ಈ ಪುಟವನ್ನು ಪ್ರಕಟಿಸಲಾಗಿದೆ

ನಗರದ ಕಾರ್ಮಿಕರನ್ನು ಕಾಡಿದ್ದು, ಬಟ್ಟೆ ಕಾರಖಾನೆಗಳ

ಆರೆಂಟು ಸಾವಿರ ಜನರ ನಿರುದ್ಯೋಗದ ಪ್ರಶ್ನೆ ಮಾತ್ರವಲ್ಲ. ಇತರ ಉದ್ಯಮಗಳಲ್ಲೂ ಮಾಲೀಕರು ಅದೇ ನೀತಿಯನ್ನು ಅನುಸರಿಸಿದ್ದರು. ದುಡಿಯುವವರನ್ನು ಕಡಿಮೆ ಮಾಡುವುದು; ಶ್ರಮಭಾರ ಹೆಚ್ಚಿಸು ವುದು....

ಅದು ಎರಡು ಶಕ್ತಿಗಳೊಳಗೆ ನಡೆದ ಮಲ್ಲ ಯುದ್ಧ. ಎರಡು ಬಣ

ಗಳಲ್ಲೂ ಇದ್ದ ಐಕ್ಯ ಸೋಜಿಗವನ್ನುಂಟು ಮಾಡುತಿತ್ತು. ಮಾಲೀ ಕರು ಪ್ರತಿದಿನವೂ ಸೇರಿ ಮಂತ್ರಾಲೋಚನೆ ನಡೆಸುತಿದ್ದರು. ಕೇರಿ ಕೇರಿ ಗಳಲ್ಲಿ ಕೂಲಿಕಾರರ ಸಭೆಗಳಾಗುತಿದ್ದುವು.

ಶ್ರೀಕಂಠ ಕೇಳಿದ.

"ಯಾಕೋ ಚಂದ್ರೂ ಹೀಗಿದೀಯ?"

"ಮೈಲಿ ಹುಷಾರಾಗಿಲ್ಲ."

ಅದು ನಿಜವಾಗಿತ್ತು. ಕರುಳಿನ ಬಾಧೆ ನನ್ನ ನೆಮ್ಮದಿಯೆಲ್ಲ

ವನ್ನೂ ಕಸಿದುಕೊಂಡಿತ್ತು.

"ಊಟಿಗೆ ಹೋಗಿರ್ತೀಯೇನು ಬೇಕಾದರೆ? ವಿಶ್ರಾಂತಿ

ತಗೋ."

ಒಪ್ಪಿ ಬಿಡೋಣವೆನ್ನಿಸಿತು. ಆದರೆ ಊಟಿಗೆ ಕಳಿಸುವ ಯೋಜ

ನೆಯ ಹಿಂದೆ, ಮುಷ್ಕರದ ಸಮಯದಲ್ಲಿ ನನ್ನನ್ನು ಊರಿನಿಂದ ಹೊರ ಗಿಡುವ ಯತ್ನವನ್ನು ನಾನು ಸುಲಭವಾಗಿ ಕಂಡೆ. ನನ್ನದಲ್ಲದ ಈ ಲೋಕದಿಂದ ದೂರ ಹೋಗಿ ನಾಲ್ಕು ದಿನಗಳಿರಬೇಕು ಎನಿಸುತ್ತಿತ್ತು. ಆದರೂ ಅರ್ಧ ನೋಡಿದೊಂದು ಸ್ವಾರಸ್ಯಪೂರ್ಣ ನಾಟಕವನ್ನು ಅಲ್ಲಿಯೇ ಬಿಟ್ಟೇಳಲು ನನಗೆ ಇಷ್ಟವಾಗಲಿಲ್ಲ.

"ಬೇಡ ಕಂಠಿ. ಇಲ್ಲೇ ಔಷಧಿ ತಗೋತೀನಿ....."

ಶ್ರೀಕಂಠನ ಬಾಹ್ಯ ಜೀವನ ಮತ್ತು ಅಂತರಿಕ ಜೀವನ. ಹೊರಗೆ ಆತ ಮಾಲೀಕರ ಮುಖಂಡನಾಗಿದ್ದ ; ಒಂದು ಶಕ್ತಿಯ ಸೇನಾನಿ ಯಾಗಿದ್ದ ; ಆ ಕೈಗಾರಿಕೋದ್ಯಮದ ವೃದ್ಧರೂ ಕೂಡಾ ಶ್ರೀಕಂಠನ ಕರ್ತವ್ಯದಕ್ಷತೆಯಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಮನೆಯೊಳಗೆ?