ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೩೪೧

ಭೂಪ!"

" ಯಾವಾಗ್ಲೂ ಬ್ಯಾಸ್ಗೇನೆ ಇದ್ಬಾತಾ? ಮಳೆ ಬತ್ತದೆ ಕಣ್ರಪೋ"

"ಶಾರದಾ ಸತ್ತೋದ್ಲು...."

"ಕರುಳಿನ ಬಾಧೆ--ಒಂದ್ಸಾರಿ ಸರಿಯಾಗಿ ಪರೀಕ್ಷಿಸ್ಬೇಕು."

"ಮನುಷ್ನಾದ್ಮೇಲೆ ಜೀವನದಲ್ಲಿ ಒಂದು ಶ್ರದ್ಧೆ--ನಂಬುಗೆ
ಇರಬೇಕು ಚಂದ್ರಶೇಖರ್."

....ಗತ ಕಾಲದ ಸ್ಮರಣೆಗಳ ಈ ಸುರುಳಿ....

"ಅಷ್ಟು ಶಕ್ತಿ ಬಂತೇನೋ ಭಡವಾ?"

ಜುಟ್ಟು-ಕ್ರಾಪು-

"ಇಸ್ಕೂಲ್ಗೆ ಓಯ್ತವ್ನಾ?"

"ಕೈಲಿ ಕೆಂಪು ಬಾ-ವು-ಟಾ... ಓಹ್ಪೋ..!"

ನನ್ನಿಂದಾಗದು. ನಾನಿನ್ನು ಏನನ್ನು ಬರೆಯಲಾರೆ.

ಸಮಾಜದ ಏಣಿಯ ಕೆಳ ಹಂತದಲ್ಲಿ ನಾನು ಹುಟ್ಟಿದೆ. ಅಲ್ಲಿಂದ
ನಡು ಹಂತಕ್ಕೆ ಬಂದೆ. ಆ ಮೇಲೆ ಮೇಲೆ ಮೇಲಣ ಹಂತ...ಏಣಿ ಇದೆ
ಎಂದು ಧೈಯರ್ವಾಗಿ ಮೇಲೇರುವ ಯತ್ನ.....ಆದರೆ ಬಾರಿ
ಬಾರಿಗೂ ಏಣಿ ಬಾರಿ ಹೋಗುವುದು.

ಆ ಮೇಲೆ ಮುಗಿಲಿಗೆ ನೇತಾಡುವ-ಗಾಳಿ ಸೇವಿಸುತ್ತಾ.

ಈ ಪ್ರಪಂಚದಲ್ಲಿ ಇಷ್ಟು ದಿನ ಇದ್ದು ನಾನೇನು ಮಾಡಿದ
ಹಾಗಾಯಿತು? ಎಷ್ಟೋಂದು ತಪ್ಪುಗಳಾಗಲಿಲ್ಲ ನನ್ನಿಂದ! ತಿಳವಳಿಕೆ
ಇಲ್ಲದೆ ನಾನು ತಪ್ಪುಗಲನ್ನು ಮಾಡಿದ್ದೆ!

ನನ್ನ ಕೆಲಸದಲ್ಲಿ ನಾಳೆಯ ದಿನ ಜನ ಮೆಚ್ಚುವಂಥಾದ್ದು
ಏನಾದರೂ ಇತ್ತೆ? ತೆಗಳುವಂಥಾದ್ದು?

ನಾನೀಗ ಒಬ್ಬಂಟಿಗನಾಗಿ ಗೋರಿಗೆ ಹೋಗುತಿದ್ದೇನೆ--ನನ
ನೆನಪುಗಳೊಡನೆ.

ವನಜ---ವನಜ......