ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತಕ ಕೋಸಲೇಂದ್ರ : ನನ್ನನ್ನು ನೀವು ಸ್ವಷ್ಟ ಜೀವಿಯೆಂದು ಕರೆದಿರಿ, ನಿಮ್ಮದು ಅದೆಂಥ ಜೀವ ? ನೀವು ಪಿನ್ ಮಾಡಿಕೊಂಡಿದ್ದ ಆ ಸುತ್ತಿಗೆಯ ಚಿನ್ನ ಏನನ್ನು ಸೂಚಿಸುತ್ತದೆ ? ಮಾರ್ಕ್ಸವಾದದ ಸ್ವಪ್ನ ವನ್ನಷ್ಟೆ ? ಮೃಣಾಲಿನಿ : (ಕೋಪದಿಂದ) ಮಾರ್ಕ್ಸವಾದವು ಸ್ವಪ್ನವೆಂದು ಹೇಳುವವರು ಕಣ್ಣಿಲ್ಲದವರು ! ಅದು ದಾರುಣ ವಾಸ್ತವವಾದ, ನಗ್ನ ಸತ್ಯ, ನಿರ್ದಾಕ್ಷಿಣ್ಯ ಮೀಮಾಂಸೆ, ಕ್ರಾಂತಿಯ ಕಹಳೆ, ಅದು ಧರ್ಮದ ಅಫೀನಲ್ಲ, ಆತ್ಮದ ಕ್ಲೋರೊಫಾರ್ಮಲ್ಲ! ರೋಹಿಣಿ : ( ಅವಸರದಿಂದ ) ಹುಶ್, ಮೃಣಾಲಿನಿ ! ಸಾಕುನಾಡು ! ನಿನ್ನ ಮಾರ್ಕ್ಸವಾದವನ್ನು ನಾಳೆ ನಮ್ಮೊಡನೆ ಬಾಯಿತುಂಬ ಚರ್ಚಿಸುವಿಯಂತೆ ! ಇಲ್ಲಿ ಮಂದಿಯೊಡನೆ ವಾದ ಹೂಡುವದು ಬೇಡ. ಕೋಸಲೇಂದ್ರ : ( ನಗುತ್ತ) ಹಾಗೆ ತಾವು ಭಯಪಡಬೇಕಾದುದಿಲ್ಲ. ಮನಸ್ಸು ಬಿಚ್ಚಿದರೆ ಮಾತ್ರ ಮಾತು ಮಲ್ಲಿಗೆಯಾಗುವದು. ಇಲ್ಲದೆ ಹೋದರೆ ಅದೆಲ್ಲಿಗೆ ಮುಟ್ಟಿತು ? ಸಂಪ್ರದಾಯದಲ್ಲಿ ಸಿಕ್ಕು ಬಾಯಿ ಬಿಗಿ ಹಿಡಿದು ಹಿಡಿದು ಸಮಾಜವು ಸ್ಫೋಟವಾಗುವ ಸಮಯ ಬಂದಿದೆ ಈಗ ! ನೀವು, ನೀವು ... ( ರುಕ್ಷ್ಮಿಣಿದೇವಿಯರ ಕಡೆಗೆ ತಿರುಗಿ) ಇವರ ಹೆಸರೇನು ರುಕ್ಕಿಣಿದೇವಿ ? ರುಕ್ಷ್ಮಿಣಿದೇವಿ : (ವ್ಯಂಗ್ಯದಿಂದ) ಕಾ:ಮೈಡ್ ಮೃಣಾಲಿನಿ. ಕೋಸಲೇಂದ್ರ: ಕಾ:ಮೋಡ್ ಮೃಣಾಲಿನಿ ! ನಿಮ್ಮ ಸ್ಪಷ್ಟೋಕ್ತಿಯನ್ನು ನಾನು ಒಪ್ಪಿದೆ. ಆದರೆ ನಿಮ್ಮ ಅಭಿಪ್ರಾಯವನ್ನಲ್ಲ. ಮಾರ್ಕ್ಸವಾದವು ಸೃಷ್ಣ ವಲ್ಲವೆಂದು ನೀವು ಹೇಳುತ್ತೀರಾ ? 'ಪ್ರತಿಯೊಂದು ವಾದದಲ್ಲಿ ಸ್ವಪ್ನ-ಸತ್ಯಗಳು ತಳಕುಗೊಂಡಿರುವವೆಂದು ನಾನು ನಿಮಗೆ ತೋರಿಸಿ ಕೊಟ್ಟರೆ ? ಮೃಣಾಲಿನಿ : ( ಸಿಟ್ಟಿನಿಂದ) ಕವಿವರ್ಯರೆ! ಇನ್ನು ನಾನು ಮಾತನಾಡು ವದಿಲ್ಲ. ಸುಮ್ಮನೆ ನನ್ನ ಮಾತಿನಿಂದ ಉಳಿದವರಿಗೆ ತಲೆಬೇಸರ. ಇನ್ನು ಮುಂದೆ ಮೇಲುವರ್ಗದ ಪ್ರಾಣಿಗಳ ಸಹವಾಸದಲ್ಲಿರುವ ತನಕ ಬಾಯಿಗೆ ಹೊಲಿಗೆ ಹಾಕಿಕೊಳ್ಳುತ್ತೇನೆ !