ಈ ಪುಟವನ್ನು ಪ್ರಕಟಿಸಲಾಗಿದೆ

"ನೀವು ಈ ನಾಲ್ಕೈದು ದಿವಸ ನಮ್ಮನೆಗೇ ಬಂದಿಲ್ವಂತೆ ರಾಧಾಕೃಷ್ಣ. ಮುರಲಿ ಮತ್ತು ವನಜ ನಿಮ್ಮ ಹಾದಿ ನೋಡ್ತಾನೇ ಇದ್ರು."

"ಹೌದು ಸಾರ್, ಬರೋಕಾಗಲಿಲ್ಲ."

ಯಾವುದೋ ಗವಿಯೊಳಗಿಂದ ಪ್ರತಿಧ್ವನಿಸುವಹಾಗೆ ಮಾಧವ ರಾಯರು ಮಾತನಾಡುತಿದ್ದರು:

ಅವಸರವಾಗಿದ್ದರೆ ಈಗ ಹೋಗಿ ಮಿಸ್ಟರ್ ಕೇಶವ್,ನಾಳೆ ಬನ್ನಿ."

ಬುದ್ದಿ ಭ್ರಮಣವಾದವನ ಹಾಗೆ ನಾನೆದ್ದು, "ಬರೀನಿ ಸಾರ್, ಬರ್ತೀನಿ ಸಾರ್," ಎಂದೆ, ಇಬ್ಬರಿಗೂ ನಮಸ್ಕರಿಸುತ್ತಾ.

ಸೈಕಲು ತಂದಿರಲಿಲ್ಲ ಯಾವುದೋ ಹಾದಿ ಹಿಡಿದು ನಾನು ಮುಂದೆ ಸಾಗಿದೆ. ನಡೆಯುತಿದ್ದೆನೋ ಓಡುತಿದ್ದೆನೋ ನನಗೆ ತಿಳಿ ಯದು.ತುಂತುರು ಹನಿ ಬೀಳುತಿತ್ತು ಆಗಲೆ.ಕ್ರಮೇಣ ಆ ಹನಿ ಬಲವಾಯಿತು.ಯಾರದೊ ಮನೆಯ ಮಾಡದ ಆಸರೆಯಲ್ಲಿ ನಿಂತೆ.

ಮಳೆ ಸುರಿಯಿತು ಧಾರಾಕಾರವಾಗಿ. ಆ ಬೀದಿಯ ವಿದ್ಯುದ್ವೀಪ ಗಳೂ ಆರಿ ಹೋದವು.ಗುಡುಗು ಮಿಂಚು ಮಳೆ.ಚರಂಡಿಯಲ್ಲಿ ನೀರು ತುಂಬಿ ಹರಿಯುತಿತ್ತು.ಎಲ್ಲವು ತೇಲಿ ಹೋಗುತಿತ್ತೇನೋ- ತಿಪ್ಪೆ ರಾಶಿ ಎಲ್ಲವೂ.ಆಗಾಗ್ಗೆ ಒಂದೊಂದು ಕಾರು ಆ ಬೀದಿಯಲ್ಲಿ ಧಾವಿಸುತ್ತ ಬಂದು,ಕಣ್ಣು ಕೋರೈಸುವಂತೆ ನನ್ನ ಮೇಲೆ ಬೆಳಕು ಬೀರುತಿತ್ತು...... ಆದಾದ ಮೇಲೆ ಎಲ್ಲವೂ ಕತ್ತಲು, ಗಾಢವಾದ ಕತ್ತಲು.ಮಳೆ ಸುರಿಯಿತು ಅರ್ಧ ಘಂಟೆಯ ಹೊತ್ತು. ನನ್ನ ಹೃದಯ ಹೆಪ್ಪುಗಟ್ಟಿತ್ತು--ದೇಹವೂ ಕೂಡಾ.ಅಂತೂ ಎಲ್ಲಿ ತನಕ ನಾನು ಬಂದ ಹಾಗಾಯಿತು? ಎಲ್ಲಿ ತನಕ? ನನ್ನ ಮುಂದಿದ್ದುದು ತಳ ವಿಲ್ಲದ ಪ್ರಪಾತ--ಪಾರವಿಲ್ಲದ ಪ್ರವಾಹ. ನನಗಿನ್ನು ಉಳಿಗಾಲ ಉಂಟೆ? ಉಂಟೆ?

ಮಳೆ ನಿಂತ ಮೇಲೆ ನಾನು ಬೀದಿಗಿಳಿದು ಮನೆಯತ್ತ ಸಾಗಿದೆ.