ಈ ಪುಟವನ್ನು ಪ್ರಕಟಿಸಲಾಗಿದೆ

ಸಿತ್ತು...ದೀಪ ಅರಿಸಿದರೂ ನನಗೆ ನಿದ್ದೆ ಬರಲಿಲ್ಲ... ಎವೆ ತೆರೆದೇ, ಕತ್ತಲು-ಬಿಳುಪಿನ ಮಿಲನದ ಮಸಕು ರೂಪವನ್ನು ನಾನು ಕಂಡೆ. ಶಾರದಾ ರಸಿಕಳಿರಬೇಕು...ಸಿಂಗರಿಸಿದ್ದ ಆ ಕೊಠಡಿ...ನನ್ನ ಮುಖ ದಿಂಬನ್ನು ಮುಟ್ಟಿತು...ಆಕೆಯೂ... ಥೂ...ಎಂಥ ಸುವಾಸನೆ!... ಆದರೆ ಆ ದಿನ ಸಾಯುತ್ತಿದ್ದ ಅಜ್ಜಿಯ ದೇಹದಿಂದ ಹೊಂಟ ಆ ದುರ್ಗಂಧ?... ಹುಚ್ಛು ಯೋಚನೆಗಳು... ಮುಂದೇನು ಇನ್ನು? ನಿದ್ದೆ ಯಾಕೆ ಬರಬಾರದು? ಶಾರದಾ-ಶ್ರೀಕಂಠ ಈ ಹಾಸಿಗೆಯ ಮೇಲೆಯೇ ...ಊ...ವನಜಾ-ವನಜಾ...

ಬಲು ಪ್ರಯಾಸಪಟ್ಟು ನಿದ್ದೆ ಹೋದೆನಾದರೂ ಮರುದಿನ ಬೆಳಿಗ್ಗೆ ನಾನೇ ಮೊದಲು ಎದ್ದಿದ್ದೆ.

ಅಡುಗೆಯವನು ಬಂದು ಹೇಳಿದ:

"ಸಾಹೇಬರು ಏಳೋದು ಎಂಟು ಘಂಟೆಗೆ. ನೀವು ಕಾಫಿ ತಗೊಳ್ಳಿ..." ಆ ಕಾಫಿ ರುಚಿಕರವಾಗಿತ್ತು.

ಎಂಟು ಘಂಟೆಗೆ ಶ್ರೀಕಂಠ ಮಲಗುವ ಕೊಠಡಿಯಿಂದ ಎದ್ದು ಬಂದ.

"ಅಂತೂ ಇದೀಯಲ್ಲಾ! ಹೊರಟೀ ಹೋಗಿರುತ್ತಿಯೇನೋ ಆಂತಿದ್ದೆ."

"ಹೋಗಿ ಮಾಡ್ಬೇಕಾದ್ದೇನು?"

"ಹುಂ...ನಿನ್ನೆ ರಾತ್ರೆ ನಾನು ಏನೇನ್ಮಾತಾಡ್ದೆ ಸ್ವಲ್ಪ ಹೇಳು."

"ಒಂದೂ ನೆನಪಿಲ್ಲಾ."

"Good. ಒಂದೂ ನೆನಪಿಟ್ಕೋ ಬೇಡ. ನಾನು ಹೇಳಿದ್ದೆಲ್ಲಾ ಸುಳ್ಳು."

ಅವನು ಹೇಳಿದ್ದೆಲ್ಲವೂ ಸತ್ಯವಾಗಿತ್ತು. ತನ್ನ ಮನಸ್ಸಿನ ಅಳುಕನ್ನು ತಾನೇ ಬಗೆಹರಿಸಲು ಆತ ಯತ್ನಿಸುತ್ತಿದ್ದ--ಅಷ್ಟೆ, ಆ

ಮೇಲೆ ಅನಿರೀಕ್ಷಿತವಾಗಿ ಅವನು ಕೇಳಿದ:

"ತಿಂಗಳಿಗೆ ಎಷ್ಟಪ್ಪಾ ನಿನ್ಸಂಪಾದ್ನೆ?"

"ಲೆಕ್ಕವಿಟ್ಟದ್ದರೆ ತಾನೆ?"