ಈ ಪುಟವನ್ನು ಪ್ರಕಟಿಸಲಾಗಿದೆ

"ಬ್ಯಾಂಕ್ ನಲ್ಲೇನೂ ಇಟ್ಟಿಲ್ಲ ಅನ್ನು."

ನನಗೆ ನಗುಬಂತು. ಆದರೆ ಶ್ರೀಕಂಠ ನಗಲಿಲ್ಲ. ಆತ ಏನನ್ನೋ ಯೋಚಿಸುತ್ತಲಿದ್ದ. ಆ ಬಳಿಕ ಆತ ಬಾಯ್ತೆರೆದಾಗ ನಿರ್ಧಾರದ ಸ್ವರವಿತ್ತು ಆ ಮಾತಿನಲ್ಲಿ.

"ಚಂದ್ರೂ... ಏನೂ ತಪ್ಪು ತಿಳ್ಕೋಬೇಡ. ನನ್ಜತೇಲೆ ಇರ್ತಿಯೇನು? ಯಾರಾದರೂ ನನ್ನ ಸಮೀಪದಲ್ಲೇ ಇದ್ದು ನಂಬಿಕಯ ಸ್ನೇಹಿತರಾಗಿರ್ಬೇಕು."

ಸಿಗರೇಟು ಹಚ್ಚುತ್ತಾ ಯೋಚಿಸಲೆತ್ನಿಸಿದೆ. ಆದರೆ ಮೆದುಳು ನಿಷ್ಕ್ರಿಯವಾಗಿತ್ತು.

" ನಿನಗೆ ಯಾವುದಕ್ಕೂ ಕಡಿಮೆಯಾಗೋದಿಲ್ಲ. ಪ್ರತಿ ತಿಂಗಳೂ ನಿನಗೆ ಬೇಕಷ್ಟು ಕೇಳಿ ತಗೋ. ಶಾರದಾ ಬರೋತನಕ ಈ ಮನೇಲೆ ಇರು. ಅಷ್ಟೊತ್ತಿಗೆ ನೀನು ಇರೋಕೆ ಬೇರೆ ಏರ್ಪಾಟು ಮಾಡ್ತೀನಿ. ಈಗ ನೀನಿರೋ ಜಾಗದಲ್ಲೆ ಇರ್ತೀಯಾದರೆ ಅದೂ ಸರಿಯೆ...... ಏನಂತೀಯಾ?

"ಮೌನವಾಗಿದ್ದರೆ ಏನರ್ಥ ಹೇಳು?"

"ಅರ್ಥ ಒಪ್ಪಿಗೇಂತ."

"ಇಲ್ಲ, ಪೂರ್ತಿ ಒಪ್ಪಿಗೆ."

"ಥ್ಯಾಂಕ್ಸ್ ಚಂದ್ರೂ....."

ಮತ್ತೆ ಜೀವನ ರಥ ಚಲಿಸಿತು.

ಅದು ಸೋಮಾರಿ ಜೀವನ, ಸುಖವಾಗಿ ತಿಂದುಣ್ಣುವುದು. ಒಳ್ಳೆಯ ಬಟ್ಟೆ ಬರೆ. ಸಂಜೆ ಜತೆಯಾಗಿಯೇ ವಿಹಾರ. ಶ್ರೀಕಂಠ ಹಗಲು ಸ್ವಲ್ಪ ಹೊತ್ತು ಮಾವನ ಮಳಿಗೆಯಲ್ಲಿರುತಿದ್ದ. ಶಾರದಾಳನ್ನು ಕಂಡು ಬರುತಿದ್ದ. ನನಗೆ ಅಷ್ಟು ಕೆಲಸವೂ ಇರಲಿಲ್ಲ.

ಒಮ್ಮೆ, ಲಕ್ಷಲಕ್ಷ ರೂಪಾಯಿ ಸಂಪಾದನೆಯಾಗುವ ಒಂದು ಸನ್ನಿವೇಶ ಒದಗಿ ಬಂತು. ಮಿಲಿಟರಿಯವರಿಗೆ ವಿಧವಿಧದ ಸಾಮಗ್ರಿ ಗಳನ್ನು ಪೂರೈಸುವ ಜವಾಬ್ದಾರಿ. ಮಿಲಿಟರಿ ಅಧಿಕಾರಿಯೊಬ್ಬ-- ಶ್ರೀಕಂಠನನ್ನು ಕಾಣಲು ಬಂದ. ಆತನನ್ನು ಇದಿರ್ಗೊಳ್ಳಲು ರಾಜ--