೊಂಡು ಹೋಗೋ ಣಾಂತ ಬಂದೆ.

"ಓ! ನನಗೆ ಗೊತ್ತೇ ಇರಲಲ್ಲಿ. ಮಾಧೂ ಹೇಳಿಯೇ ಇರ ಲಿಲ್ಲ.

"ಯುವಕ ವಕೀಲ ಮಾಧವರಾಯರು ಆಶ್ಚರ್ಯದ ನೋಟದಿಂದ ನಮ್ಮಿಬ್ಬರನ್ನೂ ನೋಡುತಿದ್ದರು. ಅವರೆಂದರು:

"ನೀವಿಬ್ಬರೂ ಪರಿಚಿತರು ಆನ್ನೋದನ್ನ ಮಿಸ್ವರ್ ಕೇಶವ್ ನನಗೆ ಹೇಳಿರಲಿಲ್ಲ."

"ಕೇಶವ--ಯಾರು ಕೇಶವ?"

"ಯಾಕೆ,ಇವರೇ!"

ಮುಳುಗುತಿದ್ದವನು ಹುಲ್ಲುಕಡ್ಡಿಗೆ ಆತುಕೊಳ್ಳುವ ಹಾಗೆ ನಾನೆಂದೆ: "ಆದು ನಮ್ಮನೇಲಿ ಇಟ್ಟಿದ್ದ ಪ್ರೀತಿ ಹೆಸರು ಸಾರ್."

"ಓ!"ಎಂದರು ಮಾಧವರಾಯರು.ಅವರ ನೆಟ್ಟ ದೃಷ್ವಿ ಬೆಂಕಿಯಂತೆ ನನ್ನನ್ನು ಕರಗಿಸತೊಡಗಿತು.